Home Politics ಸಿಎಂ ಯಡಿಯೂರಪ್ಪನವರಿಗೆ ಏನೂ ಎನ್ನದ ಮಣಿಪಾಲ್ ಆಸ್ಪತ್ರೆ, ಹೆಚ್.ಡಿ.ಕೆಗೆ ದಾಖಲಿಸಿಕೊಳ್ಳಲು ತಕರಾರು ಮಾಡಿದ್ದೇಕೆ?

ಸಿಎಂ ಯಡಿಯೂರಪ್ಪನವರಿಗೆ ಏನೂ ಎನ್ನದ ಮಣಿಪಾಲ್ ಆಸ್ಪತ್ರೆ, ಹೆಚ್.ಡಿ.ಕೆಗೆ ದಾಖಲಿಸಿಕೊಳ್ಳಲು ತಕರಾರು ಮಾಡಿದ್ದೇಕೆ?

ಸಿಎಂ ಯಡಿಯೂರಪ್ಪನವರಿಗೆ ಏನೂ ಎನ್ನದ ಮಣಿಪಾಲ್ ಆಸ್ಪತ್ರೆ, ಹೆಚ್.ಡಿ.ಕೆಗೆ ದಾಖಲಿಸಿಕೊಳ್ಳಲು ತಕರಾರು ಮಾಡಿದ್ದೇಕೆ?

884
0
SHARE

ಮಾಜಿ ಸಿಎಂ ಹೆಚ್ ಡಿಕೆ ಹಾಗೂ ಅವರ ಪುತ್ರ ಚಿತ್ರ ನಟ ನಿಖಿಲ್ ಕುಮಾರಸ್ವಾಮಿಯವರಿಗೂ ಕೊರೊನಾ ಸೋಂಕು ಅಂಟಿಕೊಂಡಿದೆ. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬ್ಯುಸಿಯಾಗಿದ್ದ ಕುಮಾರಸ್ವಾಮಿ ಗುರುವಾರ ಬೆಂಗಳೂರಿಗೆ ವಾಪಸ್ಸಾಗಿದ್ರು. ಗುರುವಾರ ಸಂಜೆಯೇ ಅವರಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿತ್ತು. ಹೀಗಾಗಿ ಹೆಚ್ ಡಿಕೆ ತಮ್ಮ ನಿವಾಸಕ್ಕೆ ತೆರಳದೆ ಖಾಸಗಿ ಹೊಟೇಲ್ ನಲ್ಲಿ ತಂಗಿದ್ರು. ದ್ದರು. ಬೆಳಗ್ಗೆ ವೈದ್ಯರ ಸಲಹೆಯ ಮೇರೆಗೆ ಕೋವಿಡ್ ಟೆಸ್ಟ್ ಗೆ ಒಳಗಾದಾಗ ಸೋಂಕು ತಗುಲಿರುವುದು ದೃಢಪಟ್ಟತು. ಎರಡು ಬಾರಿ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಹೆಚ್.ಡಿ.ಕೆ ಹೋಮ್ ಐಸೋಲೇಷನ್ ಗೆ ಒಳಪಡುವುದಕ್ಕಿಂತ, ಆಸ್ಪತ್ರೆಗೆ ದಾಖಲಾಗುವುದು ಸೂಕ್ತವೆಂದು ವೈದ್ಯರೂ ಸಲಹೆ ನೀಡಿದ್ರು. ಅದರಂತೆ ಹೆಚ್.ಡಿಕೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಲು ಬಯಸಿದಾಗ, ಆಸ್ಪತ್ರೆಯ ಆಡಳಿತ ಮಂಡಳಿ ಬೆಡ್ ಖಾಲಿ ಇಲ್ಲವೆಂದು ಉತ್ತರಿಸಿದೆ. ಇದು ವಿವಾದಕ್ಕೆ ಕಾರಣವಾಯ್ತು.

ಮಣಿಪಾಲ್ ಆಸ್ಪತ್ರೆಯಲ್ಲಿ ಮಾಜಿ ಸಿಎಂ ಗೆ ಬೆಡ್ ನಿರಾಕರಿಸಿರುವ ವಿಷಯ ತಿಳಿಯುತ್ತಿದ್ದಂತೆ ಸರ್ಕಾರ ಎಚ್ಚೆತ್ತುಕೊಂಡಿತು. ಕೂಡಲೇ ಮಧ್ಯ ಪ್ರವೇಶಿಸಿದ ಆರೋಗ್ಯ ಸಚಿವ ಸುಧಾಕರ್ ಮಣಿಪಾಲ್ ಆಸ್ಪತ್ರೆಯ ಆಡಳಿತ ಮಂಡಳಿ ಜತೆ ಮಾತುಕತೆ ನಡೆಸಿದ್ರು. ಬಳಿಕ ಹೆಚ್.ಡಿ.ಕೆ ಹಾಗೂ ಸೋಂಕಿಗೆ ಒಳಗಾಗಿರುವ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೂ ಬೆಡ್ ನ ವ್ಯವಸ್ಥೆ ಮಾಡಲಾಯ್ತು. ಈ ಮಧ್ಯೆ ಕುಮಾರಸ್ವಾಮಿಯವರು ಅಪೊಲೊ ಆಸ್ಪತ್ರೆಗೆ ದಾಖಲಾಗುವುದಾಗಿ ಹೇಳಿದ್ರು, ಅಲ್ಲಿ ಅವರಿಗೆ ಬೆಡ್ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಗೊಂದಲ ಮೂಡಿತ್ತು ಎಂದು ಸಚಿವ ಸುಧಾಕರ್ ಸ್ಪಷ್ಟನೆ ನೀಡಿದ್ರು.

ಕೊರೊನಾ ಸೋಂಕಿತರಿಗೆ ಜನ ಸಾಮಾನ್ಯರು ಇರಲಿ, ವಿವಿಐಪಿಗಳಿಗೂ ಸಹ ಆಸ್ಪತ್ರೆಗಳಲ್ಲಿ ಬೆಡ್ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕೊರೊನಾ ಸೋಂಕಿಗೆ ಒಳಗಾಗಿರೋ ಮಾಜಿ ಸಿಎಂ ಎಚ್ ಡಿಕೆ ಅವರನ್ನ ದಾಖಲಿಸಿಕೊಳ್ಳಲು ಖಾಸಗಿ ಆಸ್ಪತ್ರೆ ನಿರಾಕರಿಸಿದೆ. ಕೊನೆಗೆ ಆರೋಗ್ಯ ಸಚಿವರು ಶಿಫಾರಸು ಮಾಡಿ ಮಾಜಿ ಸಿಎಂಗೆ ಬೆಡ್ ಕೊಡಿಸಿದ್ದಾರೆ.

ಮಣಿಪಾಲ್ ಆಸ್ಪತ್ರೆಯಲ್ಲಿ ಸಿಎಂ ಯಡಿಯೂರಪ್ಪ ಸಹ ದಾಖಲಾಗಿದ್ದಾರೆ. ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಎಂ ಯಡಿಯೂರಪ್ಪಗೆ ಯಾವುದೇ ತಕರಾರು ಇಲ್ಲದೆ ದಾಖಲಿಸಿಕೊಂಡ ಆಸ್ಪತ್ರೆಯವರು, ಹೆಚ್.ಡಿ.ಕೆಗೆ ದಾಖಲಿಸಿಕೊಳ್ಳಲು ತಕರಾರು ಮಾಡಿದ್ದೇಕೆ ಎಂಬ ಪ್ರಶ್ನೆ ಎದುರಾಗಿದೆ. ಒಬ್ಬ ಮಾಜಿ ಸಿಎಂ ಸ್ಥಿತಿಯೇ ಹೀಗಾದ್ರೆ ಜನ ಸಾಮಾನ್ಯರ ಪಾಡೇನು ಎಂಬ ಪ್ರಶ್ನೆ ಮೂಡಿದೆ.

LEAVE A REPLY

Please enter your comment!
Please enter your name here