ಪೇಸಿಎಂ ಪೋಸ್ಟರ್ ಗೆ ಎಎಪಿ ಟಕ್ಕರ್: AAP ಯಿಂದಲೂ ಕ್ಯೂ ಆರ್ ಕೋಡ್ ಮಾದರಿ ಪೋಸ್ಟರ್

ಬೆಂಗಳೂರು

ಬೆಂಗಳೂರು: ಬೆಂಗಳೂರಿನಲ್ಲಿ ಪೇಸಿಎಂ ಪೋಸ್ಟರ್‌ ವೈರಲ್‌ ಆದ ಬೆನ್ನಲ್ಲೇ ಇದೀಗ ಆಮ್‌ ಆದ್ಮಿ ಪಾರ್ಟಿ ಕೂಡ ಕ್ಯೂಆರ್‌ ಕೋಡ್‌ ಮಾದರಿಯ ಪೋಸ್ಟರ್‌ ತಯಾರಿಸಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳಿಗೆ ಟಕ್ಕರ್‌ ಕೊಟ್ಟಿದೆ. ಕಾಂಗ್ರೆಸ್​ನಿಂದ ಸಿಎಂ ಬಸವರಾಜ ಬೊಮ್ಮಾಯಿ ಪೇಸಿಎಂ ಕ್ಯೂಆರ್‌ ಕೋಡ್‌ ಹಾಗೂ ಬಿಜೆಪಿಯವರು ಬಿಡುಗಡೆ ಮಾಡಿದ್ದ ಪೇ ಎಕ್ಸ್‌ ಸಿಎಂ ಕ್ಯೂಆರ್‌ ಕೋಡ್‌ ಜೊತೆಗೆ ಜೆಡಿಎಸ್‌ ಚಿಹ್ನೆ ಕ್ಯೂಆರ್‌ ಕೋಡನ್ನೂ,

ಸೇರಿಸಿ ಆಮ್‌ ಆದ್ಮಿ ಪಾರ್ಟಿಯು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟರ್ ಬಿಡುಗಡೆ ಮಾಡಿದೆ. ಇದು ಪೇ ಸಿಎಂ, ಪೇ ಎಕ್ಸ್ ಸಿಎಂ ಅಲ್ಲ, ಇದು ಪೇ ಟೀಂ. ಜೆಡಿಎಸ್‌ 10%, ಕಾಂಗ್ರೆಸ್‌ 20% ಹಾಗೂ ಬಿಜೆಪಿ 40% ಲೂಟಿ ಮಾಡಿದೆ. ಮೂರೂ ಪಕ್ಷಗಳ ಟೀಂ ರಾಜ್ಯವನ್ನು ಲೂಟಿ ಮಾಡಿದೆ. ಇದರಿಂದ ಜನಸಾಮಾನ್ಯರಿಗೆ ಉಳಿದಿದ್ದು ಮೂರು ನಾಮ ಎಂದು ಆಮ್‌ ಆದ್ಮಿ ಪಾರ್ಟಿಯು ಆಕ್ರೋಶ ವ್ಯಕ್ತಪಡಿಸಿದೆ.