
ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ: 7 ಸಿಬ್ಬಂದಿಗೆ ವರ್ಗಾವಣೆ ಶಿಕ್ಷೆ ನೀಡಿದ ಇಲಾಖೆ
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿದ್ದ ಅಕ್ರಮದ ತನಿಖೆಯ ಹೊಣೆ ಹೊತ್ತುಕೊಂಡಿದ್ದ ಐಪಿಎಸ್ ಅಧಿಕಾರಿ ಎಸ್.ಮುರುಗನ್ ಅವರು ನಿನ್ನೆ ನೀಡಿದ್ದ ವರದಿಯನ್ನು ಬೆಂಗಳೂರಿನ ಕಾರಾಗೃಹ ಇಲಾಖೆ ಗಂಭೀರವಾಗಿ ಪರಿಶೀಲಿಸಿದೆ. ಅಕ್ರಮಕ್ಕೆ ಸಾಥ್ ಕೊಟ್ಟಿರುವ ಜೈಲಿನ ಏಳು ಮಂದಿ ಸಿಬ್ಬಂದಿ ವಿರುದ್ಧ ಇಲಾಖೆ ಶಿಸ್ತು ಕ್ರಮ ಜರುಗಿಸಿದ್ದು, ರಾಜ್ಯದ ವಿವಿಧ ಜೈಲುಗಳಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಎನ್.ಅಶೋಕ್, ಎಸ್.ಎನ್.ರಮೇಶ್, ಶಿವಾನಂದ ಕೆ. ಗಾಣಿಗಾರ್, ಉಮೇಶ್ ಆರ್.ದೊಡ್ಡಮನಿ, ಲೋಕೆಶ್ ಪಿ., ಭೀಮಣ್ಣ, ದೇವಪ್ಪ ನೆದಲಗಿ ಹಾಗೂ ಮಹೇಶ್ ಸಿದ್ದನಗೌಡ ಪಾಟೀಲ್ ಕಲಬುರಗಿ ಜೈಲಿಗೆ ವರ್ಗಾವಣೆ ಆಗಿದ್ದಾರೆ.