ಕೋವಿಡ್ ಸಾವಿನ ಸಂಖ್ಯೆ ಮುಚ್ಚಿಟ್ಟ ಆರೋಪ: ಕೇಂದ್ರದ ವಿರುದ್ಧ ಕಿಡಿಕಾರಿದ ರಾಮಲಿಂಗಾರೆಡ್ಡಿ

ರಾಜಕೀಯ

ಬೆಂಗಳೂರು: ಕೋವಿಡ್ ಸಾವಿನ ಸಂಖ್ಯೆ ಮುಚ್ಚಿಟ್ಟ ಆರೋಪ ವಿಚಾರವಾಗಿ ಕಾಂಗ್ರೆಸ್ ಮುಖಂಡ ರಾಮಲಿಂಗಾರೆಡ್ಡಿ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ. ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಾನು ಕೋವಿಡ್ ಡೆತ್ ಬಗ್ಗೆ ಪ್ರಶ್ನೆ ಕೇಳಿದ್ದೆ. ಅಂಕಿ ಅಂಶಗಳ ಸಮೇತ ಸಾವಿನ ಸಂಖ್ಯೆ ಎತ್ತಿದ್ದೆ. ಕೋವಿಡ್ ಸಾವಿನ ಸಂಖ್ಯೆ ಮುಚ್ಚಿಟ್ಟಿದ್ದರು. ಈಗ ಡಬ್ಲ್ಯೂ‌ಹೆಚ್​ಒನವರು ವರದಿ ಕೊಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಳದ ವರದಿ ಕೊಟ್ಟಿದ್ದಾರೆ. ಇವರು ಸಾವಿನ ಸಂಖ್ಯೆ ಕಡಿಮೆ ನೀಡಿದ್ದರು ಎಂದು ರಾಮಲಿಂಗಾ ರೆಡ್ಡಿ ಆರೋಪಿಸಿದರು.

ನಾನು 42 ಲಕ್ಷ ಜನ ಸಾವನ್ನಪ್ಪಿದ್ದಾರೆ ಎಂದಿದ್ದೆ. ವರದಿಯಲ್ಲಿ 47 ಲಕ್ಷ ಜನ ಸತ್ತಿದ್ದಾರೆಂದಿದ್ದೆ. ಕೇಂದ್ರ ಸರ್ಕಾರ ಈಗ ಏನು‌ ಹೇಳುತ್ತದೆ. 2019ಕ್ಕೆ ಹೋಲಿಕೆ ಮಾಡಿದರೆ 2021ರಲ್ಲಿ ಹೆಚ್ಚು ಸಾವನ್ನಪ್ಪಿದ್ದಾರೆ. ಒಂದೆರಡು ಮಾಧ್ಯಮ ಬಿಟ್ಟರೆ ಎಲ್ಲರೂ ವರದಿ ಮಾಡಿದ್ದಾರೆ. ಕೋವಿಡ್ ಸಮರ್ಥವಾಗಿ ಎದುರಿಸಿದ್ದೇವೆ ಎಂದಿದ್ದರು, ಜಂಭ ಕೊಚ್ಚಿಕೊಳ್ಳುತ್ತಿದ್ದರು. ಯಾವ ಸಾಂಕ್ರಾಮಿಕ ರೋಗದ ವೇಳೆಯೂ ಇಷ್ಟು ಸಾವಾಗಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Leave a Reply

Your email address will not be published.