Home District ಕೊರೋನಾ ಹೆಚ್ಚುತ್ತಿರುವ ಹಿನ್ನಲೆ; ಇಂದಿನಿಂದ ಮೈಸೂರಿನಲ್ಲಿ ‘ನೈಟ್ ಕರ್ಫೂ’!

ಕೊರೋನಾ ಹೆಚ್ಚುತ್ತಿರುವ ಹಿನ್ನಲೆ; ಇಂದಿನಿಂದ ಮೈಸೂರಿನಲ್ಲಿ ‘ನೈಟ್ ಕರ್ಫೂ’!

326
0

ಮೈಸೂರು: ಕೊರೋನಾ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹಿನ್ನಲೆ ಇಂದಿನಿಂದ ಮೈಸೂರಿನಲ್ಲಿ ನೈಟ್ ಕರ್ಫೂ ಜಾರಿಯಾಗಲಿದೆ. ಮೈಸೂರು ನಗರದಾದ್ಯಂತ ಏಪ್ರಿಲ್ 20ರ ವರೆಗೆ ನೈಟ್ ಕರ್ಫೂ ಜಾರಿಯಾಗಿರುವ ಆದೇಶವನ್ನು ಹೊರಡಿಸಲಾಗಿದೆ. ರಾತ್ರಿ 10 ಗಂಟೆಯಿಂದ ವಾಣಿಜ್ಯ ವಹಿವಾಟು ಸಂಪೂರ್ಣ ಬಂದ್ ಆಗಲಿವೆ. ಅತ್ಯಗತ್ಯ ಸಂದರ್ಭ ಹೊರತಾಗಿ ಹೊರಗೆ ಬರುವಂತಿಲ್ಲ.ಸರ್ಕಾರದ ಆದೇಶ ಜಾರಿ ಮಾಡಲು ಸನ್ನದ್ದವಾದ ಜಿಲ್ಲಾಡಳಿತ. ಇದು ಹೋಟೆಲ್‌ಗಳು, ಬಾರ್, ಸ್ಟ್ರೀಟ್ ಫುಡ್ ವ್ಯಾಪಾರದ ಮೇಲೆ ಪರಿಣಾಮ ಬೀರಲಿದೆ ಎನ್ನಬಹುದು. ಇಂದು ಮಾಧ್ಯಮಗಳೊಂದಿಗೆ ಸಂವಾದ ನಡೆಸಲಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ.

ಮೈಸೂರಿನಲ್ಲಿ ಕರೊನಾ ಎರಡನೇ ಅಲೆ ಅಬ್ಬರ ಹಿನ್ನೆಲೆ. ಮೈಸೂರು ಕರ್ನಾಟಕದ ಪ್ರಖ್ಯಾತ ಪ್ರವಾಸಿ ತಾಣ. ಆದ್ದರಿಂದ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೈಸೂರು ಅರಮನೆ ದೀಪಾಲಂಕಾರಕ್ಕೆ ಬ್ರೇಕ್ ಬಿದ್ದಿದೆ. ಕೋವಿಡ್ ಹಿನ್ನೆಲೆಯಲ್ಲಿ ಅರಮನೆ ದೀಪಾಲಂಕಾರಕ್ಕೆ ಬ್ರೇಕ್ ಹಾಕಲಾಗಿದೆ. ಸಾರ್ವತ್ರಿಕ ರಜೆ ಹಾಗೂ ಭಾನುವಾರ ಒಂದು ಗಂಟೆಗಳ ಕಾಲ ವಿದ್ಯುತ್ ದೀಪಾಲಂಕರ ಇತ್ತು. ಸಂಜೆ ನಡೆಯುತ್ತಿದ್ದ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೂ ಬ್ರೇಕ್ ಹಾಕಲಾಗಿದೆ. ಏಪ್ರಿಲ್ 10 ರಿಂದ 30 ರವರೆಗೆ ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಈ ಕುರಿಯು ಅರಮನೆ ಮಂಡಳಿ ಉಪ ನಿರ್ದೇಶಕ ಸುಬ್ರಹ್ಮಣ್ಯ ಮಾಹಿತಿ ನೀಡಿದ್ದಾರೆ.

Previous articleಸಿಲಿಂಡರ್ ಸ್ಪೋಟ; ಮಾವ ಸೊಸೆಯ ಸಜೀವ ದಹನ
Next articleಮಹಾಮಾರಿ ಕೊರೊನಾ!; ಇಂದಿನಿಂದ ರಾಜ್ಯದಲ್ಲಿ ನೈಟ್ ಕರ್ಫೂ!

LEAVE A REPLY

Please enter your comment!
Please enter your name here