Home District ಮನೆ ಹೊರಗ ಹೋದ್ರೆ ಕೊರೊನಾ ಕಾಟ ಮನೆಯಲ್ಲಿದ್ರೆ ಕೋತಿಗಳ ಕಾಟ;  ಗ್ರಾಮಸ್ಥರು ಫುಲ್ ಹೈರಾಣ

ಮನೆ ಹೊರಗ ಹೋದ್ರೆ ಕೊರೊನಾ ಕಾಟ ಮನೆಯಲ್ಲಿದ್ರೆ ಕೋತಿಗಳ ಕಾಟ;  ಗ್ರಾಮಸ್ಥರು ಫುಲ್ ಹೈರಾಣ

257
0
SHARE

ಗದಗ : ಗದಗ ಜಿಲ್ಲೆಯ ಶಿರಹಟ್ಟಿಯ ಖಾನಾಪುರ ಗ್ರಾಮದಲ್ಲಿ ಮಂಗಗಳ ಹಾವಳಿ ಹೇಳತೀರದಾಗಿದೆ. ಶಿರಹಟ್ಟಿ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಈ ಪುಟ್ಟ ಗ್ರಾಮದ ಜನರು ಮಂಗಗಳ ಹಾವಳಿಯಿಂದ ಹೈರಾಣಾಗಿದ್ದಾರೆ. ಮನುಷ್ಯ ಓಡಾಡುವ ಹಾಗೇ, ಮಂಗಗಳು ಓಡಾಡುತ್ತವೆ. ಬೇರೆ ಊರಿಂದ ಯಾರಾದರೂ ಚೀಲವನ್ನು ಕೈಯಲ್ಲಿ ಹಿಡಿದುಕೊಂಡು ಬಂದರೆ ಸಾಕು ಮಂಗಗಳು ದಾಳಿ ಮಾಡಿ, ಅದನ್ನು ಕಸಿದುಕೊಂಡು ಹೋಗುತ್ತವೆ. ಇನ್ನು, ಮನೆಯ ಬಾಗಿಲು ಹಾಕಿಕೊಂಡು ಇರದಿದ್ದರೆ ಯಾರ ಅಂಜಿಕೆ ಇಲ್ಲದೆ ಮನೆಯ ಒಳಗೆ ಪ್ರವೇಶ ಮಾಡಿ ಮನೆಯಲ್ಲಿ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತವೆ. ಹೀಗಾಗಿ ಗ್ರಾಮದ ಮಕ್ಕಳು, ಮಹಿಳೆಯರು ಮಂಗಗಳ ಹಾವಳಿಯಿಂದ ಬೇಸತ್ತು ಹೋಗಿದ್ದಾರೆ.

ಈ ಗ್ರಾಮದ ಜನರು ಮಂಗಗಳ ಹಾವಳಿಗೆ‌ ಕಡಿವಾಣ ಹಾಕಲು ಮನೆಗಳ ಮೇಲ್ಛಾವಣಿಗೆ ಮುಳ್ಳು ಕಂಠಿಗಳನ್ನು ಹಾಕಿದ್ದಾರೆ. ಆದರೆ, ವಾನರ ಸೈನ್ಯ ಅಂಜಿಕೆ ಇಲ್ಲದೆ ಮನೆಗಳ ಮೇಲೆ‌ ದಾಳಿ ಮಾಡುತ್ತಿವೆ. ನೂರಾರು ಮಂಗಗಳು ಈ ಗ್ರಾಮದಲ್ಲಿ ಕಳೆದ ಒಂದು ವರ್ಷದಿಂದ ಲಗ್ಗೆ ಇಟ್ಟಿವೆ. ಗ್ರಾಮವನ್ನು ಬಿಟ್ಟು ಬೇರೆ ಕಡೆ ಹೋಗುತ್ತಿಲ್ಲ. ಮುಂಜಾನೆಯಿಂದ ಸಂಜೆಯವರೆಗೆ ಗ್ರಾಮದಲ್ಲಿರುವ ಮಂಗಗಳು ಗ್ರಾಮಸ್ಥರಿಗೆ ಕಿರುಕುಳ ನೀಡುತ್ತಿವೆ. ಹೀಗಾಗಿ ಮಂಗಗಳನ್ನು ಗ್ರಾಮದಿಂದ ಹಿಡಿದುಕೊಂಡು ಹೋಗುವಂತೆ ಮನವಿ ಮಾಡಿದರೂ ಅಧಿಕಾರಿಗಳು ಕೇರ್ ಮಾಡಿಲ್ಲ.

LEAVE A REPLY

Please enter your comment!
Please enter your name here