ಮಮತಾ ಕಾಂಗ್ರೆಸ್‌ ಜೊತೆಗಿನ ಕಹಿ ಮರೆತು ಒಟ್ಟಿಗೆ ಹೆಜ್ಜೆ ಹಾಕ್ತಾರೆ – ಶರದ್ ಪವಾರ್

ರಾಷ್ಟ್ರೀಯ

ಮುಂಬೈ – ದೇಶದ ಒಳಿತಿಗಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಾಂಗ್ರೆಸ್ ಜೊತೆಗಿನ ಭಿನ್ನಾಭಿಪ್ರಾಯವನ್ನು ಮರೆಯಲು ಸಿದ್ಧರಿದ್ದಾರೆಂದು ಹಿರಿಯ ಮುಖಂಡ ಹಾಗೂ ಎನ್‌ ಸಿಪಿ ನಾಯಕ ಶರದ್‌ ಪವಾರ್‌ ಹೇಳಿದ್ದಾರೆ. 2024 ರ ಲೋಕಸಭೆ ಚುನಾವಣೆಗೆ ಮಮತಾ ಬ್ಯಾನರ್ಜಿ ವಿಪಕ್ಷಗಳ ಒಕ್ಕೂಟದ ರಚನೆಗೆ ತಮ್ಮ ಸಮ್ಮತಿ ಸೂಚಿಸಲಿದ್ದಾರೆಂದು ಪವಾರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಂಬೈನಲ್ಲಿ ಮಾತನಾಡಿದ ಶರದ್‌ ಪವಾರ್ ಅವರು ಜಮ್ಮು ಕಾಶ್ಮೀರದ ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲಾ ಹಾಗೂ ಬಿಹಾರದ ಸಿಎಂ ನಿತೀಶ್‌ ಕುಮಾರ್ ಸಹ ಬಿಜೆಪಿ ವಿರೋಧಿಸಲು ಕಾಂಗ್ರೆಸ್ ಪಾಳೆಯದೊಂದಿಗೆ ಕೈ ಜೋಡಿಸಲು ಹಿಂದೇಟು ಹಾಕುವುದಿಲ್ಲ ಎಂದು ಪವಾರ್ ಹೇಳಿದ್ದಾರೆ.

ಈ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್, ಸಿಪಿಐ(ಎಂ) ನ ಮೈತ್ರಿ ಬಿಜೆಪಿಯನ್ನು ಕಟ್ಟಿ ಹಾಕಿತ್ತು ಅನ್ನೋದು ಟಿಎಂಸಿಗೆ ತಿಳಿದಿದೆ . ಹೀಗಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನ ಕಟ್ಟಿಹಾಕಲು ವಿಪಕ್ಷಗಳು ಒಗ್ಗೂಡುವಿಕೆ ಮೂಲಕ ಒಗ್ಗಟ್ಟಾಗಿ ಸಾಗಬೇಕಿದೆ ಎಂದು ಶರದ್‌ ಪವಾರ್‌ ಹೇಳಿದ್ದಾರೆ.