Home District ದಿನದಿಂದ ದಿನಕ್ಕೆ ರಂಗೇರಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ!

ದಿನದಿಂದ ದಿನಕ್ಕೆ ರಂಗೇರಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ!

165
0
SHARE

ಚಿತ್ರದುರ್ಗ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಒಬ್ಬೊಬ್ಬ ಅಭ್ಯರ್ಥಿಯು ವಿಭಿನ್ನವಾಗಿ ಮತಯಾಚನೆ ಮಾಡುತ್ತಿದ್ದಾರೆ. ಇಲ್ಲೊಬ್ಬ ಅಭ್ಯರ್ಥಿ ಕೋವಿಡ್ ನ ನಿಯಮಗಳನ್ನು ಪಾಲಿಸಿ ಹೇಗೆ ಮತಯಾಚನೆ ಮಾಡುತ್ತಿದ್ದಾರೆ ಎಂದು ಹೇಳ್ತಿವಿ ನೋಡಿ.

ಕೋಟೆ ನಾಡು ಚಿತ್ರದುರ್ಗದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಚುನಾವಣೆ ಕಾವು ದಿನ ದಿನಕ್ಕೂ ಏರುತ್ತಿದೆ. ಇಂದು ಜಿಲ್ಲಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಚಳ್ಳಕೆರೆ ತಾಲೂಕಿನ ಕೋರ್ಲಕುಂಟೆ ತಿಪ್ಪೆಸ್ವಾಮಿ ಚಳ್ಳಕೆರೆ ತ್ಯಾಗರಾಜ ನಗರದ ಅಂಚೆ ಕಚೇರಿ ಬಳಿ ಅವರು ಸಾಹಿತ್ಯ ಪರಿಷತ್ ನ ಸದಸ್ಯರು ಹಾಗೂ ಅಜೀವ ಸದಸ್ಯರ ಮತಗಳನ್ನು ಕೇಳುವುದಕ್ಕೆ ಮುಂದಾಗಿದ್ದು ಅಂಚೆ ಮತಗಳ ಮೇಲೆ ಕಣ್ಣಿಟ್ಟಿರುವ ಅವರು ಅಂಚೆ ಕಾರ್ಡ್ ನಲ್ಲಿ ಸದಸ್ಯರ ಅಥವ ಮತದಾರರ ಹೆಸರು ವಿಳಾಸ ವನ್ನು ಬರೆದು ತಮ್ಮ ಆಶಯಗಳು ಹಾಗೂ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕು ಮಾಡಿದರೆ ನಾನೇನು ಕೆಲಸ ಮಾಡುತ್ತೆನೆ ಎಂದು ಹೇಳುವ ಮೂಲಕ ಮತ ಯಾಚನೆಯನ್ನು ಮಾಡುತ್ತಿದ್ದಾರೆ. ಕೋವಿಡ್ ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಅಂಚೆಯ ಕಾರ್ಡನ್ನು ಅಂಚೆ ಪೆಟ್ಟಿಗೆಯಲ್ಲಿ ಪೋಸ್ಟ್ ಮಾಡುವ ಮೂಲಕ ಮತಗಳ ಯಾಚನೆಗೆ ಮುಂದಾಗಿದ್ದಾರೆ.

LEAVE A REPLY

Please enter your comment!
Please enter your name here