Home District ಮದುವೆಗೆ ಅನುಮತಿ, ಪಾಸ್ ಪಡೆಯಲು ಲೈನ್‌ನಲ್ಲಿ ನಿಂತು ಪರದಾಡುತ್ತಿರುವ ಜನತೆ; ಅಲ್ಲಿ ಬರುವುದಿಲ್ಲವೆ ಕೊರೋನಾ?

ಮದುವೆಗೆ ಅನುಮತಿ, ಪಾಸ್ ಪಡೆಯಲು ಲೈನ್‌ನಲ್ಲಿ ನಿಂತು ಪರದಾಡುತ್ತಿರುವ ಜನತೆ; ಅಲ್ಲಿ ಬರುವುದಿಲ್ಲವೆ ಕೊರೋನಾ?

ಮದುವೆಗೆ ಅನುಮತಿ ಮತ್ತು ಪಾಸ್ ಪಡೆಯಲು ಲೈನ್‌ನಲ್ಲಿ ನಿಂತು ಪರದಾಡುತ್ತಿರುವ ಜನತೆ

815
0

ರಾಯಚೂರು: ಮದುವೆಗೆ ಅನುಮತಿ ಮತ್ತು ಪಾಸ್ ಪಡೆಯಲು ಲೈನ್‌ನಲ್ಲಿ ನಿಂತು ಪರದಾಡುತ್ತಿರುವ ಜಿಲ್ಲೆಯ ಲಿಂಗಸಗೂರು ತಾಲೂಕು ಜನತೆ.ಮದುವೆ ಅನ್ನುವುದು ಹಲವಾರು ಜನರ ಬಹುದಿನದ ಕನಸಾಗಿರುತ್ತೆ. ಆದರೆ ಕರೋನಾದ ಸಮಯದಲ್ಲಿ ಆ ಕನಸು ಕೂಡ ಕಮರಿ ಹೋಗುತ್ತಿದ್ದು, ಮದುವೆಯ ತಯಾರಿಗಿಂತಲೂ ಮದುವೆಗಾಗಿ ಪಡೆಯುವ ಅನುಮತಿ ಮತ್ತು ಪಾಸ್ ಪಡೆಯುವುದು ಇನ್ನೂ ಪ್ರಯಾಸದಾಯಕವಾಗಿ ಪರಿಣಮಿಸಿದೆ.

ಕರೋನಾ ಸಮಯದಲ್ಲಿ ಮದುವೆ ಮಾಡಿಕೊಳ್ಳುವವರ ಕಥೆ ಈಗ ಹೇಳತೀರದಾಗಿದೆ. ಮದುವೆ ಪಾಸ್ ಪಡೆಯಲು ಹರಸಾಹಸ ಪಡುತ್ತಿರುವ ಮದುವೆ ಮನೆಯವರಿಗೆ ಈಗಲೇ ಮದುವೆಯ ಅನುಭವ ಆಗುತ್ತಿರುವಂತಿದೆ.ಸರ್ಕಾರ ಹೊಸದಾಗಿ ಮಾಡಿರುವ ಕೊವಿಡ್ ನಿಯಮದ ಅನುಸಾರ 40 ಜನರಿಗೆ ಮಾತ್ರ ಮದುವೆಗಳಲ್ಲಿ ಭಾಗವಹಿಸುವ ಅವಕಾಶವಿದ್ದು, 40 ಜನರಿಗೆ ಪಾಸ್ ಗಳನ್ನು ತಾಲೂಕ ಆಡಳಿತ ಪಡೆಯಬೇಕಾಗುತ್ತದೆ.

ಈಗ ಸಮಸ್ಯೆ ಬಂದಿರುವುದೇ ಈ ಪಾಸ್ ಪಡೆಯುವಲ್ಲಿ ಎಂಬುದನ್ನು ಮದುವೆ ಮಾಡಿಕೊಳ್ಳುಲು ರೆಡಿಯಾಗಿರುವ ಮದುಮಗ ವಿವರಿಸಿದ್ದಾನೆ.ಕಳೆದ 6-7 ದಿನಗಳಿಂದ ತಾಲೂಕ ಕಛೇರಿಗೆ ಅಲಿಯುತ್ತಿದ್ದು, ಅನುಮತಿ ಪತ್ರ ಮತ್ತು ಮದುವೆಯ ಪಾಸ್‌ಗಳಿಗಾಗಿ ಹೆಣಗಾಡುತ್ತಿದ್ದೇವೆ. ನನ್ನ ಹಾಗೆ ಸಾಕಷ್ಟು ಜನ ಇಲ್ಲಿ ಬಂದಿದ್ದಾರೆ ಅವರೆಲ್ಲರದೂ ಒಂದೊಂದು ಸಮಸ್ಯೆ ಇದೆ. ಮದುವೆಗಾಗಿ ಅಂತ ಈಗಾಗಲೇ ಸಾಕಷ್ಟು ಖರ್ಚು-ವೆಚ್ಚಗಳನ್ನು ಮಾಡಿಕೊಂಡಿದ್ದೇವೆ. ಸೀಮಿತ ಜನರನ್ನ ಕರೆದುಕೊಂಡು ಮದುವೆ ಮಾಡಿಕೊಳ್ಳಲು ಪಾಸ್ ನೀಡಿ ಎಂದು ಬಂದರೆ ಈಗ ಮದುವೆಗೆ ಬರುವವರ ಹೆಸರು ಪಟ್ಟಿಯನ್ನು ಕೊಡಿ ಎಂದು ಕೇಳಲಾಗುತ್ತಿದೆ.

ಈಗ ಮದುವೆಗೆ ಯರ‍್ಯಾರು ಬರುತ್ತಾರೋ ಅಂತ ಪ್ರತಿಯೊಬ್ಬರಿಗೂ ಪೋನ್ ಮಾಡಿಕೇಳಿಕೊಂಡು ಕೂಡುವಂತಾಗಿದೆ. ಏಕೆಂದರೆ ಒಂದು ಮನೆಯಲ್ಲಿ ಒಬ್ಬರಂತೆ ಯಾರದರೂ ಬರಬಹುದು, ಆದರೆ ಯಾರು ಬರುತ್ತಾರೋ ಅಂತ ಈಗಲೇ ಹೇಳಿ ಹೆಸರು ನಮೂದಿಸಿ ಅಂದರೆ ಹೇಗೆ ಮಾಡುವುದು ಗೊತ್ತಾಗುತ್ತಿಲ್ಲ. ಮದುವೆಗಿಂತಲೂ ಮದುವೆಯ ತಯಾರಿಯೇ ನಮಗೆ ದೊಡ್ಡ ತೆಲೆನೋವಾಗಿ ಪರಿಣಮಿಸಿದೆ ಎಂದು ಹೇಳಿದರು.ತಾಲೂಕ ಕಚೇರಿಯ ಮುಂದೆ ಮದುವೆ ಪಾಸಗಳಿಗಾಗಿ ಲೈನ್‌ನಲ್ಲಿ ನಿಂತಿರುವ ಸಾಕಷ್ಟು ಜನರು ಪರದಾಡುತ್ತಿದ್ದು, ಕೆಲವರು ಪೋನ್‌ನ ಮೂಲಕ ಜನರನ್ನ ಸಂಪರ್ಕಿಸಿ ಯಾರು ಬರುವರೋ ಎಂದು ಖಚಿತ ಪಡಿಸಿಕೊಂಡು ಲೀಸ್ಟ್ ಮಾಡಿಕೊಳ್ಳುತ್ತಿರುವ ದೃಶ್ಯ ಸಹಜ ವೆಂಬತೆ ಕಂಡುಬಂತು.

VIAಮದುವೆಗೆ ಅನುಮತಿ ಮತ್ತು ಪಾಸ್ ಪಡೆಯಲು ಲೈನ್‌ನಲ್ಲಿ ನಿಂತು ಪರದಾಡುತ್ತಿರುವ ಜನತೆ
SOURCEಮದುವೆಗೆ ಅನುಮತಿ ಮತ್ತು ಪಾಸ್ ಪಡೆಯಲು ಲೈನ್‌ನಲ್ಲಿ ನಿಂತು ಪರದಾಡುತ್ತಿರುವ ಜನತೆ
Previous articleಚಾಮರಾಜನಗರದಲ್ಲಿ ಕೊರೊನಾ ಅಬ್ಬರ : ಕಳೆದ 24 ಗಂಟೆಯಲ್ಲಿ ಮತ್ತೆ 14 ಮಂದಿ ಕೊರೊನಾಗೆ ಬಲಿ
Next articleಚಾಮರಾಜನಗರ : ಕೋವಿಡ್ ಆಸ್ಪತ್ರೆಯಲ್ಲಿ 24 ಗಂಟೆಯಲ್ಲಿ 14 ಮಂದಿ ಸಾವು!

LEAVE A REPLY

Please enter your comment!
Please enter your name here