Home District ಆಕ್ಸಿಜನ್ ದುರಂತ ಪ್ರಕರಣ; ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು; ಶಾಸಕ ಎನ್. ಮಹೇಶ್ ಒತ್ತಾಯ

ಆಕ್ಸಿಜನ್ ದುರಂತ ಪ್ರಕರಣ; ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು; ಶಾಸಕ ಎನ್. ಮಹೇಶ್ ಒತ್ತಾಯ

ಆಕ್ಸಿಜನ್ ದುರಂತ ಪ್ರಕರಣ; ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು; ಶಾಸಕ ಎನ್. ಮಹೇಶ್

125
0
SHARE

ಚಾಮರಾಜನಗರ: ಆಕ್ಸಿಜನ್ ದುರಂತದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ತನಿಖಾಧಿಕಾರಿ ನೇಮಿಸಿದ್ದು ಪ್ರಮಾಣಿಕವಾಗಿ ತನಿಖೆನಡೆದು ತಪಿತಸ್ಥರಿಗೆ ಶಿಕ್ಷೆಯಾಗಲೇಬೇಕು ಎಂದು ಶಾಸಕ ಎನ್.ಮಹೇಶ್ ಒತ್ತಾಯಿಸಿದ್ದಾರೆ. ನೆನ್ನೆಯಷ್ಟೆ ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಘಟಿಸಿದ ಆಕ್ಸಿಜನ್ ದುರಂತಕ್ಕೆ ಸಿಲುಕಿ ಅಸುನೀಗಿದ 24 ಮಂದಿ ಪೈಕಿ ಇಬ್ಬರು ಕೊಳ್ಳೇಗಾಲಕ್ಕೆ ಸೇರಿದವರರಾಗಿದ್ದು ಮೃತಪಟ್ಟ ಕೊಳ್ಳೇಗಾಲ ತಾಲ್ಲೂಕಿನ ತಿಮ್ಮರಾಜೀಪುರ ಗ್ರಾಮದ ಚಿಕ್ಕುನ್ನಯ ಎಂಬುವರ ಮಗಳಾದ ಕೀರ್ತನ(18) ಹಾಗೂ ಮುಡಿಗುಂಡದ ಶಿವಣ್ಣ(88) ಎಂಬುವರ ಮನೆಗೆ ಶಾಸಕ ಎಮ್.ಮಹೇಶ್ ಭೇಟಿ‌ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಕೈಲಾದಷ್ಟು ಆರ್ಥಿಕ‌ ಸಹಾಯ ಮಾಡಿದರು.

ಈ ವೇಳೆ ಮೃತ ಕಿರ್ತನ ಪೋಷಕರು ಶಾಸಕರ ಎದುರು ಗೋಳಾಡಿ ನನ್ನ ಮಗಳನ್ನು ಕಳೆದು ಕೊಂಡೆವು, ನನ್ನ ಮಗಳಿಗೆ ಸರಿಯಾದ ಚಿಕಿತ್ಸೆ ಸಿಗದಕಾರಣ ಇವತ್ತು ಅವಳಿಲ್ಲ ಎಂದು ಕಣ್ಣೀರು ಹಾಕಿ ಗೋಳಾಡಿದ ಘಟನೆ ನಡೆಯಿತು. ನಂತರ ಶಾಸಕರು ಪೋಷಕರಿಗೆ ಸಾಂತ್ವನ ಹೇಳಿ ಸಮಾಧಾನ ಪಡಿಸಿದರು. ಈ ಅನ್ಯಾಯ ಮತ್ತೇ ಯಾರಿಗೂ ಆಗದಂತೆ ನೋಡಿಕೊಳ್ಳಿ ಎಂದು ಕಣ್ಣಿರಿಡುತ್ತ ಪೋಷಕರು ತಿಳಿಸಿದರು.ತಹಶೀಲ್ದಾರ್ ‌ಕುನಾಲ್ ಅವರಿಗೆ ಈ ಕೂಡಲೇ ಮೃತರ ಕುಟುಂಬದ ಸದಸ್ಯರನ್ನು‌ ಕೊರೊನಾ ತಪಾಸಣೆಗೆ ಒಳಪಡಿಸಬೇಕು. ವರದಿ ಏನು ಬರುತ್ತೋ ನೋಡಿ ನನಗೆ ಮಾಹಿತಿ ನೀಡಬೇಕೆಂದು ಸೂಚನೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನೆನ್ನೆ ನಡೆದ ದುರ್ಘಟನೆಗೆ ಸಂಬಂಧಿಸಿದಂತೆ 24 ಮಂದಿ ಸಾವನ್ನಪ್ಪಿದ್ದು. ಅವರಲ್ಲಿ ಇಬ್ಬರು ಕೊಳ್ಳೇಗಾಲ ದವರಾಗಿದ್ದಾರೆ. ಕಿರ್ತನ ಎಂಬ ಯುವತಿ‌ ಸುಮಾರು ರಾತ್ರಿ 1 ಗಂಟೆ 52 ನಿಮಿಷದಲ್ಲಿ ಅಸುನೀಗಿದ್ದಾಳೆ ಎಂದು ತಿಳಿದುಬಂದಿದೆ. ಈ ಸಮಯದಲ್ಲಿ ಆಕ್ಸಿಜನ್ ಕೊರತೆಯಿಂದಲೇ ಸತ್ತಿರುವುದು ಎಂಬುದು ಎಲ್ಲರಿಗೂ ಮನವರಿಕೆಯಾಗಿದೆ. ಈ ಮಗುವಿನ ಸಾವಿಗೆ ಆಕ್ಸಿಜನ್ ಕೊರೆತೆಯೇ ಕಾರಣ ಎಂಬುದನ್ನು ಕಡಕಂಡಿತವಾಗಿ ಹೇಳಬಹುದಾಗಿದೆ. ಈ‌ ಹಿನ್ನಲೆ 24 ಜನರ ಪೈಕಿ ಆಕ್ಸಿಜನ್ ಸಿಗದೆ ಒಬ್ಬರೂ ಸತ್ತಿದ್ದರೂ ಅದು ಅಪರಾಧ, ಅನ್ಯಾಯ, ಆದ್ದರಿಂದ ಪ್ರಮಾಣಿಕವಾಗಿ ಈ ಬಗ್ಗೆ ತನಿಖೆಯಾಗಬೇಕು ಜಿಲ್ಲಾಡಳಿತವೇಯಾಗಲಿ, ಆರೋಗ್ಯ ಇಲಾಖೆಯೆಯಾಗಲೀ ಈ ಘಟನೆಗೆ ಕಾರಣವಾಗಿದ್ದರೆ ಮೂಲಾಜಿಲ್ಲದೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಇದು ಎಚ್ಚರಿಗೆ ಗಂಟೆಯಾಗಿದ್ದು ಇನ್ನೂ ಎಲ್ಲೂ ಇಂತಹ ಘಟನೆ ಮರಕಳಿಸಬಾರದು ಸರ್ಕಾರ ಕೋವಿಡ್ ಆಸ್ಪತ್ರೆಗಳಿಗೆ ವೈದ್ಯಕೀಯ ಸೌಲಭ್ಯಗಳನ್ನು ಸಕಾಲದಲ್ಲಿ ನೀಡಬೇಕು.ಆಕ್ಸಿಜನ್ ದುರಂತದಿಂದ ಪ್ರಾಣಬಿಟ್ಟ ಕುಟುಂಬದವರಿಗೆ ಆರ್ಥಿಕ ಪರಿಹಾರ ನೀಡಬೇಕೆಂದು ತಿಳಿಸಿದರು.

LEAVE A REPLY

Please enter your comment!
Please enter your name here