Home District ಲಾಕ್ ಡೌನ್ ಸಮಯದಲ್ಲಿ ಏನಿರುತ್ತೆ? ಏನಿರುವುದಿಲ್ಲ?

ಲಾಕ್ ಡೌನ್ ಸಮಯದಲ್ಲಿ ಏನಿರುತ್ತೆ? ಏನಿರುವುದಿಲ್ಲ?

373
0

ಕರ್ನಾಟಕದಲ್ಲಿ ಕೊರೊನಾ 2ನೇ ಅಲೆ ದೂಳೆಬ್ಬಿಸುತ್ತಿದೆ. ಇದರ ಅಟ್ಟಹಾಸಕ್ಕೆ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಗಗನಕ್ಕೇರುತ್ತಿದೆ. ಸಾವಿನ ಸಂಖ್ಯೆ ಕೂಡ ಆಟೋ ಮೀಟರ್ ವೇಗದಲ್ಲಿ ಮುನ್ನುಗುತ್ತಿದೆ. ಈಗಾಗಲೇ ಭಾರೀ ಅವಾಂತರ ಸೃಷ್ಟಿಸಿರುವ ಕೊರೊನಾಗೆ ನಿಯಂತ್ರಣ ಹೇರಲು ಸರ್ಕಾರ ನಾನಾ ಅಸ್ತ್ರಗಳನ್ನು ಬಳಸುತ್ತಿದೆ. ಈಗಾಗಲೇ ಮೇ 4ರವರೆಗೆ ಟಫ್ ರೂಲ್ಸ್ ಜಾರಿಗೆ ತಂದಿದೆ.ಈಗ ವೀಕೆಂಡ್ ಲಾಕ್‌ಡೌನ್ ಆರಂಭಗೊಂಡಿದೆ. 57 ಗಂಟೆಗಳ ಅಂದ್ರೆ, ಸೋಮವಾರ ಬೆಳಗ್ಗೆ 6 ಗಂಟೆವರೆಗೆ ಇಡೀ ಕರುನಾಡು ಸ್ತಬ್ಧವಾಗಲಿದೆ.

ಕೇವಲ ಅಗತ್ಯ ವಸ್ತುಗಳ ಮಾರಾಟ ಅಂಗಡಿಗಳನ್ನು ಬಿಟ್ಟು ಉಳಿದ ಚಟುವಟಿಕೆ ಬಂದ್ ಆಗಿವೆ. ಶನಿವಾರ ಮತ್ತು ಭಾನುವಾರ ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ಕಲ್ಪಿಸಲಾಗಿದೆ..

ಹಾಗಾದ್ರೆ ವೀಕೆಂಡ್ ಲಾಕ್‌ಡೌನ್ ಯಾವ ಸೇವೆಗಳು ಲಭ್ಯವಾಗಲಿದೆ ಎಂಬ ವಿಚಾರಕ್ಕೆ ಬಂದ್ರೆ, ಆಸ್ಪತ್ರೆಗಳು, ಮೆಡಿಕಲ್ ಸ್ಟೋರ್, ಕಿರಾಣಿ ಅಂಗಡಿ, ದಿನಸಿ ಅಂಗಡಿ, ನ್ಯಾಯಬೆಲೆ ಅಂಗಡಿ, ಹಣ್ಣು- ತರಕಾರಿ, ಹಾಲು,ಮಾಂಸ, ಮೀನು, ಪಶು ಆಹಾರ ಅಂಗಡಿ,ಹೋಟೆಲ್, ರೆಸ್ಟೋರೆಂಟ್ (ಪಾರ್ಸೆಲ್ ಮಾತ್ರ), *ಪೆಟ್ರೋಲ್ ಬಂಕ್, ಎಲ್‌ಪಿಜಿ ಪೂರೈಕೆ, ಬ್ಯಾಂಕ್, ವಿಮೆ ಕಚೇರಿ, ಎಟಿಎಂ, ಇ-ಕಾಮರ್ಸ್ ಸೇವೆ, ಸಲೂನ್, ಬ್ಯೂಟಿ ಪಾರ್ಲರ್ ( ಕೋವಿಡ್ ನಿಯಮ ಪಾಲನೆ ಕಡ್ಡಾಯ), ಮದುವೆಯಲ್ಲಿ 50 ಜನ ಭಾಗಿಗೆ ಅವಕಾಶ,ಅಂತ್ಯ ಸಂಸ್ಕಾರಕ್ಕೆ 20 ಜನರ ಭಾಗಿಗೆ ಅವಕಾಶ ಕಲ್ಪಿಸಲಾಗಿದೆ

ಯಾವುದಕ್ಕೆ ಅವಕಾಶ ?

*ಆಸ್ಪತ್ರೆಗಳು
*ಮೆಡಿಕಲ್ ಸ್ಟೋರ್
*ಕಿರಾಣಿ ಅಂಗಡಿ
*ದಿನಸಿ ಅಂಗಡಿ
ನ್ಯಾಯಬೆಲೆ ಅಂಗಡಿ
*ಹಣ್ಣು- ತರಕಾರಿ
*ಹಾಲು,ಮಾಂಸ, ಮೀನು
*ಪಶು ಆಹಾರ ಅಂಗಡಿ
*ಹೋಟೆಲ್, ರೆಸ್ಟೋರೆಂಟ್ (ಪಾರ್ಸೆಲ್ ಮಾತ್ರ)
*ಪೆಟ್ರೋಲ್ ಬಂದ್, ಎಲ್‌ಪಿಜಿ ಪೂರೈಕೆ
*ಬ್ಯಾಂಕ್, ವಿಮೆ ಕಚೇರಿ, ಎಟಿಎಂ
*ಇ-ಕಾಮರ್ಸ್ ಸೇವೆ
*ಸಲೂನ್, ಬ್ಯೂಟಿ ಪಾರ್ಲರ್ ( ಕೋವಿಡ್ ನಿಯಮ ಪಾಲನೆ ಕಡ್ಡಾಯ
*ಮದುವೆಯಲ್ಲಿ 50 ಜನ ಭಾಗಿಗೆ ಅವಕಾಶ
*ಅಂತ್ಯ ಸಂಸ್ಕಾರಕ್ಕೆ 20 ಜನರ ಭಾಗಿಗೆ ಅವಕಾಶ
ುಿಂGFX OUT
ಬೈಟ್- ಅಶೋಕ್, ಕಂದಾಯ ಸಚಿವ

ಇನ್ನು,ವಾರಾಂತ್ಯ ಲಾಕ್‌ಡೌನ್‌ನಲ್ಲಿ ಯಾವ ಸೇವೆ ಇರಲ್ಲ ಎಂಬ ವಿಚಾರಕ್ಕೆ ಬಂದ್ರೆ, GFX V/O IN ಬಿಎಂಟಿಸಿ, ಮೆಟ್ರೋ, ಶೋರೂಂಗಳು,ಎಲೆಕ್ಟ್ರಿಕ್ ಅಪ್ಲೈಯನ್ಸಸ್, ಸ್ಟೇಷನರಿ, ರಿಪೇರಿ ಅಂಗಡಿಗಳು, ಬಟ್ಟೆ ಅಂಗಡಿಗಳು, ಪಾದರಕ್ಷೆ ಮಳಿಗೆ ಸೇವೆಗೆ ನಿರ್ಬಂಧ ಹೇರಲಾಗಿದೆ.

ಯಾವ ಸೇವೆ ಇರುವುದಿಲ್ಲ?

*ಬಿಎಂಟಿಸಿ
*ಮೆಟ್ರೋ
*ಶೋರೂಂಗಳು
*ಎಲೆಕ್ಟ್ರಿಕ್ ಅಪ್ಲೈಯನ್ಸಸ್
*ಸ್ಟೇಷನರಿ
*ರಿಪೇರಿ ಅಂಗಡಿಗಳು
*ಬಟ್ಟೆ ಅಂಗಡಿಗಳು
* ಪಾದರಕ್ಷೆ ಮಳಿಗೆಗಳು
ಬಂದ್ ಆಗಿರಲಿವೆ. ತುರ್ತು ಸೇವೆ ಒದಗಿಸುವ ಎಲ್ಲ ಸರ್ಕಾರಿ ಇಲಾಖೆ, ಕಾರ್ಪೋರೇಷನ್ ಗಳ ಓಡಾಟಕ್ಕೆ ನಿರ್ಬಂಧವಿಲ್ಲ.  ತುರ್ತುಸೇವೆ ಒದಗಿಸುವ ಕಾರ್ಖಾನೆ, ಸಂಸ್ಥೆ ಸಿಬ್ಬಂದಿ ಐಡಿ ಕಾರ್ಡ್ ತೋರಿಸಿ ಓಡಾಡಬಹುದಾಗಿದೆ. ರೋಗಿಗಳು ಹಾಗೂ ಅವರ ಸಹಾಯಕರು, ವ್ಯಾಕ್ಸಿನ್ ಪಡೆದುಕೊಳ್ಳುವ ನಾಗರೀಕರು ಸಂಚರಿಸಬಹುದಾಗಿದೆ.ದೂರ ಪ್ರಯಾಣಕ್ಕಾಗಿ ಹೋಗುವವರು, ಬಸ್ ನಿಲ್ದಾಣ. ರೈಲ್ವೆ ವಿಮಾನ ನಿಲ್ದಾಣಕ್ಕೆ ಹೋಗುವವರು ಸಾರ್ವಜನಿಕ ಸಾರಿಗೆ ಬಳಸಬಹುದು. ಆದರೆ ಟಿಕೆಟ್ ತೋರಿಸಬೇಕಾಗುತ್ತದೆ.

57ತಾಸುಗಳ ವೀಕೆಂಡ್ ಲಾಕ್‌ಡೌನ್ ನಿರ್ಣಾಯಕವಾಗಿದ್ದು, ಕೊರೊನಾ ನಿಯಂತ್ರಣಕ್ಕೆ ಮಹತ್ವದ್ದಾಗಿದೆ.ಒಂದು ವೇಳೆ, ಲಾಕ್‌ಡೌನ್ ನಿಯಮ ಉಲ್ಲಂಘನೆ ಮಾಡಿ ಅನಗತ್ಯವಾಗಿ ಓಡಾಡಿದ್ರೆ ಪೊಲೀಸರು ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.

Previous articleಕೊರೋನಾ ಅಟ್ಟಹಾಸದ ನಡುವೆಯೇ ಬಿಜೆಪಿ ಎಲೆಕ್ಷನ್ ಪ್ರಚಾರ!
Next articleಕೊರೊನಾ ಹಿನ್ನಲೆ ವೀಕೆಂಡ್ ಕರ್ಪ್ಯೂ; ಜನರು ರಸ್ತೆಗೆ ಇಳಿದರೆ ಬೀಳುತ್ತೆ ಪೊಲೀಸ್ ಲಾಠಿ ರುಚಿ!

LEAVE A REPLY

Please enter your comment!
Please enter your name here