ಕರ್ನಾಟಕದ ಹಿರಿಯ ಅಥ್ಲೀಟ್ ಪೂವಮ್ಮಗೆ 2 ವರ್ಷ ನಿಷೇಧ..! ಯಾಕೆ ಗೊತ್ತಾ..?

ಕ್ರೀಡೆ

ನವದೆಹಲಿ: ಏಷ್ಯನ್ ಗೇಮ್ಸ್ ಪದಕ ವಿನ್ನರ್ ಪೂವಮ್ಮ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಲುಬಿದ್ದಿದಾರೆ. ಪೂವನ್ನ ಅವರನ್ನ 2 ವರ್ಷ ನಿಷೇಧಿಸಲಾಗಿದೆ. ಈ ಹಿಂದೆ ಪೂವಮ್ಮ 3 ತಿಂಗಳವರೆಗೆ ನಿಷೇಧಕ್ಕೆ ಒಳಪಟ್ಟಿದ್ರು. ಅಲ್ಲದೇ ನಿಷೇಧ ರದ್ದು ಮಾಡುವಂತೆ ಮೇಲ್ಮನವಿ ಸಲ್ಲಿಸಿದ್ದರು. ಕಳೆದ ವರ್ಷ ಫೆಬ್ರವರಿಯಲ್ಲಿ ಪಟಿಯಾಲದಲ್ಲಿ ನಡೆದಿದ್ದ ಇಂಡಿಯನ್ ಗ್ರ್ಯಾನ್ಪ್ರಿ ಕೂಟದಲ್ಲಿ ಪೂವಮ್ಮ ಭಾಗವಹಿಸಿದ್ರು. ಪೂವಮ್ಮ ಪರೀಕ್ಷೆಗೆ ನೀಡಿದ್ದ ಮಾದರಿಯಲ್ಲಿ ನಿಷೇಧಿತ ಮೆಥೈಲ್ ಹೆಕ್ಸಾನೀಮೈನ್ ಮದ್ದಿನ ಅಂಶ ಬೆಳಕಿಗೆ ಬಂದಿತ್ತು.

ಹೀಗಾಗಿ ಈ ವರ್ಷದ ಜೂನ್ನಲ್ಲಿ ಪೂವಮ್ಮ ಅವರಿಗೆ ಮೂರು ತಿಂಗಳ ನಿಷೇಧ ಶಿಕ್ಷೆ ವಿಧಿಸಲಾಗಿತ್ತು. ಈ ಆದೇಶ ಪ್ರಶ್ನಿಸಿ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ ಮೇಲ್ಮನವಿ ಸಲ್ಲಿಸಿತ್ತು. ಮನವಿ ಪುರಸ್ಕರಿಸಿದ ಎಡಿಎಪಿ ಶಿಕ್ಷೆಯನ್ನು ಎರಡು ವರ್ಷಕ್ಕೆ ವಿಸ್ತರಿಸಿದೆ. 2021ರ ಫೆಬ್ರವರಿ 18ರಂದು ಪೂವಮ್ಮ ಅವರಿಂದ ಮಾದರಿ ಸಂಗ್ರಹಿಸಲಾಗಿತ್ತು. ಅಂದಿನಿಂದ ಅವರು ಸ್ಪರ್ಧಿಸಿದ್ದ ಎಲ್ಲ ಪಂದ್ಯದ ಫಲಿತಾಂಶಗಳನ್ನು ಮಾನ್ತೆ ಮಾಡಲಾಗುವುದಿಲ್ಲ, ಪದಕಗಳನ್ನು ಸಹ ಪೂವಮ್ಮ ಹಿಂದಿರುಗಿಸಬೇಕಾಗುತ್ತೆ.