NSS ಅಭಿವೃದ್ಧಿಯಲ್ಲಿ ಕರ್ನಾಟಕವು ಭಾರತದಲ್ಲೇ ಒಂದನೇ ಸ್ಥಾನಕ್ಕೆ ತಲುಪಿದೆ: ಸಚಿವ ಕೆ. ಸಿ ನಾರಾಯಣಗೌಡ

ಬೆಂಗಳೂರು

ಬೆಂಗಳೂರು: ಉತ್ತಮ ಸಮಾಜ ನಿರ್ಮಾಣದಲ್ಲಿ NSS ಪಾತ್ರ ಅಪಾರ ಎಂದು ಸಚಿವ ಕೆ. ಸಿ ನಾರಾಯಣಗೌಡ ಅವರು ಹೇಳಿದರು. ವಿಕಾಸೌಧದ ಸಭಾಂಗಣದಲ್ಲಿ ಆಯೋಜಿಸಿದ್ದ ಸಲಹಾ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 2021-22ರ ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳ ಕುರಿತು 2022-23 ರ ಸಲಹಾ ಸಮಿತಿಯಲ್ಲಿ ಗಾಂಧೀಜಿಯವರ ತತ್ವಗಳನ್ನು ಪಾಲಿಸುತ್ತಾ ಎನ್.ಎಸ್.ಎಸ್‌ ಅಭಿವೃದ್ಧಿಯಲ್ಲಿ ಕರ್ನಾಟಕವು ಭಾರತದಲ್ಲೇ ಒಂದನೇ ಸ್ಥಾನಕ್ಕೆ ತಲುಪಿದೆ.

ಎನ್.ಎಸ್.ಎಸ್‌ ಇನ್ನಷ್ಟು ಸೇವೆಗಳ ಮೂಲಕ ಅಭಿವೃದ್ಧಿಯತ್ತ ಸಾಗಲಿ ಎಂದು ಸಚಿವರು ಆಶಿಸಿದರು. ಸಭೆಯಲ್ಲಿ ರಾಜ್ಯ ಎನ್‌.ಎಸ್‌.ಎಸ್ ಅಧಿಕಾರಿಗಳಾದ ಪ್ರತಾಪ್‌ ಲಿಂಗಯ್ಯ, ಎ‌ನ್‌.ಎಸ್‌.ಎಸ್ ಪ್ರಾಂತೀಯ ಕೇಂದ್ರದ ನಿರ್ದೇಶಕರಾದ ಖಾದ್ರಿ ನರಸಿಂಹಯ್ಯ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರು ಗೋಪಾಲ್‌ ಕೃಷ್ಣ ವಿಭಾಗ ಮುಖ್ಯಸ್ಥರು ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published.