Home Home ಜಿಪಂ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣ : ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜಾಮೀನು ಮಂಜೂರು,...

ಜಿಪಂ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣ : ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜಾಮೀನು ಮಂಜೂರು, ಪಟಾಕಿ ಸಿಡಿಸಿ ಸಂಭ್ರಮಿಸಿದ ಅಭಿಮಾನಿಗಳು

Murder of a ZP member Yogeshgowda | ಜಿಪಂ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣ

298
0
SHARE

ವರದಿ; ಸಿದ್ದಪ್ಪ ಪೂಜಾರ, ಧಾರವಾಡ

ಧಾರವಾಡ; ಜಿಪಂ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣ : ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜಾಮೀನು ಮಂಜೂರು, ಪಟಾಕಿ ಸಿಡಿಸಿ ಸಂಭ್ರಮಿಸಿದ ಅಭಿಮಾನಿಗಳು.

ಧಾರವಾಡ ಜಿಲ್ಲಾ ಪಂ‌ಚಾಯತ್​ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ಆರೋಪಿ, ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಸುಪ್ರೀಂಕೋರ್ಟ್​ 302 ಕೇಸ್ ನಲ್ಲಿ ಇಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಸಾಕ್ಷ್ಯ ನಾಶ ಕೇಸ್ ನಲ್ಲಿ ಬೇಲ್ ಸಿಕ್ಕ ಮೇಲಷ್ಟೇ ಸೇರೇಮನೆ ವಾಸದಿಂದ ಹೊರಬರಲಿದ್ದಾರೇ. ಆದರೆ ವಿನಯ್ ಅಭಿಮಾನಿಗಳು ಮಾಜಿ ಸಚಿವರಿಗೆ ಜಾಮೀನು ಮಂಜೂರಾದ ಸುದ್ದಿ ತಿಳಿಯುತ್ತಿದ್ದಂತೆ ಮಾಜಿ ಸಚಿವರ ಮನೆ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಧಾರವಾಡದ ಹೆಬ್ಬಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಒಂಭತ್ತು ತಿಂಗಳ ಹಿಂದೆ ಬಂಧನಕ್ಕೆ ಒಳಗಾಗಿದ್ದ ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಕೊನೆಗೂ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಇದರಿಂದಾಗಿ ವಿನಯ ಕುಲಕರ್ಣಿ ಹಾಗೂ ಅವರ ಕುಟುಂಬದವರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ. ಸಿಬಿಐ ವಿನಯ ಕುಲಕರ್ಣಿ ಅವರನ್ನು ನವೆಂಬರ್ 05, 2020 ರಂದು ಬಂಧಿಸಿತ್ತು. ಅಂದಿನಿಂದಲೂ ವಿನಯ ಕುಲಕರ್ಣಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ. ಈ ಕೊಲೆಗೆ ಸಂಬಂಧಿಸಿದಂತೆ ಇಂದು ವಿಚಾರಣೆ ಆರಂಭಿಸಿದ ಸುಪ್ರಿಂ ಕೋರ್ಟ್, ವಿನಯ ಕುಲಕರ್ಣಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತು. ಯೋಗೀಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಜಾಮೀನು ಮಂಜೂರು ಮಾಡಿದ ಸುಪ್ರೀಂ ಕೋರ್ಟ್, ಅನೇಕ ಷರತ್ತುಗಳನ್ನು ವಿಧಿಸಿದೆ. ಯಾವುದೇ ಕಾರಣಕ್ಕೂ ಧಾರವಾಡ ಜಿಲ್ಲೆಗೆ ಹೋಗುವಂತಿಲ್ಲ ಅಂತಾ ಷರತ್ತಿನಲ್ಲಿ ಹೇಳಿರೋ ಸುಪ್ರೀಂ ಕೋರ್ಟ್ ಯಾವುದೇ ಕಾರಣಕ್ಕೂ ಸಾಕ್ಷಿಗಳಿಗೆ ಬೆದರಿಕೆ ಹಾಕುವಂತಿಲ್ಲ. ಇನ್ನು ವಾರದಲ್ಲಿ ಎರಡು ಬಾರಿ ಪೊಲೀಸ್ ಠಾಣೆಗೆ ಭೇಟಿ ನೀಡಿ, ಸಹಿ ಮಾಡಿ ಬರಬೇಕು ಅಂತಾ ಹೇಳಿದೆ. ಅತ್ತ ಜಾಮೀನು ಮಂಜೂರು ಆಗುತ್ತಿದ್ದಂತೆಯೇ ಇತ್ತ ಧಾರವಾಡದಲ್ಲಿ ಅವರ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಗರದ ಶಿವಗಿರಿ ಬಡಾವಣೆಯ ಅವರ ಮನೆಗೆ ದೌಡಾಯಿಸಿದ ಸ್ಥಳೀಯ ನಾಯಕರು ಹಾಗೂ ಬೆಂಬಲಿಗರು, ವಿನಯ ಕುಟುಂಬದವರನ್ನು ಭೇಟಿಯಾಗಿ ಶುಭ ಕೋರಿದರು.. ಇನ್ನು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರಿಗೆ ಸುಪ್ರಿಂ ಕೋರ್ಟ್ ಆದೇಶದಿಂದ ಸಂತಸವಾಗಿದೆ.

ಇನ್ನು ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದರೂ ಮಾಜಿ ಸಚಿವನಿಗೆ ಬಿಡುಗಡೆ ಭಾಗ್ಯವಿಲ್ಲ. ಇದೀಗ ವಿನಯ್ ಗೆ ಜಾಮೀನು ಸಿಕ್ಕಿರೋದು ಕೊಲೆ ಕೇಸಿನಲ್ಲಿ ಮಾತ್ರ. ಆದರೆ ಮತ್ತೊಂದೆಡೆ ಕೊಲೆಯ ನಂತರ ಸಾಕ್ಷಿ ನಾಶ ಮಾಡಿರೋ ಆರೋಪವೂ ವಿನಯ ಮೇಲಿದೆ. ಈ ಕುರಿತು ಈಗಾಗಲೇ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಕೇಸು ನಡೆಯುತ್ತಿದ್ದು, ಈಗಾಗಲೇ ಇದೇ ನ್ಯಾಯಾಲಯ ಜಾಮೀನು ತಿರಸ್ಕರಿಸಿದೆ. ಜಾಮೀನಿಗಾಗಿ ವಿನಯ ಪರ ವಕೀಲರು ಬೆಂಗಳೂರಿನ ಹೈಕೋರ್ಟ್ ಗೆ ಮೊರೆ ಹೋಗಿದ್ದಾರೆ. ಹೀಗಾಗಿ ಈ ಕೇಸ್ ನಲ್ಲಿ ಜಾಮೀನು ಸಿಕ್ಕರೆ ಮಾತ್ರ ವಿನಯಗೆ ಬಿಡುಗಡೆಯ ಭಾಗ್ಯ ಲಭಿಸಲಿದೆ. ಅಲ್ಲಿಯವರೆಗೂ ವಿನಯ ಕುಲಕರ್ಣಿ ಜೈಲಿನಲ್ಲಿಯೇ ಉಳಿಯಬೇಕಿದೆ. ಇನ್ನು ಯೋಗೀಶ್ ಗೌಡ ಪರ ಹೋರಾಟ ಮಾಡುತ್ತಿದ್ದ ಅವರ ಮಿತ್ರ ಬಸವರಾಜ ಕೊರವರ್ ಜಾಮೀನು ಕುರಿತು ಪ್ರತಿಕ್ರಿಯಿಸಿ, ನಾವು ಕಾನೂನು ಹೋರಾಟವನ್ನು ಮುಂದುವರೆಸುತ್ತೇವೆ ಅಂತಾ ಹೇಳಿದ್ದಾರೆ.

ಮಾಜಿ ಸಚಿವ ವಿನಯ್ ಕುಲಕರ್ಣಿ ಅವ್ರಿಗೆ ಸುಪ್ರೀಂ ಕೋರ್ಟ್ ನಲ್ಲಿ ಸಧ್ಯಕ್ಕೆ ಕೊಲೆ ಕೇಸಿಗೆ ಸಂಬಂಧಿಸಿದಂತೆ ಜಾಮೀನು ನೀಡಿದೆ. ಆದರೆ ಪ್ರಮುಖವಾದ ಸಾಕ್ಷಿ ನಾಶ ಪ್ರಕರಣದಲ್ಲಿ ಜಾಮೀನು ನೀಡಿಲ್ಲ. ಒಟ್ನಲ್ಲಿ ಕಳೆದ 9 ತಿಂಗಳಿಂದ ಜೈಲಿನಲ್ಲಿದ್ದ ವಿನಯಗೆ ಜಾಮೀನು ಸಿಕ್ಕಿದ್ದು ಕುಟುಂಬಸ್ಥರಿಗೆ ಕೊಂಚ ಸಂತಸ ಆಗಿದ್ದು, ಇನ್ನೊಂದು ಪ್ರಕರಣದಲ್ಲು ಜಾಮೀನು ಪಡೆದು ಹೊರಬರ್ತಾರ ಕಾದು ನೋಡಬೇಕಿದೆ.

 

 

LEAVE A REPLY

Please enter your comment!
Please enter your name here