Home District ಹತ್ಯೆ ಮಾಡಿ ನೇಣು ಬಿಗಿದ ಕಿಡಿಗೇಡಿಗಳು!

ಹತ್ಯೆ ಮಾಡಿ ನೇಣು ಬಿಗಿದ ಕಿಡಿಗೇಡಿಗಳು!

ಹತ್ಯೆ ಮಾಡಿ ನೇಣು ಬಿಗಿದ ಕಿಡಿಗೇಡಿಗಳು!

392
0

ಚಾಮರಾಜನಗರ : ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಮರಕ್ಕೆ ನೇತು ಹಾಕಿದ ಘಟನೆ ಚಾಮರಾಜನಗರ ತಾಲ್ಲೂಕಿನ ಉಡಿಗಾಲ ಸಮೀಪದ ಚಿಕ್ಕಕೆಂಪನಹುಂಡಿ ಸಮೀಪದ ಜಮೀನಿನಲ್ಲಿ ನಡೆದಿದೆ.ಗ್ರಾಮದ ಮಾದೇ ಗೌಡ ರ ಪುತ್ರ ಶಿವಣ್ಣ (25) ಎಂಬ ವ್ಯಕ್ತಿಯೇ ಕೊಲೆಗೀಡಾಗಿದ್ದು, ಈತನನ್ನು ಶನಿವಾರ ರಾತ್ರಿ 8 ಗಂಟೆಯ ಸಮಯದಲ್ಲಿ ಜಮೀನಿಗೆ ಬಂದವನನ್ನು ಕೊಲೆ ಮಾಡಿದ ಕಿಡಿಗೇಡಿಗಳು ಪಕ್ಕದಲ್ಲೇ ಇದ್ದ ಮರಕ್ಕೆ ನೇತು ಹಾಕಿದ್ದಾರೆ.

ಕಾಲಿಗೆ ಹಗ್ಗ ಕಟ್ಟಿದ್ದಲ್ಲದೆ ಕಣ್ಣಿಗೆ ಖಾರದ ಪುಡಿ ಎರಚಿದ್ದು, ವೇಸ್ಟ್ ಬಟ್ಟೆ ಬಾಯಿಗೆ ತುರುಕಿದ್ದು ಗೋಚರಿಸುತ್ತಿದೆ. ಪತ್ನಿಯಿಂದ ದೂರವಿದ್ದ ಶಿವಣ್ಣನಿಗೆ ಗ್ರಾಮದಲ್ಲಿ ಯಾರೂ ಶತ್ರುಗಳಿರಲಿಲ್ಲ ಆದರೂ ಶಿವಣ್ಣನ ಕೊಲೆಯಾಗಿರುವುದು ಹಲವಾರು ಅನುಮಾನಕ್ಕೆ ಕಾರಣವಾಗುತ್ತಿದೆ.ಉಡಿಗಾಲ ಗ್ರಾಮದಲ್ಲಿ ಶ್ರೀ ಪಟ್ಟಲದಮ್ಮ ದೇವಾಲಯದಲ್ಲಿ ಕಳ್ಳರು ಕಳ್ಳತನ ಮಾಡುವ ಸಮಯದಲ್ಲಿ ಶಿವಣ್ಣ ನೋಡಿರಬಹುದು ಆ ಕಾರಣಕ್ಕೆ ಕಳ್ಳರು ಶಿವಣ್ಣನನ್ನು ಹತ್ಯೆ ಮಾಡಿರಬಹುದೆಂದು ಶಂಕಿಸಲಾಗಿದೆ.

ಮೃತ ದೇಹವನ್ನು ಆತನ ಜಮೀನಿನ ಬಳಿಯೇ ಮರಕ್ಕೆ ನೇತು ಹಾಕಿದ್ದರ ಹಿನ್ನಲೆ ಏನೆಂದು ತಿಳಿದಿಲ್ಲವಾದರೂ ನಿಗೂಢ ಹತ್ಯೆಯ ಹಿಂದೆ ಹಲವಾರು ಅನುಮಾನದ ಹುತ್ತ ಬೆಳೆಯುತ್ತಿದೆ ಸರಿಯಾದ ರೀತಿಯಲ್ಲಿ ತನಿಖೆ ನಡೆಸಿದಾಗ ಮಾತ್ರ ಸತ್ಯ ಸಂಗತಿ ಹೊರಬರಲಿದೆ.ಘಟನಾ ಸ್ಥಳಕ್ಕೆ ಉಡಿಗಾಲ ಉಪ ಪೊಲೀಸ್ ಠಾಣೆಯ ಸಿಬ್ಬಂದಿಗಳು ಆಗಮಿಸಿ, ವೀಕ್ಷಣೆ ಮಾಡಿ ಮಹಜರ್ ನಡೆಸುತ್ತಿದ್ದಾರೆ.

VIAಹತ್ಯೆ ಮಾಡಿ ನೇಣು ಬಿಗಿದ ಕಿಡಿಗೇಡಿಗಳು!
SOURCEಹತ್ಯೆ ಮಾಡಿ ನೇಣು ಬಿಗಿದ ಕಿಡಿಗೇಡಿಗಳು!
Previous articleಹಿಟ್ ಅಂಡ್ ರನ್ ಗೆ ವೃದ್ದ ಬಲಿ!
Next articleಸೋಂಕಿಗೆ ಹೆದರಿದ ಜನ ಏಣಿಯಲ್ಲಿ ಶವ ಸಾಗಣೆ!

LEAVE A REPLY

Please enter your comment!
Please enter your name here