Home Politics ಕೊರೊನಾ ಹಿನ್ನಲೆಯಲ್ಲಿ ಮೂವರು ಸಚಿವರ ಸಭೆ; ಅಧಿಕಾರಿಗಳಿಗೆ ಟಫ್ ರೂಲ್ಸ್!

ಕೊರೊನಾ ಹಿನ್ನಲೆಯಲ್ಲಿ ಮೂವರು ಸಚಿವರ ಸಭೆ; ಅಧಿಕಾರಿಗಳಿಗೆ ಟಫ್ ರೂಲ್ಸ್!

237
0
SHARE

ರಾಜ್ಯದಲ್ಲಿ ಮಹಾಮಾರಿಯ ಅಬ್ಬರ ಹೆಚ್ಚಾಗಿದೆ. ಕೊರೊನಾ ವ್ಯಾಪಕವಾಗಿ ಹರಡುತ್ತಿದೆ. ಈ ಹಿನ್ನಲೆಯಲ್ಲಿ ಮೂವರು ಸಚಿವರು ಸಭೆ ನಡೆಸಿ ಅಧಿಕಾರಿಗಳಿಗೆ ಟಫ್ ರೂಲ್ಸ್ ಜಾರಿ ಮಾಡುವಂತೆ ಸೂಚನೆ ನೀಡಿದ್ದಾರೆ.

ಸಿಎಂ ಬಿಎಸ್ ವೈ ಅವರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಕೋವಿಡ್ ನಿರ್ವಹಣೆಯನ್ನ ಹೊಣೆಯನ್ನ ಹಿರಿಯ ಸಚಿವರಿಗೆ ನೀಡಲಾಗಿದೆ. ಸಚಿವರಾದ ಸುಧಾಕರ್, ಬೊಮ್ಮಾಯಿ, ಅಶೋಕ್ ಅವರು ಅಧಿಕಾರಿಗಳ ಜೊತೆ ಸೇರಿ ಡಿಸಿ, ಎಸ್ಪಿ ಗಳೊಂದಿಗೆ ವಿಕಾಸ ಸೌಧದಲ್ಲಿ ವಿಡಿಯೋ ಸಂವಾದ ನಡೆಸಿದ್ರು. ಸಭೆಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಖಡಕ್ ರೂಲ್ಸ್ ಜಾರಿ ಮಾಡುವಂತೆ ಡಿಸಿಗಳಿಗೆ ಸೂಚನೆ ನೀಡಲಾಗಿದೆ. ಇನ್ನು ಯಾವುದೇ ಜಾತ್ರೆ ಕಾರ್ಯಕ್ರಮ ನಡೆಯುವುದಕ್ಕೆ ನಿಷೇಧ ಹೇರಲಾಯ್ತು. ಜಾತ್ರೆ ನಡೆದರೇ ಡಿಸಿಗಳೆ ಹೊಣೆಯಾಗುತ್ತಾರೆ ಎಂದು ವಾರ್ನಿಂಗ್ ಮಾಡಲಾಯ್ತು. ಒಂದು ತಿಂಗಳ ಮೊದಲು ಜಾತ್ರೆ ನಡೆಯುವ ಸ್ಥಳಕ್ಕೆ ತೆರಳಿ ಜನರನ್ನು ಮನವೊಲಿಸಿ ಜಾತ್ರೆ ನಡೆಸದಂತೆ ಸೂಚನೆ ನೀಡಿ ಎಂದು ಹೇಳಲಾಯ್ತು. ಸಣ್ಣ ಪ್ರಮಾಣದಲ್ಲಿ ನಡೆಯುವ ಜಾತ್ರೆಗಳಿಗೆ ತಹಶೀಲ್ದಾರರು ತೆರಳಿ ಮನವೊಲಿಕೆ ಮಾಡಬೇಕೆಂದು ಸಚಿವರು ಸೂಚಿಸಿದರು.

ಕಂದಾಯ ಸಚಿವ ಆರ್ ಅಶೋಕ್ ಮಾತನಾಡಿ ಇನ್ನೂ ಮದುವೆಗಳಿಗೂ ಟಫ್ ರೂಲ್ಸ್ ಸಭೆಯಲ್ಲಿ ಜಾರಿ ಮಾಡಲಾಯ್ತು. ಕಲ್ಯಾಣ ಮಂಟಪ ಬುಕ್ ಮಾಡುವ ಮದ್ವೆಗಳಿಗೆ ಕಡ್ಡಾಯವಾಗಿ ಪಾಸ್ ಇರಬೇಕೆಂದು ತೀರ್ಮಾನಿಸಲಾಯ್ತು. ಜಿಲ್ಲಾಡಳಿತ ನಿಗದಿತ ಸಂಖ್ಯೆಯ ಪಾಸ್ ವಿತರಣೆ ಮಾಡಲಿದೆ. ಈಗಾಗಲೇ ಕಲ್ಯಾಣ ಮಂಟಪ ಬುಕ್ ಮಾಡಿರುವವರಿಗೆ ಪಾಸ್ ನ ಅವಶ್ಯಕತೆ ಇರೋದಿಲ್ಲ. ಒಳಾಂಗಣದಲ್ಲಿ ಮದ್ವೆಗೆ 100 ಜನ ಹಾಗೂ ಹೋರಾಂಗಣದಲ್ಲಿ ನಡೆಯುವ ಮದ್ವೆಗಳಿಗೆ 200 ಜನರಿಗೆ ಅವಕಾಶ ನೀಡಲಾಗಿದೆ. ಸಂಖ್ಯೆ ಹೆಚ್ಚಾದ್ರೆ ಕಲ್ಯಾಣ ಮಂಟಪದವರನ್ನೆ ನೇರ ಹೊಣೆಗಾರಿಕೆ ಮಾಡಿ , ಕಲ್ಯಾಣ ಮಂಟಪವನ್ನೇ ಬಂದ್ ಮಾಡುವಂತೆ ಡಿಸಿಗಳಿಗೆ ಸಚಿವರುಗಳು ಖಡಕ್ ಸೂಚನೆ ನೀಡಿದ್ದಾರೆ.

ಗೃಹ ಸಚಿವ ಬಸವರಾಜ್ ಬೊಮ್ಮಯಿ ಮಾತನಾಡಿ ಇನ್ನು ಸಭೆಯಲ್ಲಿ ಆಕ್ಸಿಜನ್ ಶಾರ್ಟೇಜ್ ಆಗದಂತೆ ನಿಗಾ ವಹಿಸಬೇಕು, ಹಾಗೇಯೇ ಹೆಚ್ಚುವರಿ ಬೆಡ್ ಗಳಿಗೆ ಬೇಕಾದ ವ್ಯವಸ್ಥೆ ಈಗಲೇ ಮಾಡಿಕೊಳ್ಳಬೇಕೆಂದು ಡಿಸಿಗಳಿಗೆ ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರಿನ ಎಲ್ಲಾ ಸಚಿವರು, ಶಾಸಕರು ಜತೆ ಸಿಎಂ ಸೋಮವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಬೆಂಗಳೂರಿಗೆ ಸಪರೇಟ್ ಟಫ್ ರೂಲ್ಸ್ ಜಾರಿ ಮಾಡುವ ಬಗ್ಗೆ ಸೋಮವಾರದ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here