ಕಾಂಗ್ರೆಸ್ ನ ಐವರು ಕಾರ್ಯಕರ್ತರು ಅರೆಸ್ಟ್

ಬೆಂಗಳೂರು

ಬೆಂಗಳೂರು: ಬೆಂಗಳೂರಿನಲ್ಲಿ ಪೇ ಸಿಎಂ ಪೋಸ್ಟರ್ ಅಂಟಿಸಿದ ಪ್ರಕರಣ ಸಂಬಂಧ ಹೈಗ್ರೌಂಡ್ಸ್​ ಪೊಲೀಸರು ಐವರು ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಬಿ.ಆರ್.ನಾಯ್ಡು, ಪವನ್, ಗಗನ್, ಸಂಜಯ್ ಹಾಗೂ ವಿಶ್ವನಾಥ್ ಎಂಬುವರ ಬಂಧನವಾಗಿದೆ. ಇನ್ನೂ ಕೆಲವರನ್ನು ವಶಕ್ಕೆ ಪಡೆಯಲಾಗಿದೆ.

ನಗರದಲ್ಲಿ ಪೇ ಸಿಎಂ ಶೀರ್ಷಿಕೆಯಡಿ ಸಿಎಂ ಫೋಟೋ ಬಳಸಿ ಪೋಸ್ಟರ್​​ ಅಂಟಿಸಿದ ವಿಚಾರಕ್ಕೆ ನಾಲ್ಕು ಠಾಣೆಗಳಲ್ಲಿ ಎಫ್ಐಆರ್ ದಾಖಲಾಗಿತ್ತು. ವ್ಯಕ್ತಈ ಪ್ರಕರಣಗಳ ತನಿಖೆ ನಡೆಸಲು ಸಿಸಿಬಿಗೆ ನಗರದ ಪೊಲೀಸ್​ ಆಯುಕ್ತರು ಸೂಚಿಸಿದ್ದರು.‌ ಬುಧವಾರ ರಾತ್ರಿ ಹೈಗ್ರೌಂಡ್ಸ್ ಹಾಗೂ ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಎಂಟು ಜನರನ್ನ ವಶಕ್ಕೆ ಪಡೆದಿದ್ದಾರೆ.‌ ಇದರಲ್ಲಿ ಐವರು ಕಾಂಗ್ರೆಸ್​​ನ ಸಕ್ರಿಯ ಕಾರ್ಯಕರ್ತರು ಎಂದು ಹೇಳಲಾಗುತ್ತಿದೆ‌.