ವಾರದ ಕೊನೆಯ ನಾಲ್ಕು ದಿನಗಳ ಸಂಪೂರ್ಣ ಲಾಕ್ ಡೌನ್ ಗೆ ಜನತೆ ಉತ್ತಮ ಸ್ಪಂದನೆ

ವಾರದ ಕೊನೆಯ ನಾಲ್ಕು ದಿನಗಳ ಸಂಪೂರ್ಣ ಲಾಕ್ ಡೌನ್ ಗೆ ಜನತೆ ಉತ್ತಮ ಸ್ಪಂದನೆ

554
0

ವರದಿ: ನಾ.ಅಶ್ವಥ್ ಕುಮಾರ್

ಚಾಮರಾಜನಗರ : ಕೋರೊನಾ ಸೋಂಕು ನಿಯಂತ್ರಣಕ್ಕೆ ಜಿಲ್ಲಾ ಟಾಸ್ಕ್ ಪೋಸ್ಟ್ ಸೂಚನೆಯಂತೆ ವಾರದ ಕೊನೆಯ ನಾಲ್ಕು ದಿನಗಳ ಸಂಪೂರ್ಣ ಲಾಕ್ ಡೌನ್ ಗೆ ಜಿಲ್ಲೆಯ ಜನತೆ ಸ್ಪಂಧನೆ ನೀಡಿದ್ದಾರೆ.ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಸದಾ ಗಿಜಿಗುಡುತ್ತಿದ್ದ ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿಗಳಲ್ಲಿ ಜನ ದಟ್ಟಣೆ ಇಲ್ಲದೆ ಬಿಕೋ ಎನ್ನುತ್ತಿದ್ದವು. ತಳ್ಳು ಗಾಡಿಗಳಲ್ಲಿ ತರಕಾರಿ ಮಾರಾಟವೂ ಸಹ ವಿರಳವಾಗಿತ್ತು.

ಗುರುವಾರ , ಶುಕ್ರವಾರ, ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್ ಡೌನ್ ಗೆ ಜಿಲ್ಲಾ ಟಾಸ್ಕ್ ಪೋರ್ಸ್ ನಿರ್ಧಾರ ಕೈಗೊಂಡಿದ್ದರಿಂದ ಗುರುವಾರ ಬೆಳಗ್ಗೆ ಚಾಮರಾಜನಗರ ಜಿಲ್ಲೆಯ ಬಹುತೇಕ ಕಡೆ ಅಕ್ಷರಃ ಸ್ವಯಂ ಘೋಷಿತ ಬಂದ್ ನಂತ್ತಿತ್ತು ವಾತಾವರಣ.ಎಲ್ಲಾ ದಿನಸಿ ಅಂಗಡಿಗಳು ಬಾಗಿಲು ಹಾಕಿದ್ದವು, ಒಂದೆರಡು ತಳ್ಳು ಗಾಡಿಯಲ್ಲಿ ತರಕಾರಿ ಮಾರಾಟವಾಗುವುದನ್ನು ಬಿಟ್ಟರೆ ಬೇರೆಲ್ಲವೂ ಸಂಪೂರ್ಣವಾಗಿ ಸ್ಥಗಿತವಾಗಿತ್ತು. ಸಾರ್ವಜನಿಕರು ಸಹ ರಸ್ತೆಗಿಳಿಯದೆ ಟಾಸ್ಕ್ ಪೋರ್ಸ್ ಕರೆ ನೀಡಿದ್ದ ವಾರದ ಕೊನೆಯ ನಾಲ್ಕು ದಿನಗಳ ಸಂಪೂರ್ಣ ಲಾಕ್ ಡೌನ್ ಗೆ ಸ್ಪಂಧಿಸಿದ್ದಾರೆ.

ಎಲ್ಲಿ ನೋಡಿದರು ಬಿಕೋ ಎನ್ನುವ ದೃಶ್ಯ ಕಂಡು ಬರುತ್ತಿತ್ತು. ಸಾಮಾನ್ಯವಾಗಿ ಹೆಚ್ಚಾಗಿ ತಿರುಗಾಡುವ ಬಡಾವಣೆಗಳಿಗೆ ಪೊಲೀಸರು ಹಗ್ಗ ಕಟ್ಟಿ ತಡೆಗೋಡೆ ಮಾದರಿ ರಚಿಸಿದ್ದರಿಂದ ದ್ವಿಚಕ್ರವಾಹನಗಳು ಸಂಚಾರ ಕಡಿಮೆ ಇದ್ದರೂ ಸಹ, ಕೆಲವರು ಅಡ್ಡ ದಾರಿಯಲ್ಲಿ ರಸ್ತೆಗೆ ಬರುತ್ತಿದ್ದರು.ಕಳೆದ ಹತ್ತು ದಿನಗಳಿಂದ ಚಾಮರಾಜನಗರ ಜಿಲ್ಲೆಯಲ್ಲಿ ಕೋರೊನಾ ಸೋಂಕು ಅಧಿಕವಾಗಿ ಸಾವಿನ ಪ್ರಮಾಣವೂ ಸಹ ಹೆಚ್ಚಾಗಿತ್ತು. ಇದನ್ನೆಲ್ಲಾ ಮನಗಂಡ ಜಿಲ್ಲಾ ಉಸ್ತುವಾರಿ ನೇತೃತ್ವದ ಟಾಸ್ಕ್ ಪೋರ್ಸ್ ಸಭೆಯಲ್ಲಿ ಶಾಸಕರು, ಜಿಲ್ಲಾಧಿಕಾರಿಗಳು ಮತ್ತು ಆರೋಗ್ಯ ಅಧಿಕಾರಿಗಳು ಮತ್ತು ಇನ್ನಿತರ ಅಧಿಕಾರಿಗಳ ಸಮ್ಮುಖದಲ್ಲಿ ನಿರ್ಧಾರ ಕೈಗೊಂಡಿರುವಂತೆ ವಾರದ ಕೊನೆಯ ನಾಲ್ಕು ದಿನಗಳ ಸಂಪೂರ್ಣ ಲಾಕ್ ಡೌನ್ ಕರೆಗೆ ಜನತೆ ಸ್ಪಂಧಿಸಿದ್ದಾರೆ.ಬುಧವಾರವೇ ಚಾಮರಾಜನಗರ ಜಿಲ್ಲೆಯ ಜನತೆ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದಿದ್ದು ಕಂಡು ಬಂದಿತು.

VIAವಾರದ ಕೊನೆಯ ನಾಲ್ಕು ದಿನಗಳ ಸಂಪೂರ್ಣ ಲಾಕ್ ಡೌನ್ ಗೆ ಜನತೆ ಉತ್ತಮ ಸ್ಪಂದನೆ
SOURCEವಾರದ ಕೊನೆಯ ನಾಲ್ಕು ದಿನಗಳ ಸಂಪೂರ್ಣ ಲಾಕ್ ಡೌನ್ ಗೆ ಜನತೆ ಉತ್ತಮ ಸ್ಪಂದನೆ
Previous articleರಂಜಾನ್ ಮತ್ತು ಬಸವ ಜಯಂತಿ ಆಚರಣೆಗೆ ಲಾಕ್ ಡೌನ್ ಯಾವುದೇ ಅಡ್ಡಿ ತರುವುದಿಲ್ಲ; ಕೆ ಎಸ್ ಈಶ್ವರಪ್ಪ
Next articleಬಿಪಿಎಲ್ ಕಾರ್ಡ್ ದಾರರಿಗೆ ತಲಾ 10ಕೆಜಿ ಅಕ್ಕಿ ಉಚಿತ!

LEAVE A REPLY

Please enter your comment!
Please enter your name here