Home Crime ಹುಡುಗಿಯ ವಿಷಯದಿಂದಾಗಿ ಮರಳಿ ಬಾರದ ಊರಿಗೆ ಪಯಣಿಸಿದ ಪ್ರಿಯಕರ!

ಹುಡುಗಿಯ ವಿಷಯದಿಂದಾಗಿ ಮರಳಿ ಬಾರದ ಊರಿಗೆ ಪಯಣಿಸಿದ ಪ್ರಿಯಕರ!

606
0

ಚಿಕ್ಕಮಗಳೂರು: ಆ ಕಟ್ಟುಮಸ್ತಿನ ಹುಡ್ಗ ಡಿಪ್ಲೋಮಾ ಮಾಡಿಕೊಂಡು ರಾಜಧಾನಿ ಬೆಂಗಳೂರಿನಲ್ಲಿ ಕೆಲಸವನ್ನು ಮಾಡುತ್ತಿದ್ದ. ಒಳ್ಳೆ ಬಾಡಿ ಬಿಲ್ಡ್ ಮಾಡಿದ ಆ ಮಸಲ್ ಮ್ಯಾನ್, ತನ್ನೂರಿನಲ್ಲೇ ತಾನು ಏನೆಂಬುದನ್ನ ತೋರಿಸಬೇಕು ಅಂತಾ ಕಾಫಿನಾಡಿಗೆ ಹಿಂದಿರುಗಿದ್ದ. ಮಿಸ್ಟರ್ ಚಿಕ್ಕಮಗಳೂರು ಆಗ್ಬೇಕು ಅನ್ನೋ ಕನಸು ಕಂಡು ಅದಕ್ಕೆ ತಕ್ಕಂತೆ ಕಸರತ್ತು ಕೂಡ ಮಾಡ್ತಿದ್ದ. ಆದ್ರೆ ತಾನೊಂದು ಬಗೆದರೆ ದೈವವೊಂದು ಬಗೆದಂತೆ ಅನ್ನೋ ಹಾಗೆ ಆ ಕನಸುಗಾರನ ಕನಸುಗಳೆಲ್ಲಾ ಆತನೊಂದಿಗೆ ಸಮಾಧಿಯಾಗಿದೆ.. ಅಷ್ಟಕ್ಕೂ ಅಲ್ಲಿ ಆಗಿದ್ದೇನು ಅಂತೀರಾ..? ಇಲ್ಲಿದೆ ನೋಡಿ ವರದಿ.
ಇಂದು ಬೆಳಂ ಬೆಳಗ್ಗೆ ಕೂಲ್ ಆಗಿದ್ದ ಕಾಫಿನಾಡು, ಹೊತ್ತು ಕಳೆಯುತ್ತಲೇ ಹಾಟ್ ಆಗ ತೊಡಗಿತು.. ಜನರ ಕಿವಿಗೆ ಅದೊಂದು ಸುದ್ದಿ ಬೀಳುತ್ತಲೇ ಎಲ್ಲರೂ ಒಟ್ಟಾಗತೊಡಗಿದ್ರು. ಸೂರ್ಯ ನೆತ್ತಿ ಮೇಲೆ ಬಂದು ಸುಡುತ್ತಿದ್ದಂತೆ ಜನರ ಸಿಟ್ಟು, ಆಕ್ರೋಶ,ಕೋಪ-ತಾಪವೆಲ್ಲಾ ಬಿಸಿಲಿನಂತೆಯೇ ಹೆಚ್ಚಾಗತೊಡಗಿತ್ತು. ಚಿಕ್ಕಮಗಳೂರು ಬಂದ್ ಗೆ ಕರೆಯನ್ನ ಕೊಡಲಾಯಿತು. ಪರಿಸ್ಥಿತಿ ಕೈ ಮೀರೋ ಹಂತ ತಲುಪಿದಾಗ ಖಾಕಿ ಪಡೆ ಅಲರ್ಟ್ ಆಯ್ತು. ಸ್ಥಳದಲ್ಲಿ ಎಸ್ಪಿ ಮೊಕ್ಕಾಂ ಹೂಡಿದ್ರು. ಜಿಲ್ಲೆಯ ಎಲ್ಲಾ ಕಡೆಯಿಂದಲೂ ಚಿಕ್ಕಮಗಳೂರು ನಗರಕ್ಕೆ ಪೊಲೀಸರು ಆಗಮಿಸಿದ್ರು.

ಅಂದಾಗೆ ಇಷ್ಟೆಲ್ಲಾ ಬೆಳವಣಿಗೆ ಕಾರಣ ಅದೊಂದು ‘ಕೊಲೆ’… ಹೌದು, ಚಿಕ್ಕಮಗಳೂರಿನ ಅಯ್ಯಪ್ಪ ನಗರದಲ್ಲಿ ನಡೆದ ಕೊಲೆ. ಅಲ್ಲಿ ಕೊಲೆಯಾಗಿದ್ದು 22 ವರ್ಷದ ಮನೋಜ್. ಎರಡು ದಿನಗಳ ಹಿಂದೆ ಮನೋಜ್ ತಲೆಗೆ ಬಲವಾದ ಕಬ್ಬಿಣದ ರಾಡ್ನಿಂದ್ ಹೊಡೆದು ಹಲ್ಲೆ ಮಾಡಲಾಗಿತ್ತು. ಚಿಕ್ಕಮಗಳೂರಿನಿಂದ-ಬೆಂಗಳೂರಿಗೆ ಕರೆದುಕೊಂಡು ಹೋದ್ರೂ ಮನೋಜ್ ನನ್ನ ಬದುಕಿಸಲು ಸಾಧ್ಯವಾಗಲಿಲ್ಲ. ತಲೆಗೆ ಬಲವಾದ ಪೆಟ್ಟು ಆಗಿದ್ರಿಂದ ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದು ಬಿಟ್ಟ. ಮನೋಜ್ ಶವವನ್ನ ತವರಿಗೆ ತಂದಾಗ ಪೋಷಕರ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಅಷ್ಟಕ್ಕೂ ಮನೋಜ್ ಕೊಲೆಯಾಗಿದ್ದು ಒಂದು ಹುಡುಗಿ ವಿಚಾರಕ್ಕೆ ಅನ್ನೋದೇ ಇಲ್ಲಿ ವಿಪರ್ಯಾಸ. ತನ್ನ ಸ್ನೇಹಿತನ ತಂಗಿಗೆ ಇನ್ನೊಬ್ಬ ಹುಡ್ಗ ಮೆಸೇಜ್ ಮಾಡ್ತಿದ್ದಾನೆ, ಸಲುಗೆಯಿಂದ ಇದ್ದಾನೆ ಅನ್ನೋ ವಿಚಾರ ತಿಳಿದು ವಾರ್ನಿಂಗ್ ಕೊಡಲು ಮನೋಜ್ ಸೇರಿ ನಾಲ್ಕೈದು ಜನರು ಹೋಗಿದ್ರು. ಅಲ್ಲಿ ಮಾತಿಗೆ ಮಾತು ಬೆಳೆದು ಎರಡು ಗುಂಪಿನ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ಮನೋಜ್ ಮೇಲೆ ಮನಸೋ ಇಚ್ಛೆ ಅಟ್ಯಾಕ್ ಮಾಡಿರೋ ಎದುರಾಳಿ ತಂಡದ ಯುವಕರು ಸ್ಥಳದಿಂದ ಪರಾರಿಯಾಗಿದ್ದಾರೆ.

ಅಂದಹಾಗೆ ಬದುಕಿನ ಯಾತ್ರೆಯನ್ನ ಮುಗಿಸಿರೋ ಮನೋಜ್ ತನ್ನ ದೇಹವನ್ನ ದಂಡಿಸಿ ಫೈಲ್ವಾನ್ ಆಗೋ ಕನಸು ಕಂಡಿದ್ದ. ಮಿಸ್ಟರ್ ಚಿಕ್ಕಮಗಳೂರು ಆಗ್ಬೇಕು ಅಂತಾ ಬೆಂಗಳೂರಿನಿಂದ ಕೆಲಸ ಬಿಟ್ಟು ಕಳೆದ ಒಂದೂವರೆ ತಿಂಗಳ ಹಿಂದೆಯಷ್ಟೇ ಚಿಕ್ಕಮಗಳೂರಿಗೆ ಹಿಂದಿರುಗಿದ್ದ. ಅದೇ ಉತ್ಸಾಹ, ಹುಮ್ಮಸ್ಸಿನಿಂದ ದಿನನಿತ್ಯ ಕಸರತ್ತು ಕೂಡ ನಡೆಸ್ತಿದ್ದ. ಸ್ನೇಹಜೀವಿಯಾಗಿದ್ದ ಮನೋಜ್ ಗೆ ದೊಡ್ಡ ಸ್ನೇಹ ಬಳಗವಿತ್ತು. ಹೀಗಾಗಿಯೇ ಗೆಳೆಯರ ಏನೇ ಸಮಸ್ಯೆಗೆ ನಾನಿದ್ದೇನೆ ಅಂತಾ ಮುಂದೆ ಇರ್ತಿದ್ದ. ಮೊನ್ನೆ ಕೂಡ ತನ್ನ ಸ್ನೇಹಿತನ ಸಹೋದರಿಗೆ ಇನ್ಯಾರೋ ಹುಡ್ಗ ಮೆಸೇಜ್ ಮಾಡ್ತಿದ್ದಾನೆ ಅನ್ನೋ ವಿಚಾರವ ಗೊತ್ತಾಗಿದೆ. ಆ ಕೂಡಲೇ ಆ ಗೆಳೆಯನನ್ನ ಕರೆದುಕೊಂಡು ಮೆಸೇಜ್ ಮಾಡ್ತಿದ್ದವನಿಗೆ ವಾರ್ನಿಂಗ್ ಕೊಡಲು ಹೋದಾಗ ಮಾರಾಮಾರಿ ನಡೆದಿದೆ.

ಯಾವಾಗ ಚಿಕಿತ್ಸೆ ಫಲಕಾರಿಯಾಗದೇ ಮನೋಜ್ ಸಾವನ್ನಪ್ಪಿದ್ನೋ ಆಗ ಆರೋಪಿಗಳನ್ನ ಬಂಧಿಸುವಂತೆ ಪೊಲೀಸರ ಮೇಲೆ ಒತ್ತಡ ಹೆಚ್ಚಾಯಿತು. ಅನ್ಯಧರ್ಮದ ಯುವಕರು ಹಿಂದೂ ಕಾರ್ಯಕರ್ತನನ್ನ ಕೊಲೆ ಮಾಡಿದ್ದಾರೆ ಅಂತಾ ಆರೋಪ ಕೇಳಿಬಂದಿತು. ಬೇಕೇ ಬೇಕೆ ನ್ಯಾಯ ಬೇಕು ಅನ್ನೋ ಕೂಗು ನಗರಾದ್ಯಂತ ಮಾರ್ದನಿಸಿತು. ಕೂಡಲೇ ಆರೋಪಿಗಳನ್ನ ಬಂಧಿಸಬೇಕೆಂದು ಚಿಕ್ಕಮಗಳೂರು ಬಂದ್ ಗೆ ಕರೆ ಕೊಡಲಾಯ್ತು, ಜನರು ಜಮಾವಣೆ ಆಗುತ್ತಲೇ ಅಲರ್ಟ್ ಆದ ಪೆÇಲೀಸರು, ಪರಿಸ್ಥಿತಿಯನ್ನ ಕೈ ಮೀರದಂತೆ ನೋಡಿಕೊಂಡ್ರು. ಸದ್ಯ ಇಬ್ಬರು ಆರೋಪಿಗಳನ್ನ ಬಂಧಿಸಿರೋ ಪೆÇಲೀಸರು, ಉಳಿದ ಆರೋಪಿಗಳಿಗಾಗಿ ಬಲೆಬೀಸಿದ್ದಾರೆ. ಒಟ್ಟಾರೆ ಸಮಸ್ಯೆಯನ್ನ ಮೈಮೇಲೆ ಎಳೆದುಕೊಂಡ ಮಸಲ್ ಮ್ಯಾನ್ ಮರಳಿ ಬಾರದೂರಿಗೆ ಪಯಣಿಸಿದ್ದು ಮಾತ್ರ ನಿಜಕ್ಕೂ ವಿಪರ್ಯಾಸ.

Previous articleರಾಜ್ಯ ಸಾರಿಗೆ ಮುಷ್ಕರ ಹಿನ್ನಲೆ; ಕಾರ್ಮಿಕ ಮುಖಂಡ ಚಂದ್ರು ದೂರವಾಣಿ ಆಡಿಯೋ ಫುಲ್ ವೈರಲ್!
Next articleಯುವಕರಿಗೆ ಲಂಚ; ಯುವತಿಯರಿಗೆ ಮಂಚ!…

LEAVE A REPLY

Please enter your comment!
Please enter your name here