Home Home ಚಿಕ್ಕೋಡಿ ತಾಲೂಕಿನಲ್ಲಿ ಅಕ್ರಮ ಮಣ್ಣುಗಾರಿಕೆ; ಕಣ್ಣುಮುಚ್ಚಿ ಕುಳಿತ ತಾಲ್ಲೂಕು ಆಡಳಿತ

ಚಿಕ್ಕೋಡಿ ತಾಲೂಕಿನಲ್ಲಿ ಅಕ್ರಮ ಮಣ್ಣುಗಾರಿಕೆ; ಕಣ್ಣುಮುಚ್ಚಿ ಕುಳಿತ ತಾಲ್ಲೂಕು ಆಡಳಿತ

ಚಿಕ್ಕೋಡಿ ತಾಲೂಕಿನಲ್ಲಿ ಅಕ್ರಮ ಮಣ್ಣುಗಾರಿಕೆ; ಕಣ್ಣುಮುಚ್ಚಿ ಕುಳಿತ ತಾಲ್ಲೂಕು ಆಡಳಿತ

214
0
SHARE

ಸದ್ಯ ಎಲ್ಲ ಕಡೆಗಳಲ್ಲಿ ಖಡಕ್ ಲಾಕಡೌನ ಜಾರಿಯಲ್ಲಿದೆ…ಆದರೆ ಚಿಕ್ಕೋಡಿ ತಾಲೂಕಿನ ಮಾತ್ರ ಲಾಕಡೌನ ಮಧ್ಯಯೂ ರಾಜಾರೋಷವಾಗಿ ಅಕ್ರಮವಾಗಿ ಮಣ್ಣುಗಾರಿಕೆ ಸದ್ದಿಲ್ಲದೆ ಸಾಗುತ್ತಿದೆ‌. ಇಷ್ಟೆಲ್ಲಾ ನಡೆಯುತ್ತಿದ್ದರೂ ಚಿಕ್ಕೋಡಿ ತಾಲೂಕಾಡಳಿತ ಮಾತ್ರ ಕಂಡು ಕಂಡರಿಯದಂತೆ ಕಣ್ಣು‌ ಮುಚ್ಚಿ ಕುಳಿತ್ತಿದೆ ಈ ಕುರಿತಂತೆ ಒಂದು ವರದಿ ಇಲ್ಲಿದೆ ನೋಡಿ.

ಚಿಕ್ಕೋಡಿ ತಾಲೂಕಾದ್ಯಂದತ ರಾಜಾರೋಷವಾಗಿ ನಡೆಯುತ್ತಿದೆ ಅಕ್ರಮ ಮಣ್ಣುಗಾರಿಕೆ….ಲಾಕಡೌನ ಮಧ್ಯೆಯೂ ಹಗಲು ರಾತ್ರಿ ಎನ್ನದೆ ಲಾರಿ ಟ್ರಾಕ್ಟರ್ ನ ಮೂಲಕ ನಡೆಯುತ್ತಿದೆ ಕಳ್ಳ ದಂಧೆ…ಹದಗೆಟ್ಟು ಹೋಗುತ್ತಿರುವ ರಸ್ತೆಗಳು ಹೌದು ಹಿಗೋಂದು ದೃಶ್ಯಗಳು ಕಂಡು ಬಂದಿದ್ದು,ಚಿಕ್ಕೋಡಿ ತಾಲೂಕಿನ ಯಡೂರ,ಚಂದೂರ,ಚಂದೂರಟೆಕ್ ಗ್ರಾಮಗಳಲ್ಲಿ ಸದ್ಯ ಕರೊ‌ನಾ ಲಾಕಡೌನ ನಲ್ಲಿ ಅಧಿಕಾರಿಗಳು ಬ್ಯುಸಿ ಆಗಿದ್ದಾರೆ.ಇದನ್ನೆ ಬಂಡವಾಳ ಮಾಡಿಕೊಂಡ ‌ಖದಿಮರು‌ ಮಣ್ಣು ತಿನ್ನುವ ಕೆಲಸಕ್ಕೆ ಮುಂದಾಗಿದ್ದಾರೆ.

ಯಡೂರ, ಚಂದೂರ,ಚಂದೂರಟೇಕ ಗ್ರಾಮಗಳಲ್ಲಿ ಕಳೆದ ೧ ತಿಂಗಳುಗಳಿಂದ ಸದ್ದಿಲ್ಲದೆ ಹಗಲು ರಾತ್ರಿ ಎನ್ನದೆ ಅಕ್ರಮ ಮಣ್ಣುಗಾರಿಕೆ ನಡೆಯುತ್ತಿದೆ. ನದಿತೀರದ ಹೊಲಗಳಲ್ಲಿ ಜೆಸಿಬಿಯ ಮೂಲಕ 10 ಅಡಿಯಷ್ಟು ಮಣ್ಣು ತೆಗೆದು ಮಾರಾಟ ಮಾಡುವ ದಂಧೆ ನಡೆಯುತ್ತಿದೆ ಇಷ್ಟೆಲ್ಲಾ ನಡೆಯುತ್ತಿದೆ.ಚಿಕ್ಕೊಡಿ ತಾಲೂಕಾಡಳಿತ ಕಂಡು ಕಂಡೆ ಇಲ್ಲಾ ಅನ್ನುವಂತೆ ಕಣ್ಣುಮುಚ್ಚಿಕುಳಿತ್ತಿದೆ.ಇನ್ನೂ ಮಣ್ಣನ್ನು ಹೊತ್ತು ವಾಹನದಿಂದ ಯಡೂರ ಗ್ರಾಮದ ಸರಳ ರೋಡ ಸಂಪೂರ್ಣವಾಗಿ ಹಾಳಾಗಿಹೋಗಿದೆ.ಇದರಿಂದ ಈ ರಸ್ತೆಯಲ್ಲಿ ೨-೩ ಅಡಿಯಷ್ಟು ಗುಂಡಿಗಳು ಬಿಳುತ್ತಿವೆ.

ಇದು ರೈತರ ಅನುಕೂಲಕ್ಕಾಗಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಈ ರಸ್ತೆಯನ್ನು ಮಾಡಲಾಗಿದೆ.ಆದರೆ ಮಣ್ಣು ಸಾಗಾಣಿಕೆಯಿಂದ ಈ ರಸ್ತೆಯು ಹಾಳಾಗುತ್ತಿದೆ..ಇದರಿಂದ ಗ್ರಾಮ ಪಂಚಾಯನವರು ಯಡೂರ ಗ್ರಾಮದಲ್ಲಿ ಮಣ್ಣು ಸಾಗಾಣಿಕೆಯ ವಾಹನಗಳ ಸಂಚಾರವನ್ನು ಬಂದಮಾಡಬೇಕೆಂದು ರೈತರಾದ ರವೀಂದ್ರ ಬೋರಗಾಂವೆ ಆಗ್ರಹಿಸಿದಾರೆ.

ರೈತರ ಹೊಲಗಳಲ್ಲಿನ ಮಣ್ಣನ್ನು ಅತ್ಯಂತ ಕಡಿಮೆದರಲ್ಲಿ ಮಾರಾಟವಾಗುತ್ತಿದೆ.ದಂಧೆಕೋರರು ಕಡಿಮೆ ಬೆಲೆಯಲ್ಲಿ ಮಣ್ಣನ್ನು ಪಡೆದು ಹೆಚ್ಚಿನ ಬೆಲೆಗೆ ಇಟ್ಟಿಗೆ ಭಟ್ಟಿಗಳಿಗೆ ಮಾರಾಟ ಮಾಡುತ್ತಿದ್ದಾರೆ.ನದಿತೀರದಲ್ಲಿ ಮಣ್ಣನ್ನು ತೆಗೆದರೆ ಪ್ರವಾಹ ಸಂಧರ್ಭದಲ್ಲಿ ನದಿಯ ತೀರದ ನೀರು ಬೇಗನೆ ಊರಗಳತ್ತ ಬರುತ್ತದೆ‌ ಎಂಬ ಆತಂಕವು ಜನರಲ್ಲಿ ಕಾಡುತ್ತಿದೆ..ಈ‌ ಕುರಿತಂತೆ ಸ್ಥಳೀಯರು ಚಿಕ್ಕೋಡಿಯ ತಾಲೂಕಾಡಳಿತದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನೆ ಆಗುತ್ತಿಲ್ಲ ಎಂದು ಸ್ಥಳೀಯರು ಅಳಲನ್ನು ತೋಡಿಕೋಳ್ಳುತ್ತಿದ್ದಾರೆ.

ಒಟ್ಟಿನಲ್ಲಿ ಚಿಕ್ಕೋಡಿ ತಾಲೂಕಿನ ನದಿತೀರದಲ್ಲಿ ರಾಜಾರೋಷವಾಗಿ ಅಕ್ರಮವಾಗಿ ಮಣ್ಣುಗಾರಿಗೆಯು ಸದ್ದಿಲ್ಲದೆ ನಡೆಯುತ್ತಿದೆ…ಇದು ನದಿ ತೀರದ ಜನರ ನಿದ್ದೆಗೆಡಿಸಿದೆ. ಮಣ್ಣುಗಾರಿಕೆ ಹೀಗೆ ಮುಂದುವರಿದರೇ ಲಾಕಡೌನ ಸಂಧರ್ಭದಲ್ಲಿಯೂ ಉಗ್ರವಾದ ಪ್ರತಿಭಟನೆಯನ್ನು ಮಾಡಲಾಗವುದು ಎಂದು ನದಿತೀರದ ಜನರು ತಾಲೂಕಾಡಳಿತಕ್ಕೆ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.

LEAVE A REPLY

Please enter your comment!
Please enter your name here