Home Home ಗುಂಡ್ಲುಪೇಟೆ ಆಸ್ಪತ್ರೆಗೆ ಆಮ್ಲಜನಕ ಸಾಂಧ್ರಕ ಹಸ್ತಾಂತರ

ಗುಂಡ್ಲುಪೇಟೆ ಆಸ್ಪತ್ರೆಗೆ ಆಮ್ಲಜನಕ ಸಾಂಧ್ರಕ ಹಸ್ತಾಂತರ

ಗುಂಡ್ಲುಪೇಟೆ ಆಸ್ಪತ್ರೆಗೆ ಆಮ್ಲಜನಕ ಸಾಂಧ್ರಕ ಹಸ್ತಾಂತರ

223
0
SHARE

ವರದಿ: ನಾ.ಅಶ್ವಥ್ ಕುಮಾರ್

ಚಾಮರಾಜನಗರ : ಕರೋನಾ ಸೋಂಕು ಹೆಚ್ಚಾಗಿ ಹರಡುತ್ತಿರುವ ಸಂಧರ್ಭದಲ್ಲಿ ಸಾರ್ವಜನಿಕರಿಗೆ ಸದ್ಬಳಕೆಯಾಗಲಿ ಎಂಬ ಉದ್ದೇಶದಿಂದ ಚಾಮರಾಜನಗರ ಜಿಲ್ಲೆ ಪೊಲೀಸ್ ಇಲಾಖೆ ವತಿಯಿಂದ ಆಕ್ಷಿಜನ್ ಕಾನ್ಸನ್ ಟ್ರೇಟರ್ ( ಆಮ್ಲಜನಕ ಸಾಂಧ್ರಕ ) ಯಂತ್ರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾಸಾರಾಥಾಮಸ್ ಜಿಲ್ಲೆಯ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯ ವೈದ್ಯರುಗಳಿಗೆ ಹಸ್ತಾಂತರಿಸಿದರು.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಸಾರಾಥಾಮಸ್ ಆಮ್ಲಜನಕ ಸಾಂಧ್ರಕ ಯಂತ್ರವನ್ನು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಮಂಜುನಾಥ್ ಅವರಿಗೆ ಹಸ್ತಾಂತರಿಸಿದರು.

ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್, ಚಾಮರಾಜನಗರ ಜಿಲ್ಲೆಗೆ ಎರಡು ಆಕ್ಷಿಜನ್ ಕಾನ್ಸನ್ ಟ್ರೇಟರ್ ಯಂತ್ರಗಳು ಬಂದಿದ್ದು ಅವುಗಳ ಉಪಯೋಗಗಳ ಬಗ್ಗೆ ವೈದ್ಯರೊಂದಿಗೆ ಚರ್ಚಿಸಿ ಬಳಿಕ ಹನೂರು ಮತ್ತು ಗುಂಡ್ಲುಪೇಟೆ ಆಸ್ಪತ್ರೆಗೆ ನೀಡಲಾಗಿದೆ. ಇನ್ನು ಜಿಲ್ಲೆಯಾದ್ಯಂತ ಸಾರ್ವಜನಿಕರ ಅನಗತ್ಯ ಓಡಾಟದ ಕುರಿತು ಪ್ರತಿಕ್ರಿಯಿಸಿ ಸೋಮವಾರದಿಂದ ಬುಧವಾರದ ತನಕ ನಿಷೇಧಾಜ್ಞೆಯಲ್ಲೇ ಸಮಯಾಧಾರಿತ ಸಡಿಳಿಕೆ ಇದೆ ಅದು ಅಗತ್ಯ ಸೇವೆಗಳಿಗೆ ಮಾತ್ರ ಇನ್ನುಳಿದ ನಾಲ್ಕು ದಿನಗಳು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಡಿವೈಎಸ್ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ವೃತ್ತ ನಿರೀಕ್ಷಕ ಮಹದೇವಸ್ವಾಮಿ , ಗುಂಡ್ಲುಪೇಟೆ ಆಸ್ಪತ್ರೆ ವೈದ್ಯರು ಹಾಜರಿದ್ದರು.

LEAVE A REPLY

Please enter your comment!
Please enter your name here