ಏಕದಿನ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್..!

ಕ್ರೀಡೆ

ಲಂಡನ್: ಇಂಗ್ಲೆಂಡ್‌ ತಂಡದ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಮಂಗಳವಾರ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಅಂತಾರಾಷ್ಟ್ರೀಯ ಪಂದ್ಯ ನಡೆಯಲಿದ್ದು, ಇದು ನನ್ನ ಕೊನೆಯ ಪಂದ್ಯ ಎಂದು ತಿಳಿಸಿದ್ದಾರೆ. ಸ್ಟೋಕ್ಸ್ 104 ಏಕದಿನ ಕ್ರಿಕೆಟ್‌ ಪಂದ್ಯಗಳನ್ನು ಆಡಿದ್ದಾರೆ. ತವರು ಮೈದಾನವಾದ ಸೀಟ್ ಯೂನಿಕ್ ರಿವರ್‌ಸೈಡ್‌ನಲ್ಲಿ ತಮ್ಮ ಅಂತಾರಾಷ್ಟ್ರೀಯ ವೃತ್ತಿ ಜೀವನವನ್ನು ಕೊನೆಗೊಳಿಸಲು ಸ್ಟೋಕ್ಸ್‌ ನಿರ್ಧರಿಸಿದ್ದಾರೆ.

ಡರ್ಹಾಮ್‌ನಲ್ಲಿ ಮಂಗಳವಾರ ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ಗಾಗಿ ನನ್ನ ಕೊನೆಯ ಪಂದ್ಯವನ್ನು ಆಡುತ್ತೇನೆ. ಆ ಮೂಲಕ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ಇದು ಕಠಿಣ ನಿರ್ಧಾರವಾಗಿದೆ. ನಾನು ಇಂಗ್ಲೆಂಡ್‌ಗಾಗಿ ನನ್ನ ಸಹ ಆಟಗಾರರೊಂದಿಗೆ ಆಡಿದ ಪ್ರತಿ ಕ್ಷಣವನ್ನು ಪ್ರೀತಿಸುತ್ತೇನೆ ಎಂದು ಟ್ವೀಟ್‌ ಮಾಡಿ ಸ್ಟೋಕ್ಸ್‌ ತಿಳಿಸಿದ್ದಾರೆ.

ನಾನು ಇಲ್ಲಿಯವರೆಗೆ ಆಡಿದ ಎಲ್ಲಾ 104 ಪಂದ್ಯಗಳನ್ನು ಆನಂದಿಸಿದ್ದೇನೆ. ನನಗೆ ಇನ್ನೊಂದು ಪಂದ್ಯ ಸಿಕ್ಕಿದೆ. ಡೆರ್ಹಾಮ್‌ನಲ್ಲಿರುವ ನನ್ನ ತವರು ಮೈದಾನದಲ್ಲಿ ಕೊನೆಯ ಪಂದ್ಯವನ್ನು ಆಡುತ್ತಿರುವುದು ಸ್ಮರಣೀಯವಾಗಿದೆ. ಎಂದಿನಂತೆ ಇಂಗ್ಲೆಂಡ್ ಅಭಿಮಾನಿಗಳು ಸದಾ ನನ್ನೊಂದಿಗೆ ಇದ್ದಾರೆ, ಮುಂದೆಯೂ ಇರುತ್ತಾರೆ. ಮಂಗಳವಾರ ಪಂದ್ಯವನ್ನು ಗೆಲ್ಲುತ್ತೇವೆಂಬ ಭರವಸೆ ಎಂದು ಹೇಳಿದ್ದಾರೆ 2011ರಲ್ಲಿ ಐರ್ಲೆಂಡ್ ವಿರುದ್ಧ ನಡೆದ ಪಂದ್ಯದ ಮೂಲಕ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಸ್ಟೋಕ್ಸ್ ಮೂರು ಶತಕ ಸೇರಿದಂತೆ 2,919 ರನ್ ಗಳಿಸಿ 74 ವಿಕೆಟ್ ಪಡೆದಿದ್ದಾರೆ.

 

Leave a Reply

Your email address will not be published.