Home Home Neeraj Chopra; ಒಲಿಪಿಂಕ್ಸ್​​ನಲ್ಲಿ ಭಾರತಕ್ಕೆ ಐತಿಹಾಸಿಕ ದಿನ; ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ!!

Neeraj Chopra; ಒಲಿಪಿಂಕ್ಸ್​​ನಲ್ಲಿ ಭಾರತಕ್ಕೆ ಐತಿಹಾಸಿಕ ದಿನ; ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ!!

248
0

ಜಾವೆಲಿನ್ ತ್ರೋ ನಲ್ಲಿ ದೇಶದಲ್ಲಿ ಹೊಸ ಅಧ್ಯಾಯ‌ ಸೃಷ್ಟಿಸಿದ ಕ್ರೀಡಾಪಟು ನೀರಜ್ ಚೋಪ್ರಾ. 2016ರಲ್ಲಿ ಬರೋಬ್ಬರಿ 86.46 ಮೀಟರ್ ಎಸೆದು ವಿಶ್ವ ದಾಖಲೆ ನಿರ್ಮಿಸಿದ ನೀರಜ್ ಅಂಡರ್ 20 ವಲ್ಡ್ ಚಾಂಪಿಯನ್ ಶಿಪ್ ತನ್ನ ಮುಡಿಗೇರಿಸಿಕೊಂಡ್ರು. ಬಳಿಕ ಸಾಧನೆಯಲ್ಲಿ ಉತ್ತುಂಗಕ್ಕೆ ಏರುತ್ತಾ ಹೋದ ನೀರಜ್ 2018ರಲ್ಲಿ 88.06 ಮೀಟರ್ ಎಸೆದು ನ್ಯಾಷನಲ್ ರೆಕಾರ್ಡ್ ದಾಖಲಿಸಿದ್ರು. ಆದ್ರೆ 2019ರ ಚಾಂಪಿಯನ್ ಶಿಪ್ ವೇಳೆಗೆ ತೋಳಿನ ಶಸ್ತ್ರಚಿಕಿತ್ಸೆ ಒಳಪಟ್ಟಿದ್ದರಿಂದ ವಿಶ್ರಾಂತಿಯಲ್ಲಿರಬೇಕಾಗಿತ್ತು. ಆದ್ರೆ ವಿರಾಮದ ಬಳಿಕ ನೀರಜ್ ಇನ್ನಷ್ಟು ಸದೃಢವಾಗಿ ಬೌನ್ಸ್ ಬ್ಯಾಕ್ ಆಗಿರುವುದು ಸಂತಸದ ವಿಚಾರ.

ಶಸ್ತ್ರಚಿಕಿತ್ಸೆ ಗೊಳಪಟ್ಟು ನಿರಂತರ ರೆಸ್ಟ್ ನ‌ ಬಳಿಕ ಮತ್ತೆ ಫೀಲ್ಡ್ ಗೆ ವಾಪಾಸಾಗಿರುವ ನೀರಜ್, ಕಳೆದ ಮಾರ್ಚ್‌ ನಲ್ಲಿ 88.07 ಮೀಟರ್ ಜಾವಲೆನ್ ಎಸೆತದ ಮೂಲಕ ತನ್ನ ದಾಖಲೆಯನ್ನ ತಾನೇ ಮುರಿದು ಹೊಸ ದಾಖಲೆ ನಿರ್ಮಿಸಿ ಪದಕವನ್ನ ಮತ್ತೆ ತನ್ನದಾಗಿಸಿಕೊಂಡಿದ್ದಾರೆ. ಹರಿಯಾಣ ಮೂಲದ ನೀರಜ್ 2016 ರಿಯೋನಲ್ಲಿ ಕಂಚಿನ ಪದಕ ಹಾಗೂ 2012ರಲ್ಲಿ ಚಿನ್ನ ಗೆದ್ದು ಲಂಡನ್ ನಲ್ಲಿ ತ್ರಿವರ್ಣ ಪತಾಕೆ ಹಾರಿಸಿರುವುದು ನಮ್ಮ ಹೆಮ್ಮೆ.

ಒಂದರಿಂದ ಮತ್ತೊಂದು ಉತ್ತಮ ಎಂಬಂತೆ ಅದ್ಬುತ ಎಸೆತಗಳನ್ನ ಮಾಡುತ್ತಾ ಬಂದಿರುವ ನೀರಜ್ ಚೋಪ್ರಾ ವಿಶ್ವದ ಟಾಪ್ ಜಾವೆಲಿತ ಜಾವೆಲಿನ್ ಎಸೆತಗಾರರೊಂದಿಗೆ ಗುರುತಿಸಿಕೊಂಡಿದ್ದಾರೆ. ಆದ್ರೆ ವಿಶ್ವದಲ್ಲೇ ಅತೀ ದೂರ ಎಸೆತ ಅಂದ್ರೆ ನಿರಂತರವಾಗಿ 90 ಮೀಟರ್ ದೂರ ಎಸೆಯುತ್ತಿರುವ ಜರ್ಮನಿಯ ಜೊಹಾನೆಸ್ ವೆಟ್ಟರ್ ನಂತೆಯೇ 90 ಮೀಟರ್ ಎಸೆತದ ಗುರಿ ಮುಟ್ಟುವುದೇ ಸದ್ಯ ನೀರಜ್ ಗುರಿ. ಯಾಕಂದ್ರೆ ಆಗ ಮಾತ್ರ ಪದಕ ಪಡೆಯಲು ಸಾಧ್ಯ.

ಪಟಿಯಾಲದಲ್ಲಿ ಉತ್ತಮ ಪ್ರದರ್ಶನ ನೀಡಿದ ಬಳಿಕ‌ ಚೋಪ್ರಾ ಸಾಧನೆಯಲ್ಲಿ ಮತ್ಯಾವತ್ತು ಹಿಂತಿರುಗಿ ನೋಡೇ ಇಲ್ಲ. ಆ ಬಳಿಕ ಮೊನ್ನೆ ನಡೆದ ಯೂರೋಪ್ ಪ್ರವಾಸದಲ್ಲೂ ಪದಕ ಗಳಿಸಿ ಗಮನ ಸೆಳೆದಿದ್ದಾರೆ. ಚಾಂಪಿಯನ್ ಶಿಪ್ ದಿನ ಎಕ್ಸ್‌ಟ್ರಾ ಎನರ್ಜಿಯಿಂದ ಪ್ರದರ್ಶನ ನೀಡುವುದೇ ಪದಕ ಗಳಿಸೋದಕ್ಕೆ ಪ್ರಮುಖ ಕಾರಣವಾಗಿದೆ.

ತೋಳಿನ ಶಸ್ತ್ರಚಿಕಿತ್ಸೆ ಹಾಗೂ ಕೋವಿಡ್ ಲಾಕ್ ಡೌನ್ ಬಳಿಕ ಮತ್ತೆ ವಾಪಾಸಾಗಿರುವ ನೀರಜ್ ಎಸೆತಕ್ಕೆ ಯಾವುದೇ ಹೊಡೆತ ಬಿದ್ದಿಲ್ಲ.
ಅಡೆತಡೆಗಳನ್ನ ಮೆಟ್ಟಿ ನಿಂತೂ ದಾಖಲೆಗಳನ್ನ ನಿರ್ಮಿಸಿ ದೇಶದಲ್ಲಿ ಭರವಸೆ ಹೆಚ್ಚಿಸಿರುವ ನೀರಜ್ ಆಗಸ್ಟ್ 7ರಂದು ನೀಡಲಿರುವ ಪ್ರದರ್ಶನ ಹೊಸ ದಾಖಲೆ ನಿರ್ಮಿಸುವ ಭರವಸೆ ನೀಡಿದ್ದಾರೆ.

Previous articleರಾಮದಾಸ್ ಗೆ ತಪ್ಪಿಸಿ ಬಿ.ಸಿ.ನಾಗೇಶ್ ಗೆ ಸಚಿವ ಸ್ಥಾನ; ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ
Next articleಗ್ಯಾಸ್ ಸಿಲೆಂಡರ್ ಬ್ಲಾಸ್ಟ್; ಹೋಟಲ್ ಸಂಪೂರ್ಣವಾಗಿ ಅಗ್ನಿಗಾಹುತಿ!

LEAVE A REPLY

Please enter your comment!
Please enter your name here