ಫಿಸಿಕಲ್ ಟ್ರೈನರ್ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡ ಅಮೀರ್ ಖಾನ್ ಪುತ್ರಿ ಇರಾ ಖಾನ್

ಚಲನಚಿತ್ರ

ಬಾಲಿವುಡ್ ಖ್ಯಾತ ನಟ ಮಿಸ್ಟರ್ ಫರ್ಫೆಕ್ಷನಿಸ್ಟ್ ಆಮೀರ್ ಖಾನ್ ಪುತ್ರಿ ಇರಾ ಖಾನ್ ತಮ್ಮ ಫಿಸಿಕಲ್ ಟ್ರೈನರ್ ಜೊತೆ ಕೊನೆಗೂ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ತನ್ನ ಪ್ರಿಯಕರಿಗೆ ಉಂಗುರ ತೊಡಿಸಿ, ಮುತ್ತಿಡುವ ಮೂಲಕ ಎಂಗೇಜ್ಡ್ ಆಗಿರುವುದಾಗಿ ತಿಳಿಸಿದ್ದಾರೆ. ಇರಾ ಖಾನ್ ಮತ್ತು ನೂಪುರ್ ಶಿಖಾರೆ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆ ಪ್ರೀತಿ ಇಂದು ಮತ್ತೊಂದು ಹಂತ ಪಡೆದುಕೊಂಡಿದೆ.

ಕಳೆದ ಕೆಲ ಸಮಯದಿಂದ ಒಂದೇ ಮನೆಯಲ್ಲಿ ವಾಸಿಸುತ್ತಿದ್ದ ಇರಾ ಹಾಗೂ ನೂಪುರ್ ಇದೀಗ ಹಸೆಮಣೆ ಏರುತ್ತಿದ್ದಾರೆ.  ನೂಪುರ್ ಶಿಖಾರೆ ಮತ್ತು ಇರಾ ಖಾನ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಜೊತೆಯೇ ಹಲವು ಟ್ರಿಪ್ ಗಳನ್ನು ಕೂಡ ಮಾಡಿದ್ದಾರೆ. ಅಲ್ಲದೇ ಇಬ್ಬರೂ ಒಂದೇ ಮನೆಯಲ್ಲೇ ಹಲವು ದಿನಗಳಿಂದ ವಾಸಿಸುತ್ತಿದ್ದರು. ಇದೊಂದು ಸಹಜೀವನ ಎಂದೇ ಬಾಲಿವುಡ್ ಮಾತಾಡಿಕೊಂಡಿತ್ತು. ಅದಕ್ಕೀಗ ಫುಲ್ ಸ್ಟಾಪ್ ಇಡುವಂತಹ ಕೆಲಸವನ್ನು ಈ ಜೋಡಿ ಮಾಡಿದೆ.

ಮೊನ್ನೆಯಷ್ಟೇ ಬಿಕಿನಿಯಲ್ಲಿ ಇರಾ ಹುಟ್ಟು ಹಬ್ಬವನ್ನು ಆಚರಿಸಿಕೊಂಡಾಗ ಮತ್ತು ಪೂಲ್ ಸೈಡ್ ಪಾರ್ಟಿ ಮಾಡಿದಾಗಲೂ ನೂಪುರ್ ಶಿಖಾರೆ ಜೊತೆಯಲ್ಲೇ ಇದ್ದರು. ಅಲ್ಲದೇ ಈಜುಕೊಳದಲ್ಲಿ ಇಬ್ಬರೂ ತಬ್ಬಿಕೊಂಡ ಫೋಟೋವನ್ನು ಸ್ವತ: ಇರಾ ಅವರೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ನಿಶ್ಚಿತಾರ್ಥಕ್ಕಿಂತ ಮುಂಚೆನೇ ಈ ಜೋಡಿ ಸಖತ್ ಫೇಮಸ್ ಮತ್ತು ವೈರಲ್ ಕೂಡ ಆಗಿತ್ತು. ಬಹಿರಂಗವಾಗಿಯೇ ತಾವಿಬ್ಬರೂ ಪ್ರೀತಿಸುತ್ತಿರುವ ವಿಚಾರವನ್ನೂ ಅವರು ಹಂಚಿಕೊಂಡಿದ್ದರು.

ಕೊನೆಗೂ ತಾನು ಮೆಚ್ಚಿದ್ದ ಮತ್ತು ಜೊತೆ ಜೊತೆಯಲ್ಲೇ ಓಡಾಡುತ್ತಿದ್ದ ಹುಡುಗನನ್ನೇ ಮದುವೆ ಆಗುತ್ತಿರುವ ಇರಾ ಬಗ್ಗೆ ಬಾಲಿವುಡ್ ಮೆಚ್ಚುಗೆ ವ್ಯಕ್ತಪಡಿಸಿದೆ. ಅಲ್ಲದೇ ಈ ಜೋಡಿಗೆ ಶುಭ ಹಾರೈಸಿದೆ. ಮೆಚ್ಚಿದವರ ಜೊತೆಯೇ ಜೀವನ ನಡೆಸುವುದು ಸಂತೋಷಕ್ಕೆ ಮಹಾದಾರಿಯನ್ನುವ ಸಂದೇಶವನ್ನೂ ಈ ಜೋಡಿ ನೀಡಿದೆ.