ಒಂಬತ್ತು ಕಾರ್ಮಿಕರನ್ನು ದಡ ಸೇರಿಸಿದ ನೌಕಾಪಡೆಯ ಹೆಲಿಕಾಪ್ಟರ್!

ಒಂಬತ್ತು ಕಾರ್ಮಿಕರನ್ನು ದಡ ಸೇರಿಸಿದ ನೌಕಾಪಡೆಯ ಹೆಲಿಕಾಪ್ಟರ್!

521
0

ಪಡುಬಿದ್ರಿ ಬಳಿ ಸಮುದ್ರ ಮಧ್ಯೆ ಸಿಕ್ಕಿಬಿದ್ದಿದ್ದ ಟಗ್ ಬೋಟಿನ ಒಂಬತ್ತು ಕಾರ್ಮಿಕರನ್ನು ಕೊಚ್ಚಿಯಿಂದ ಬಂದಿದ್ದ ನೌಕಾಪಡೆಯ ಹೆಲಿಕಾಪ್ಟರ್ ರಕ್ಷಣೆ ಮಾಡಿದ್ದು ಎಲ್ಲ ಒಂಬತ್ತು ಮಂದಿಯೂ ಸುರಕ್ಷಿತವಾಗಿ ದಡ ಸೇರಿದ್ದಾರೆ.

ಬೆಳಗ್ಗೆ ಏಳು ಗಂಟೆಗೆ ಕೊಚ್ಚಿಯಿಂದ ಮಂಗಳೂರಿಗೆ ಬಂದ ನೌಕಾಪಡೆಯ ಹೆಲಿಕಾಪ್ಟರ್, ಎಂಟು ಗಂಟೆ ಸುಮಾರಿಗೆ ರಕ್ಷಣಾ ಕಾರ್ಯಾಚರಣೆ ಆರಂಭಿಸಿತ್ತು. ಪಡುಬಿದ್ರಿ ಬಳಿಯಿಂದ ಐದು ಮೈಲ್ ದೂರವಿರುವ ಸಮುದ್ರ ಮಧ್ಯೆ ಸಿಕ್ಕಿಕೊಂಡಿದ್ದ ಟಗ್ ನಲ್ಲಿದ್ದ ಒಂಬತ್ತು ಕಾರ್ಮಿಕರನ್ನು ಕೋಸ್ಟ್ ಗಾರ್ಡ್ ಪಡೆಯ ಹಡಗಿನ ಸಹಾಯದಲ್ಲಿ ರಕ್ಷಣೆ ಮಾಡಿದೆ. ದ.ಕ. ಜಿಲ್ಲಾಧಿಕಾರಿ ನಿನ್ನೆ ಸಂಜೆಯೇ ರಾಜ್ಯದ ಸಿಎಂ ಕಚೇರಿಯಿಂದ ಅನುಮತಿ ಪಡೆದು ನೌಕಾಪಡೆಯ ನೆರವು ಕೋರಿದ್ದರು. ಸಮುದ್ರ ತುಂಬ ರಫ್ ಇದ್ದುದರಿಂದ ಮತ್ತು ಗಾಳಿ ವೇಗವಾಗಿ ಬೀಸುತ್ತಿರುವುದರಿಂದ ರಕ್ಷಣೆಗೆ ಹೆಲಿಕಾಪ್ಟರ್ ತರಿಸಲು ಕೇಳಿಕೊಂಡಿದ್ದರು. ಗೋವಾದಿಂದ ಹೆಲಿಕಾಪ್ಟರ್ ತರಿಸುವ ಯೋಚನೆ ಮಾಡಲಾಗಿತ್ತಾದರೂ, ನಿನ್ನೆ ಸಂಜೆಯಿಂದ ಗೋವಾ ಭಾಗದಲ್ಲಿ ಚಂಡಮಾರುತದ ಪ್ರಭಾವ ಹೆಚ್ಚಿದ್ದರಿಂದ ಕೊಚ್ಚಿ ವಿಭಾಗದಿಂದ ನೆರವು ಕೇಳಲಾಗಿತ್ತು.

ಇಂದು ಬೆಳಗ್ಗೆ ಕೊಚ್ಚಿಯಿಂದ ಆಗಮಿಸಿದ ಹೆಲಿಕಾಪ್ಟರ್, ಮಂಗಳೂರು ಏರ್ಪೋರ್ಟ್ ಗೆ ಬಂದು ಕಾರ್ಯಾಚರಣೆ ನಡೆಸಿದೆ. ಬೆಳಗ್ಗೆ 10.30 ರ ವೇಳೆಗೆ ಎಲ್ಲ ಒಂಬತ್ತು ಮಂದಿ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಕಾಪ್ಟರ್ ನಲ್ಲಿ ಒಬ್ಬೊಬ್ಬರನ್ನೇ ಮೇಲಕ್ಕೆ ತಂದು ಬಳಿಕ ಅಲ್ಲಿಯೇ ಸನಿಹ ಇದ್ದ ಕೋಸ್ಟ್ ಗಾರ್ಡ್ ಪಡೆಯ ಐಎನ್ಎಸ್ ವರಹಾ ಹಡಗಿನಲ್ಲಿ ಇಳಿಸಲಾಗಿತ್ತು. ಇಂದು ಬೆಳಗ್ಗಿನ ಹೊತ್ತಿಗೆ ಸಮುದ್ರ ಬಿರುಸು ಕಳಕೊಂಡಿದ್ದರಿಂದ ಕೋಸ್ಟ್ ಗಾರ್ಡ್ ಸಿಬಂದಿಯೂ ಸ್ಪೀಡ್ ಬೋಟ್ ನಲ್ಲಿ ರಕ್ಷಣೆಗೆ ಇಳಿದಿದ್ದರು.

ಎನ್ಎಂಪಿಟಿ ಬಂದರು ವ್ಯಾಪ್ತಿಗೆ ಬರುವ ಈ ಟಗ್, ಚಂಡಮಾರುತದ ಎಚ್ಚರಿಕೆ ಇದ್ದರೂ ಸಮುದ್ರದಲ್ಲಿ ಯಾಕೆ ಉಳಿದುಕೊಂಡಿತ್ತು. ಇದಕ್ಕೆ ಎಂಆರ್ ಪಿಎಲ್ ಮತ್ತು ಎನ್ಎಂಪಿಟಿ ಬಂದರು ಅಧಿಕಾರಿಗಳ ನಿರ್ಲಕ್ಷ್ಯ ಕಾರಣವೇ ಎನ್ನುವುದರ ಬಗ್ಗೆ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಎರಡೂ ಸಂಸ್ಥೆಗಳಿಂದ ಪ್ರತ್ಯೇಕ ವರದಿ ನೀಡುವಂತೆ ಕೇಳಿದ್ದಾರೆ

VIAಒಂಬತ್ತು ಕಾರ್ಮಿಕರನ್ನು ದಡ ಸೇರಿಸಿದ ನೌಕಾಪಡೆಯ ಹೆಲಿಕಾಪ್ಟರ್!
SOURCEಒಂಬತ್ತು ಕಾರ್ಮಿಕರನ್ನು ದಡ ಸೇರಿಸಿದ ನೌಕಾಪಡೆಯ ಹೆಲಿಕಾಪ್ಟರ್!
Previous articleಮತ್ತೆ ಲಾಕ್ ಡೌನ್ ಆಗೋದು ಪಕ್ಕಾನಾ?
Next articleಹಸಿದವರ ಹೊಟ್ಟೆಗೆ ಆಸರೆಯಾದ ಶಿವರಾಜ್ ಕುಮಾರ್

LEAVE A REPLY

Please enter your comment!
Please enter your name here