Home Health ಆಮ್ಲಜನಕ ಪೂರೈಕೆಗೆ ಸಂಬಂಧಿಸಿದ ಕಡತಗಳು ಪೊಲೀಸರಿಂದ ಸೀಜ್!

ಆಮ್ಲಜನಕ ಪೂರೈಕೆಗೆ ಸಂಬಂಧಿಸಿದ ಕಡತಗಳು ಪೊಲೀಸರಿಂದ ಸೀಜ್!

308
0

ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಆ್ಯಕ್ಸಿಜನ್ ದುರಂತಕ್ಕೆ ಸಂಬಂಧಿಸಿದಂತೆ ಆಮ್ಲಜನಕ ಪೂರೈಕೆಗೆ ಸಂಬಂಧಿಸಿದ ಕಡತಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಡಿವೈಎಸ್ಪಿ ನಾಗರಾಜು ನೇತೃತ್ವದ ತಂಡ ಇಂದು ಜಿಲ್ಲಾಡಳಿತ ಭವನದಲ್ಲಿ ವಿಪತ್ತು ನಿರ್ವಹಣಾ ಕಚೇರಿ ಮತ್ತು ಜಿಪಂ ಯೋಜನಾ ನಿರ್ದೇಶಕರ ಕಚೇರಿಗೆ ದಾಳಿಯಿಟ್ಟು ಜಿಲ್ಲಾಸ್ಪತ್ರೆಗೆ ಸಂಬಂಧಿಸಿದ ಸಂಪೂರ್ಣ ದಾಖಲಾತಿ ಗಳನ್ನು ಸಂಗ್ರಹಿಸುತ್ತಿದ್ದು ,ಎಲ್ಲಾ ದಾಖಲೆಗಳನ್ನು ಸಿಡಿ ಬರ್ನ್ ಜೊತೆಗೆ ಝೆರಾಕ್ಸ್ ಪ್ರತಿಯನ್ನು ತೆಗೆದುಕೊಳ್ಳಲಾಯಿತು.‌

ಹೈ ಕೋರ್ಟ್ ಸೂಚನೆಯಂತೆ ನ್ಯಾಯಾಂಗ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ ನಿವೃತ್ತ ನ್ಯಾಯಮೂರ್ತಿಗಳು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಭೇಟಿ ನೀಡುವ ಸಾಧ್ಯತೆ ಹೆಚ್ಚುತ್ತಿರುವ ಮರಣಗಳ ನಿಖರ ಕಾರಣ ತಿಳಿಯಲು ಕೂಡ ಪರಿಣತರ ತಂಡ ಭೇಟಿ ನೀಡಲಿದೆ.

ಈ ಹಿನ್ನಲೆಯಲ್ಲಿ ನ್ಯಾಯಾಂಗ ತನಿಖೆಗೆ ಅನುಕೂಲವಾಗುವಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ಕಲೆ ಹಾಕಿರುವ ಪೊಲೀಸರು ಜಪ್ತಿ ಪಡಿಸಿ ಕೊಂಡು ನ್ಯಾಯಾಂಗ ತನಿಖಾ ಆಯೋಗಕ್ಕೆ ಒಪ್ಪಿಸಲಿದೆ.

VIAಆಮ್ಲಜನಕ ಪೂರೈಕೆಗೆ ಸಂಬಂಧಿಸಿದ ಕಡತಗಳು ಪೊಲೀಸರಿಂದ ಸೀಜ್!
SOURCEಆಮ್ಲಜನಕ ಪೂರೈಕೆಗೆ ಸಂಬಂಧಿಸಿದ ಕಡತಗಳು ಪೊಲೀಸರಿಂದ ಸೀಜ್!
Previous articleಕರುನಾಡು ಲಾಕ್ ಡೌನ್ ಗೆ ಕಾಂಗ್ರೆಸ್ ಪಟ್ಟು!
Next articleಆಕ್ಸಿಜನ್ ಸಮಸ್ಯೆ; ನವೋದಯ ಆಸ್ಪತ್ರೆಯ ಮಾಲೀಕರ ಜೊತೆ ಪ್ರಜಾ ಟಿವಿ ಚಿಟ್ ಚಾಟ್

LEAVE A REPLY

Please enter your comment!
Please enter your name here