Home Latest ಗಡಿಭಾಗದಲ್ಲಿ ಪಾಕ್ ಡ್ರೋನ್ ಹಾರಾಟ; ಹೊಡೆದುರುಳಿಸಿದ ಭದ್ರತಾ ಪಡೆ

ಗಡಿಭಾಗದಲ್ಲಿ ಪಾಕ್ ಡ್ರೋನ್ ಹಾರಾಟ; ಹೊಡೆದುರುಳಿಸಿದ ಭದ್ರತಾ ಪಡೆ

716
0
SHARE

ಜಮ್ಮುಕಾಶ್ಮೀರ. ಜಮ್ಮುಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರತೀಯ ಭದ್ರತಾ ಪಡೆ ಪಾಕಿಸ್ತಾನಿ ಡ್ರೋನ್ ಒಂದನ್ನು ಇಂದು ಹೊಡೆದುರುಳಿಸಿದೆ. ಹಿರಾನಗರ ಸೆಕ್ಟರ್‌ನ ಕತುವಾ ಪ್ರದೇಶದಲ್ಲಿ ಡ್ರೋನ್ ಹಾರಾಟ ನಡೆಸುತ್ತಿರುವುದನ್ನು ಕಂಡು ಬಿಎಸ್‌ಎಫ್‌ನ ಪೆಟ್ರೋಲಿಂಗ್ ಪಡೆ ಅದರ ಮೇಲೆ ಎಂಟರಿಂದ ಒಂಬತ್ತು ಸುತ್ತು ಗುಂಡು ಹಾರಿಸಿದೆ.

ಕತುವಾ ಜಿಲ್ಲೆಯ ಹಿರಾನಗರ ತಾಲೂಕಿನ ರತುವಾ ಗ್ರಾಮದ ಬಳಿ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹೊಡೆದುರುಳಿಸಿದ ಡ್ರೋನ್​​ನಿಂದ ಶಸ್ತ್ರಾಸ್ತ್ರಗಳನ್ನು  ಭದ್ರತಾ ಪಡೆ ವಶಕ್ಕೆ ತೆಗೆದುಕೊಂಡಿದೆ.

LEAVE A REPLY

Please enter your comment!
Please enter your name here