Home Home ಹೆಂಡತಿಯ ಅಣ್ಣನಿಂದಲೇ ಭಾವನ ಕೊಲೆ!

ಹೆಂಡತಿಯ ಅಣ್ಣನಿಂದಲೇ ಭಾವನ ಕೊಲೆ!

Person murdered by wife's brother | ಹೆಂಡತಿಯ ಅಣ್ಣನಿಂದಲೇ ಭಾವನ ಕೊಲೆ!

519
0
SHARE

ಮಂಡ್ಯ: ತಂಗಿಯ ಶೀಲದ ಬಗ್ಗೆ ಅನುಮಾನಿಸುತ್ತಿದ್ದನೆಂಬ ಕಾರಣಕ್ಕೆ ಬಾವನನ್ನು ಹೆಂಡತಿಯ ಅಣ್ಣನೇ ಕೊಲೆ ಮಾಡಿದ ಘಟನೆ ನಾಗಮಂಗಲ ತಾಲ್ಲೂಕಿನ ಕರಿ ಕ್ಯಾತನಹಳ್ಳಿ ಗ್ರಾಮದ ಬಳಿ ನಡೆದಿದೆ.

ತಾಲ್ಲೂಕಿನ ಹೊಣಕೆರೆ ಹೋಬಳಿಯ ಚಿಣ್ಯ ಗ್ರಾಮದ ನಂಜಪ್ಪರವರ ಮಗಳು ಸವಿತಾಳನ್ನು ತುಮಕೂರು ಜಿಲ್ಲೆಯ ಸಂತೆ ಮಾವತ್ತೂರು ಗ್ರಾಮದ ಪುಟ್ಟರಾಜು ಎಂಬುವವನನ್ನು ಕಳೆದ ಹದಿನಾರು ವರ್ಷಗಳ ಹಿಂದೆ ಮದುವೆಮಾಡಿಕೊಡಲಾಗಿದ್ದು ಕಳೆದ ಆರು ವರ್ಷದಿಂದ ಆಗಾಗ್ಗೆ ದಂಪತಿಯರ ನಡುವೆ ಗಲಾಟೆ ಯಾಗುತ್ತಿದ್ದು, ಗಂಡ ಪುಟ್ಟರಾಜು ತನ್ನ ಪತ್ನಿ ಸವಿತಾಳ ಶೀಲದ ಬಗ್ಗೆ ಶಂಕಿಸುತ್ತಿದ್ದ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದು ಇದರಿಂದ ಬೇಸತ್ತ ಸವಿತಾ ತವರು ಮನೆಗೆ ಸೇರಿದ್ದಳೆನ್ನಲಾಗಿದೆ.

ಜೂನ್ ಮೂರರಂದು ಸವಿತಾಳ ಅಣ್ಣ ಮಂಜುನಾಥ್ ಜೊತೆ ಸಂತೆ ಮಾವತ್ತೂರಿಗೆ ಹೋಗಿ ಕರೆದುಕೊಂಡು ಹೋಗಲು ಪುಟ್ಟರಾಜು ಬಂದಿದ್ದನೆಂದು ತಿಳಿದು ಬಂದಿದ್ದು, ಗುರುವಾರ ಕರಿಕ್ಯಾತನಹಳ್ಳಿ ಡಾಂಬರು ರಸ್ತೆಯ ಬಳಿ ಅಪಘಾತವಾಗಿ ಮೃತಪಟ್ಟಿದ್ದಾನೆಂದು ಸವಿತಾಳ ಅಣ್ಣ ಮಂಜುನಾಥ್ ಪೋಲೀಸ್ ಠಾಣೆಗೆ ತಿಳಿಸಿದ್ದು ಪೋಲೀಸರು ಬಂದು ನೋಡಲಾಗಿ ಅಪಘಾತದಲ್ಲಿ ಸತ್ತನೆಂದು ಬಿಂಬಿಸಲಾಗಿದ್ದು ಅನುಮಾನಗೊಂಡ ಪೋಲೀಸರು ತನಿಖೆ ಮಾಡಿದಾಗ ಅದು ಕೊಲೆ ಯೆಂದು ತಿಳಿದು ಸವಿತಾಳ ಅಣ್ಣ ಮಂಜುನಾಥ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಾನೇ ಕಿತ್ತು ಹಿಸುಕಿ ಕೊಲೆ ಮಾಡಿದ್ದು ತನ್ನ ತಂಗಿಯ ಶೀಲ ಶಂಕಿಸಿ ಹಿಂಸೆ ನೀಡುತ್ತಿದ್ದ ಕಾರಣಕ್ಕೆ ತಾನೇ ಕೊಲೆ ಮಾಡಿದ್ದೇನೆಂದು ಒಪ್ಪಿಕೊಂಡಿದ್ದು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here