ಬುದ್ಧಿಮಾಂದ್ಯ ಮಗು ಎಂದು ಹೆತ್ತ ತಾಯಿಯಿಂದಲೇ ಮಗುವಿನ ಹತ್ಯೆ: ಪೊಲೀಸ್ ಠಾಣೆಯಲ್ಲಿ ತಂದೆ ಕಿರಣ್ ಕಣ್ಣೀರು

ಬೆಂಗಳೂರು

ಬೆಂಗಳೂರು: ಬುದ್ಧಿಮಾಂದ್ಯ ಮಗು ಎಂದು ಹೆತ್ತ ತಾಯಿಯೇ ತನ್ನ ಮಗುವನ್ನು ಹತ್ಯೆ ಮಾಡಿದ ಪ್ರಕರಣ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ. ಈ ಸಂಬಂಧ ಸಂಪಂಗಿರಾಮನಗರ ಪೊಲೀಸ್ ಠಾಣೆಯಲ್ಲಿ ಮೃತ ಮಗುವಿನ ತಂದೆ ಕಿರಣ್ ಹೇಳಿಕೆ ಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಹೇಳಿಕೆ ವೇಳೆ ಕಿರಣ್ ಪೊಲೀಸರ ಎದುರು ಕಣ್ಣೀರು ಹಾಕಿದ್ದಾರೆ. ಅವಳಿಗೆ ಕಷ್ಟ ಅಂತಾ ಹೇಳಿದ್ರೆ ನನ್ನ ಮಗುವನ್ನು ನಾನೆ ನೊಡಿಕೊಳ್ತಿದ್ದೆ. ಈ ಹಿಂದೆ ಕೂಡ ನನ್ನ ಮಗುವನ್ನು ಬೇರೆ ರೈಲು ಹತ್ತಿಸಿ ಬಂದಿದ್ದಳು.

ಆದರೆ ತಾಯಿಯೇ ಮಗುವನ್ನು ಹೇಗೆ ಬಿಡಲು ಸಾಧ್ಯ ಎಂದು ತಿಳಿದು, ಎಲ್ಲೊ ದಾರಿ ತಪ್ಪಿರಬಹುದು ಎಂದುಕೊಂಡಿದ್ದೆವು. ಎನ್ ಜಿ ಓ ಒಂದರ ಸಹಾಯದಿಂದ ಮಗು ಮತ್ತೆ ಪೋಷಕರ ಮನೆ ಸೇರಿತ್ತು. ಆದರೆ ಈ ರೀತಿ ನನ್ನ ಹೆಂಡತಿ ಮಾಡುತ್ತಾಳೆ ಎಂದುಕೊಂಡಿರಲಿಲ್ಲ ಎಂದು ಪೊಲೀಸರ ಮುಂದೆ ಕಿರಣ್ ಕಣ್ಣೀರು ಹಾಕಿದ್ದಾರೆ. ಇನ್ನೂ ಕಿರಣ್ ಪತ್ನಿ ಸುಷ್ಮಾ ವಿರುದ್ಧ ಕೊಲೆ‌ ಕೇಸ್ ದಾಖಲಿಸಿಕೊಂಡಿರೊ‌ ಎಸ್ ಆರ್ ನಗರ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published.