Home Cinema ನಿನಗಾಗಿ ಕಾಯುವೆ ಚಿರು… ! ಮೇಘನಾ ಬರೆದ ಭಾವನಾತ್ಮಕ ಪತ್ರ

ನಿನಗಾಗಿ ಕಾಯುವೆ ಚಿರು… ! ಮೇಘನಾ ಬರೆದ ಭಾವನಾತ್ಮಕ ಪತ್ರ

620
0
SHARE

ಬೆಂಗಳೂರು. ಚಿರಂಜೀವಿ ಸರ್ಜಾ. ಈ ಹೆಸರನ್ನ ಕೇಳುತ್ತಿದ್ದಂತೆ ಇಡೀ ಕನ್ನಡ ಚಿತ್ರರಂಗವೇ ನೆನಪುಗಳ ಸಾಗರಕ್ಕೆ ಜಾರಿಹೋಗುತ್ತೆ. ಚಿರಂಜೀವಿ ನಮ್ಮ ಪಾಲಿಗೆ ಇನ್ನು ನೆನಪು ಮಾತ್ರ ಎನ್ನುವ ಕಹಿಸತ್ಯ ಗೊತ್ತಗುತ್ತಿದ್ದಂತೆ ಎಲ್ಲರೂ ಕಣ್ಣಿರ ಕಡಲಲ್ಲಿ ಕೈ ತೊಳೆಯುವಂತಾಗುತ್ತೆ. ಅಂತಹ ಮರೆಯಲಾಗದ, ಅಳಿಸಲಾಗದ ಜ್ಯೋತಿಯೇ ಪ್ರೀತಿಯ ಯುವಸಾಮ್ರಾಟ್ ಚಿರು.

ಚಿರು ಅಗಲಿಕೆಯಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಚಿರಂಜೀವಿ ಅಕಾಲಿಕ ನಿಧನ ಇಡೀ ಕನ್ನಡ ಚಿತ್ರರಂಗವನ್ನ ಕಣ್ಣಿರಿನಲ್ಲಿ ತೇಲಿಸಿಬಿಟ್ಟಿದೆ. ಚಿರು ನೂರಾರು ಕನಸುಗಳನ್ನ ಹೊತ್ತ ಹುಡುಗ. ಸದಾ ಹಸನ್ಮುಖಿ. ಸರಳತೆಯ ಉದಾಹರಣೆ. ಇದರಿಂದಲೇ ಚಿತ್ರರಂಗದ ಮಂದಿಗೆ ಚಿರು ಬಹಳ ಕ್ಲೋಸ್ ಆಗಿದ್ರು. ಎಲ್ಲರನ್ನ ಒಂದೇ ದೃಷ್ಟಿಕೋನದಿಂದ ನೋಡ್ತಿದ್ದ ಚಿರಂಜೀವಿ ಎಲ್ಲರೊಡನೇ ಸುಲಭವಾಗಿ ಬೆರೆತು ಹೋಗುತ್ತಿದ್ರು. ಈಗ ಚಿರಂಜೀವಿ ಇಲ್ಲದೇ ಸ್ಯಾಂಡಲ್‌ವುಡ್ ಖಾಲಿಖಾಲಿಯಾಗಿಬಿಟ್ಟಿದೆ. ಚಿರು ಗೆಳೆಯರ ಬಳಗದಲ್ಲೂ ಮೌನ ತಾಂಡವಾಡ್ತಿದೆ. ಈ ದುಃಖ, ನೋವುಗಳಿಂದ ಆಚೆ ಬರುವ ವೇಳೆಗೆ ಚಿರು ಪತ್ನಿ ಮೇಘನಾ ರಾಜ್ ತಮ್ಮ ಮನದಾಳದ ನೋವುಗಳನ್ನ ಮೊದಲಬಾರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಚ್ಚಿಟ್ಟಿದ್ದಾರೆ. ಈ ನೋವಿನ ನುಡಿಗಳನ್ನ ಕೇಳುತ್ತಿದ್ದರೆ ಎಂತಹ ಕಲ್ಲು ಮನಸ್ಸಿನವರ ಕಣ್ಣುಗಳಲ್ಲೂ ನೀರು ಬರುತ್ತೆ.

 

ಪ್ರೀತಿಯ ಚಿರು, ಎಷ್ಟೇ ಬಾರಿ ಪ್ರಯತ್ನಿಸಿದರೂ ನನ್ನ ಮನದಾಳದ ಮಾತುಗಳನ್ನ ಪದಗಳಲ್ಲಿ ವರ್ಣಿಸಲು ಸಾಧ್ಯವಾಗುತ್ತಿಲ್ಲ. ನಿನ್ನ ಮೇಲಿನ ಪ್ರೀತಿ, ಹುಚ್ಚು, ವಿಶ್ವಾಸದ ಬಗ್ಗೆ ಮಾತನಾಡಲು ಶಬ್ಧಕೋಶದಲ್ಲಿ ಪದಗಳೇ ಸಾಲುತ್ತಿಲ್ಲ. ನನ್ನ ಸ್ನೇಹಿತ, ನನ್ನ ಪ್ರೇಮಿ, ನನ್ನ ಹಿತೈಷಿ, ನನ್ನ ಮಗು, ನನ್ನ ಸರ್ವಸ್ವ, ನನ್ನ ಪತಿ- ನೀನು ಇದೆಲ್ಲಕ್ಕಿಂತ ಹೆಚ್ಚು. ನೀನು ನನ್ನ ಆತ್ಮದ ಅರ್ಧಭಾಗ. ನೀನು ಪ್ರತಿದಿನ ನಮ್ಮ ಮನೆಯ ಬಾಗಿಲು ನೋಡುತ್ತ ಆಗೋ ನೀನು ಬಂದು ಬಿಟ್ಟೆ ಎನ್ನುವ ಭಾವನೆ. ನಾ ಮನೆಗೆ ಬಂದೆ ಎನ್ನುತ್ತ ನೀನು ಮನೆಗೆ ಬಂದೇಬಿಡುವೆ ಎಂಬ ಆಸೆ. ನೀನು ಬಾರದೇ ಹೋದಾಗ ನನ್ನ ಆತ್ಮವನ್ನೇ ಸುಡುವಂತಹ ನೋವಾಗುತ್ತೆ. ಪ್ರತಿದಿನ ಪ್ರತಿಕ್ಷಣ ನಿನ್ನನ್ನು ಸ್ಪರ್ಶಿಸಲಾಗದೇ ನನ್ನ ಕಾಕ್ಕೆಳಗಿನ ಭೂಮಿ ಕುಸಿಯುವಂತೆ ಒಂದು ನಡುಕ. ಸಾವಿರ ಬಾರಿ ನಿಧಾನವಾಗಿ ನೋವಿನಿಂದ ಸಾಯುವಂತೆ. ಆದರೆ ಪ್ರತಿಬಾರಿ ನೋವುಂಡಾಗ, ಕಣ್ಣೀರು ಹಾಕಿದಾಗ ಒಂದು ದೈವತೀತ ಅದ್ಭುತದಂತೆ ನೀನು ನನ್ನ ಸುತ್ತ ಇರುತ್ತೀಯಾ. ನಿನ್ನ ಪ್ರೀತಿಯ ರಕ್ಷಾ ಕವಚದಲ್ಲಿ ಆರೈಕೆ ಮಾಡುತ್ತಿರುವ ಭಾವನೆ ನನಗೆ. ಸದಾಕಾಲ ನನ್ನನ್ನು ರಕ್ಷಿಸುತ್ತಿರುವ ಕಾಲದೈವ ನೀನು. ಕೇಳಿದ್ರಲ್ಲ. ಈ ಮಾತುಗಳೇ ಮೇಘನಾ ಮನಸ್ಸಿನಲ್ಲಿ ಚಿರು ಯಾವಾಗಲೂ ಅಜರಾಮರವಾಗಿರ‍್ತಾರೆ ಎನ್ನುವ ಅಂಶವನ್ನ ಜಗತ್ತಿಗೆ ಸಾರಿಸಾರಿ ಹೇಳಿದೆ. ಚಿರು ಅಗಲಿಕೆಯ ನೋವು ಒಂದು ಕಡೇಯಾದ್ರೆ, ತನ್ನ ಹೊಟ್ಟೆಯೊಳಗಿರೋ ಜಗತ್ತು ನೋಡದ ಕಂದಮ್ಮ ಮುಂದಿನ ಜೀವನ ಹೇಗಿರುತ್ತೆ ಎನ್ನುವ ಸಂಕಟ. ಈ ಕಂಬನಿಗಳೇ ಈಗ ಮಾತುಗಳ ರೂಪದಲ್ಲಿ ಹೊರಬಂದಿದೆ. ಎಷ್ಟು ಅಪಾರ ನಿನ್ನ ಪ್ರೀತಿ. ನನ್ನನ್ನು ಒಂಟಿಯಾಗಿ ಬಿಟ್ಟುಹೋಗಲು ಮನಸ್ಸಾಗಲಿಲ್ಲ ನಿನಗೆ. ನಮ್ಮ ಪ್ರೀತಿಯ ಸಂಕೇತವಾಗಿ ಒಂದು ಪುಟ್ಟ ಹರುಷವನ್ನ ನನಗೆ ಕೊಟ್ಟು ಹೋಗಿದ್ದೀಯಾ. ಈ ಕಾಣಿಕೆಗೆ ನಾನು ಚಿರಋಣಿ. ನಮ್ಮ ಈ ಪುಟ್ಟ ಹರುಷವನ್ನ ಭೂಮಿಗೆ ತರುವ ಕಾತುರ ನನಗೆ. ಮಗುವಾಗಿ ನಿನ್ನನ್ನ ಮತ್ತೆ ಮುದ್ದಿಸುವ ಕಾತುರ. ನಿನ್ನ ಚಿರುನಗೆಯ ನೋಡುವ ಕಾತುರ. ನೀನಿದ್ದಲ್ಲಿ ಬೆಳಕು ಚೆಲ್ಲುವ,ನೀನಿದ್ದಲ್ಲಿ ಹರುಷ ವ್ಯಕ್ತಪಡಿಸುತ್ತಿದ್ದ ಆ ನಗುವನ್ನ ಮತ್ತೆಮತ್ತೆ ಕೇಳಬೇಕಿನಿಸಿದೆ.ನೀನು ಮತ್ತೆ ಬರುವ ವೇಳೆಗೆ ನಾನು ಕಾಯುವೆ. ನೀನು ಕೂಡ ನನಗಾಗಿ ಕಾಯುತ್ತಿರು ಆ ದಿಗಂತದ ಬದಿಯಲಿ. ನನ್ನ ಕೊನೆ ಉಸಿರು ಇರೋವರೆಗೂ ನೀನು ಚಿರಂಜೀವಿ. ನೀನು ನನ್ನಲ್ಲೇ ಇರುವೆ.

ಚಿರಂಜೀವಿ ಅಂತ್ಯಕ್ರಿಯೆಯಲ್ಲೂ ಮೇಘನಾ ಪರಿಸ್ಥಿತಿಯನ್ನ ಯಾರಿಗೋ ನೋಡೊಕೆ ಆಗಲಿಲ್ಲ. ಮೇಘನಾರನ್ನ ಸಂತೈಸುವ ಕೆಲಸ ಅಸಾಧ್ಯವಾಗಿಬಿಟ್ಟಿತ್ತು. ಚಿರಂಜೀವಿ ನಮ್ಮೊಂದಿಗಿಲ್ಲ ಎನ್ನುವ ಸತ್ಯವನ್ನ ಮೇಘನಾ ಒಪ್ಪಿಕೊಳ್ಳಲು ತಯಾರಿರಲಿಲ್ಲ. ಚಿರು ಎಲ್ಲೂ ಹೋಗಿಲ್ಲ ನಮ್ಮ ಮಧ್ಯೆಯೇ ನಗುತ್ತಿದ್ದಾರೆ ಎಂಬ ಭಾವ ಎಲ್ಲರ ಮನಸ್ಸುಗಳನ್ನ ವಾಸಿಮಾಡದಷ್ಟು ಘಾಸಿಗೊಳಿಸಿಬಿಟ್ಟಿತ್ತು.

ಚಿರು ಚಿತ್ರಣವನ್ನ ಮೇಘನಾ ಮನಸ್ಸಿನಿಂದ ಎಂದಿಗೂ ಅಳಿಸಲಾಗದು. ಇಬ್ಬರ ಭಾಂಧ್ಯವ್ಯ ಈಗ ಪುಟ್ಟ ಕಂದಮ್ಮನ ರೂಪದಲ್ಲಿ ಮತ್ತೊಮ್ಮೆ ಜೀವ ಪಡೆದುಕೊಳ್ಳಲಿದೆ. ಹೆಸರಿಗೆ ತಕ್ಕಂತೆ ಚಿರಂಜೀವಿ ಕನ್ನಡಿಗರ ಹೃದಯಗಳಲ್ಲಿ ಸದಾ ಚಿರಂಜೀವಿಯೇ. ಚಿರು ಸ್ಮೈಲ್ ಇಂದಿಗೂ ಪ್ರೇಕ್ಷಕನ ಕಣ್ಣಗಳಲ್ಲಿ ಫೋಟೊ ಹೊಡೆದಂತಿದೆ. ಅದು ಯಾವಾಗಲೂ ನಿರಂತರ. ಅಂತ್ಯಕಾಣದ ಚೇತನ.

 

LEAVE A REPLY

Please enter your comment!
Please enter your name here