Home Health ಕೋರೊನಾ ಸೋಂಕಿನಿಂದ ನಿವೃತ್ತ ಸಬ್ ಇನ್ಸ್ ಪೆಕ್ಟರ್ ಶಿವಣ್ಣ (76) ನಿಧನ

ಕೋರೊನಾ ಸೋಂಕಿನಿಂದ ನಿವೃತ್ತ ಸಬ್ ಇನ್ಸ್ ಪೆಕ್ಟರ್ ಶಿವಣ್ಣ (76) ನಿಧನ

819
0

ಚಾಮರಾಜನಗರ : ಕೋರೊನಾ ಸೋಂಕಿನಿಂದ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಿವೃತ್ತ ಸಬ್ ಇನ್ಸ್ ಪೆಕ್ಟರ್ ಶಿವಣ್ಣ (76) ನಿಧನರಾಗಿದ್ದಾರೆ.

ಚಾಮರಾಜನಗರ ತಾಲ್ಲೂಕಿನ ದೊಡ್ಡರಾಯಪೇಟೆ ಗ್ರಾಮದವರಾದ ಶಿವಣ್ಣರವರು ಪೊಲೀಸ್ ಇಲಾಖೆಯಲ್ಲಿ ಸೇರ್ಪಡೆಗೊಂಡು ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿ, ಎ.ಎಸ್.ಐ ಆಗಿ ಮಂಡ್ಯ ಜಿಲ್ಲೆಯ ಕಿಕ್ಕೇರಿ, ಅಲ್ಲಿಂದ ಭಡ್ತಿ ಪಡೆದು, ಶ್ರೀರಂಗಪಟ್ಟಣ, ನಂಜನಗೂಡು, ಕವಲಂದೆ, ತೆರಕಣಾಂಬಿ ಬಳಿಕ ಬಿಳಿಕೆರೆಯಲ್ಲಿ ನಿವೃತ್ತಿ ಹೊಂದಿದರು.

ಮೃತರಿಗೆ ನಾಲ್ವರು ಪುತ್ರಿಯರು ಮತ್ತು ಒಬ್ಬ ಪುತ್ರ ಇದ್ದಾರೆ. ಮೃತರ ಪುತ್ರ ಡಿ.ಎಸ್. ಪ್ರೇಮ್ ಕುಮಾರ್ ಚಾಮರಾಜನಗರ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೃತರಾದ ಶಿವಣ್ಣರವರು ಕರ್ನಾಟಕ ಕಂಪೋಸ್ಟ್ ನಿಗಮದ ಅಧ್ಯಕ್ಷ ಎಸ್.ಮಹದೇವಯ್ಯ ರವರಿಗೆ ಮಾವ. ಮೃತರ ಅಂತ್ಯ ಸಂಸ್ಕಾರವು ಮೈಸೂರಿನ ವಿಜಯನಗರದ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.

VIAಕೋರೊನಾ ಸೋಂಕಿನಿಂದ ನಿವೃತ್ತ ಸಬ್ ಇನ್ಸ್ ಪೆಕ್ಟರ್ ಶಿವಣ್ಣ (76) ನಿಧನ
SOURCEಕೋರೊನಾ ಸೋಂಕಿನಿಂದ ನಿವೃತ್ತ ಸಬ್ ಇನ್ಸ್ ಪೆಕ್ಟರ್ ಶಿವಣ್ಣ (76) ನಿಧನ
Previous articleಕೋವಿಡ್-19 ಲಸಿಕೆಯ ಎರಡನೇ ಡೋಸ್ ಪಡೆದ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ
Next articleಪೊಲೀಸ್ ಚೆಕ್ಪೋಸ್ಟ್ ಮೇಲೆ ವಾನರ ಸೈನ್ಯ ದಾಳಿ; ಸಾಮಗ್ರಿಗಳ ಧ್ವಂಸ

LEAVE A REPLY

Please enter your comment!
Please enter your name here