Home Health ಜಿಲ್ಲಾಆಸ್ಪತೆಯ ವೈದ್ಯರೇ ನನ್ನ ತಾಯಿ ನನ್ನ ಅಕ್ಕನ ಸಾವಿಗೆ ಕಾರಣ; ಮಗಳ ಕಣ್ಣಿರ ಕಥೆ!

ಜಿಲ್ಲಾಆಸ್ಪತೆಯ ವೈದ್ಯರೇ ನನ್ನ ತಾಯಿ ನನ್ನ ಅಕ್ಕನ ಸಾವಿಗೆ ಕಾರಣ; ಮಗಳ ಕಣ್ಣಿರ ಕಥೆ!

ಜಿಲ್ಲಾಆಸ್ಪತೆಯ ವೈದ್ಯರೇ ನನ್ನ ತಾಯಿ ನನ್ನ ಅಕ್ಕನ ಸಾವಿಗೆ ಕಾರಣ; ಮಗಳ ಕಣ್ಣಿರ ಕಥೆ!

660
0

ಚಾಮರಾಜನಗರ; ಸರಿಯಾದ ಸಮಯಕ್ಕೆ ಆಕ್ಸಿಜನ್ ಕೊಟ್ಟಿದ್ದರೆ ನನ್ನ ತಾಯಿ ನನ್ನ ಅಕ್ಕ ಬದುಕುಳಿಯುತ್ತಿದ್ದರು. ಜಿಲ್ಲಾಆಸ್ಪತೆಯ ವೈದ್ಯರೇ ನನ್ನ ತಾಯಿ ನನ್ನ ಅಕ್ಕನ ಸಾವಿಗೆ ಕಾರಣ; ಮಗಳ ಕಣ್ಣಿರ ಕಥೆ.

ಸರಿಯಾದ ವೇಳೆಗೆ ಆಕ್ಸಿಜನ್ ಸಿಗದೆ ನರಳಾಡಿ ಕೊರೊನಾ ಸೋಂಕಿತ ವ್ಯಕ್ತಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆ ವೈದ್ಯರ ವಿರುದ್ಧ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂರು ದಿನಗಳ ಹಿಂದೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ನಿವಾಸಿ ನಾಗಮ್ಮ (62) ಮಂಜುಳ(35) ಎಂಬ ವ್ಯಕ್ತಿ ಆಕ್ಸಿಜನ್ ಸಿಗದೆ ನರಳಾಡಿ ಸಾವನ್ನಪ್ಪಿದ್ದರು.

ಈ ಸಾವಿಗೆ ವೈದ್ಯರೆ ಕಾರಣ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ. ನಮ್ಮತಾಯಿ ಮತ್ತು ಅಕ್ಕನ ಸಾವಿಗರ ಆಸ್ಪತ್ರೆ ವೈದ್ಯರೇ ಕಾರಣ. ಸರಿಯಾದ ಸಮಯಕ್ಕೆ ಆಕ್ಸಿಜನ್ ನೀಡಿ ಚಿಕಿತ್ಸೆ ಕೊಟ್ಟಿದ್ದರೆ ಬದುಕುಳಿಯುತ್ತಿದ್ದ ಎಂದು ಕಣ್ಣೀರು ಹಾಕಿದ್ದಾರೆ.

ಆಸ್ಪತ್ರೆಯಲ್ಲಿ ಸರಿಯಾದ ರೀತಿಯಲ್ಲಿ ರೋಗಿಗಳು ನೋಡಿಕೊಳ್ಖುವುದಿಲ್ಲ ಕರ್ತವ್ಯ ಇರುವಂತಹ ನರ್ಸ್ ಗಳು ಮೊಬೈಲ್ ನಲ್ಲಿ ‌ಗ್ಯಾಮ್ ಆಡುವುದು ಟಿಕಾಟಾಕಾ ಮಡುವುದು ಮಾತ್ರ ಮಾಡುತ್ತಾರೆ ಒರತು ರೋಗಿಗಳಿಗೆ ಸ್ಪಂದನ ಮಾಡುವುದಿಲ್ಲ ಎಂದು ಮೃತ ನಾಗಮ್ಮ ಅಳಿಯ ಚಿನ್ನ ಸ್ವಾಮಿ ನೋವು ತೊಡಿಕೊಟ್ಟಿದ್ದಾರೆ.

ಆಮ್ಲಜನಕ ಕೊರತೆಯಿಂದ ಸೋಂಕಿತರು ನಿಧನರಾಗಿರುವುದಕ್ಕೆ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ ಸಚಿವರು ಮತ್ತು ಅಧಿಕಾರಿಗಳ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಕಾರಿಗೆ ಸುಪ್ರೀಂಕೋರ್ಟ್ ವಕೀಲ ಎ.ರಮೇಶ್ ದೂರು ನೀಡಿದ್ದಾರೆ.ಆಸ್ಪತ್ರೆಯಲ್ಲಿ ಮೇ 2 ಮತ್ತು 3 ನಡುವೆ ವೈದ್ಯರು ಮತ್ತು ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಸುಮಾರು 24 ಜನರು ಸಾವನ್ನಪ್ಪಿದ್ದಾರೆ. ಆಮ್ಲಜನಕ, ಕೊರತೆಯಿಂದ ಸಾವು ಸಂಭವಿಸಿರುವುದನ್ನು ನಾನು ತಿಳಿದುಕೊಂಡೆ. ಈ ಬಗ್ಗೆ ಸರಿಯಾಗಿ ಮೇಲ್ವಿಚಾರಣೆ ಮಾಡದೆ ಇರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ಕುಮಾರ್, ಡಿಸಿ ಡಿಎಚ್‌ಒ ಡಾ.ಎಂ.ಸಿ.ರವಿ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕ, ಮೆಡಿಕಲ್ ಕಾಲೇಜು ಡೀನ್ ವಿರುದ್ಧ ಎಫ್‌ಐಆರ್ ದಾಖಲಿಸಲು ಮತ್ತು ಸತ್ತವರಿ ನ್ಯಾಯ ಒದಗಿಸಿಕೊಡಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಬರುವಂತಹ ಜನಪ್ರತಿನಿಧಿಗಳು ಗೆದ್ದ ನಂತರ ಬರುವುದಿಲ್ಲ ನಮ್ಮ‌ಮನೆಯಲ್ಲಿ ಇಬ್ಬರು ಸಾವನ್ನಪ್ಪಿದರು ಇದುವರಗೂ ಶಾಸಕರಾಗಲ್ಲಿ‌ ಅಧಿಕಾರಿಗಳಲ್ಲಿ ಬಂದು ತಮ್ಮ ನೋವು ಕೇಳಿಲ್ಲ.ಗುಂಡ್ಲುಪೇಟೆ ಪುರಸಭೆ ಅಧಿಕಾರಿಗಳು ಮುಂದೆಯ ಸುತ್ತಮುತ್ತ ಔಷಧಿ ಸಿಂಪಡಣೆ ಮಾಡಿಲ್ಲ ಎಂದು ಚಿನ್ನ ಸ್ವಾಮಿ ತಮ್ಮ ನೋವು ತೊಡಿಕೊಟ್ಟಿದ್ದಾರೆ.

VIAಜಿಲ್ಲಾಆಸ್ಪತೆಯ ವೈದ್ಯರೇ ನನ್ನ ತಾಯಿ ನನ್ನ ಅಕ್ಕನ ಸಾವಿಗೆ ಕಾರಣ; ಮಗಳ ಕಣ್ಣಿರ ಕಥೆ!
SOURCEಜಿಲ್ಲಾಆಸ್ಪತೆಯ ವೈದ್ಯರೇ ನನ್ನ ತಾಯಿ ನನ್ನ ಅಕ್ಕನ ಸಾವಿಗೆ ಕಾರಣ; ಮಗಳ ಕಣ್ಣಿರ ಕಥೆ!
Previous articleಬೆಡ್ ಬ್ಲಾಕಿಂಗ್ ದಂಧೆಯ ಕರಾಳ ಮುಖ ಬಯಲು!
Next articleಬೆಡ್ ಬ್ಲಾಕಿಂಗ್ ದಂಧೆಯ ಹಿಂದೆ ಬಿಜೆಪಿ ಶಾಸಕರ ಕೈವಾಡ?

LEAVE A REPLY

Please enter your comment!
Please enter your name here