ಕುಮಾರಸ್ವಾಮಿಯನ್ನು ಸಿಎಂ ಮಾಡುವುದೇ ನಮ್ಮ ಗುರಿ: ಜೆಡಿಎಸ್ ಮುಖಂಡ ವಿಎನ್ ಮಂಜುನಾಥ ಹೇಳಿಕೆ

ಜಿಲ್ಲೆ

ದೊಡ್ಡಬಳ್ಳಾಪುರ: ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವುದು ನಮ್ಮ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ದೊಡ್ಡಬಳ್ಳಾಪುರದಲ್ಲಿ ನನಗೆ ಟಿಕೇಟ್ ನೀಡಿದರೂ ಸರಿ ಬಿ.ಮುನೇಗೌಡರಿಗಾದರೂ ಟಿಕೇಟ್ ಕೊಟ್ಟರೂ ಸರಿ ಕಳೆದ 25 ವರ್ಷಗಳಿಂದ ಇಲ್ಲಿ ಗೆಲ್ಲಲಾಗದ ಜೆಡಿಎಸ್ ಪಕ್ಷವನ್ನು ಗೆಲ್ಲಿಸುವುದು ನನ್ನ ಪರಮೋಚ್ಚ ಗುರಿಯಾಗಿದೆ ಎಂದು  ಮುಂಬರುವ ವಿಧಾನಸಬಾ ಚುನಾವಣೆಯ ಜೆಡಿಎಸ್ ಟಿಕೇಟ್ ಆಕಾಂಕ್ಷಿ ವಿ.ಎನ್.ಮಂಜುನಾಥ್ ಅವರು ಹೇಳಿದರು.

ನಗರದ ನೆಲದಾಂಜನೇಯ ಸ್ವಾಮಿ ದೇವಾಲಯದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಈ ತಾಲೂಕಿನಲ್ಲಿ 2001 ರಿಂದಲೂ ಮೊದಲ ಬಾರಿಗೆ ಜೆಡಿಎಸ್ ಪಕ್ಷವನ್ನು ಕಟ್ಟುವಲ್ಲಿ ಯಶಸ್ವಿಯಾಗಿದ್ದೇನೆ. ಅಂದಿನ ದಿನಗಳಲ್ಲಿ ಆರ್.ಎಲ್.ಜಾಲಪ್ಪನವರ ಹಿಡಿತದಲ್ಲಿ ಇದ್ದ ಕ್ಷೇತ್ರದಲ್ಲಿ ಮೊದಲ ಬಾರಿಗೆ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಹೆಚ್ಚು ಸ್ಥಾನ ತಂದು ಕೊಡುವ ಮೂಲಕ ಆರ್.ಎಲ್.ಜಾಲಪ್ಪನವರ ಕ್ಷೇತ್ರದ ಮೇಲಿನ ಹಿಡಿತವನ್ನು ಜೆಡಿಎಸ್ ಕಡೆ ತಿರುಗಿಸು ಕೆಲಸ ಅಂದಿಗೆ ಮಾಡಿದ್ದೆ.

Leave a Reply

Your email address will not be published.