Home Home ಪ್ರಜಾ ಟಿವಿ ವರದಿಯಿಂದ ಮೈಸೂರು ಜಿಲ್ಲಾಡಳಿತದಲ್ಲಿ ಸಂಚಲನ; ಕೊರೋನಾ ಲೆಕ್ಕ ಬಿಡುಗಡೆ ಮಾಡಿ ಎಂಪಿಗೆ ತಿರುಗೇಟು...

ಪ್ರಜಾ ಟಿವಿ ವರದಿಯಿಂದ ಮೈಸೂರು ಜಿಲ್ಲಾಡಳಿತದಲ್ಲಿ ಸಂಚಲನ; ಕೊರೋನಾ ಲೆಕ್ಕ ಬಿಡುಗಡೆ ಮಾಡಿ ಎಂಪಿಗೆ ತಿರುಗೇಟು ಕೊಟ್ಟ ಡಿಸಿ ರೋಹಿಣಿ ಸಿಂಧೂರಿ

Praja TV Impact in Mysore District | ಪ್ರಜಾ ಟಿವಿ ವರದಿಯಿಂದ ಮೈಸೂರು ಜಿಲ್ಲಾಡಳಿತದಲ್ಲಿ ಸಂಚಲನ

458
0
SHARE

-ಸೋಮಶೇಖರ್, ಪ್ರಜಾ ಟಿವಿ, ಮೈಸೂರು

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಟಾರ್ಗೆಟ್ ಹಿಂದೆ ಮೆಡಿಕಲ್ ಅಂಡ್ ಲ್ಯಾಂಡ್ ಮಾಫಿಯಾ ಕೈವಾಡ ಬಗ್ಗೆ ಪ್ರಜಾ ಟಿವಿ ಬಿತ್ತರಿಸಿದ ವರದಿಯಿಂದ ಮೈಸೂರು ಜಿಲ್ಲಾಡಳಿತದಲ್ಲಿ ಸಂಚಲನ ಉಂಟಾಗಿದೆ. ಡಿಸಿ ಟೀಕಿಸುತ್ತಿರುವ ಸಂಸದ ಪ್ರತಾಪ್ ಸಿಂಹ ಅವರೇ ಮೆಡಿಕಲ್ ಮಾಫಿಯಾ ಬಗ್ಗೆ ತನಿಖೆಗೆ ಒತ್ತಾಯಿಸಿ ಜಿಲ್ಲಾ ಮಂತ್ರಿಗೆ ಪತ್ರ ಬರೆದಿದ್ದಾರೆ.ಇನ್ನೂ ಕೊರೋನಾ ಲೆಕ್ಕ ಬಿಡುಗಡೆ ಮಾಡುವ ಮೂಲಕ ರೋಹಿಣಿ ಎಂಪಿಗೆ ತಿರುಗೇಟು ಕೊಟ್ಟ ಬೆನ್ನಲ್ಲೇ , ಶಾಸಕ ಸಾರಾ ಮಹೇಶ್ ಸಾವಿನ ಅಸಲಿ ಸತ್ಯವನ್ನು ದಾಖಲೆ ಸಹಿತ ಬಿಚ್ಚಿಟ್ಟಿದ್ದಾರೆ.

ಪ್ರಜಾ ಟಿವಿ ವರದಿಯಿಂದ ಮೈಸೂರು ಜಿಲ್ಲಾಡಳಿತದಲ್ಲಿ ಸಂಚಲನ. ಡಿಸಿ ಟೀಕೆಯ ಹಿಂದಿರುವ ಮೆಡಿಕಲ್ ಮಾಫಿಯಾ ತನಿಖೆಗೆ ಸಂಸದ ಪ್ರತಾಪ್ ಸಿಂಹರಿಂದಲೇ ಒತ್ತಾಯ. ತನಿಖೆಗೆ ಆಗ್ರಹಿಸಿ ಜಿಲ್ಲಾ ಮಂತ್ರಿಗೆ ಮೂರು ಪುಟಗಳ ಪತ್ರ ಬರೆದ ಎಂಪಿ.

ಮೈಸೂರು ಜಿಲ್ಲೆಯಲ್ಲಿ ಒಂದೆಡೆ ಕೊರೋನಾ ಅಬ್ಬರಿಸುತ್ತಿದ್ರೆ, ಮತ್ತೊಂದೆಡೆ ಡಿಸಿ v/s ಎಂಪಿ ನಡುವಣ ಸಂಘರ್ಷ ತಾರಕಕ್ಕೇರುತ್ತಲೇ ಇದೆ. ಡಿಸಿ ರೋಹಿಣಿ ಸಿಂಧೂರಿ ಅವರನ್ನು ಟೀಕಿಸುವುದರ ಹಿಂದೆ ಮೆಡಿಕಲ್ ಅಂಡ್ ಲ್ಯಾಂಡ್ ಮಾಫಿಯಾ ಕೈವಾಡ ಇದೆ ಎಂಬ ಅಸಲಿ ಕಹಾನಿಯನ್ನು ನಿನ್ನೆ ಪ್ರಜಾ ಟಿವಿ ಬಯಲಿಗೆಳೆಯುತ್ತಿದ್ದಂತೆ ಒಂದಷ್ಟು ದಿಢೀರ್ ಬೆಳವಣಿಗೆಗಳಾಗಿವೆ. ನಾನು ಯಾವ ಮಾಫಿಯಾದ ಕೈಗೊಂಬೆ ಅಲ್ಲ ಎಂಬುದನ್ನು ತೋರಿಸಿಕೊಳ್ಳುವ ಸಲುವಾಗಿ ಸ್ವತಃ ಸಂಸದ ಪ್ರತಾಪ್ ಸಿಂಹ ಅವರೇ ಸ್ಟೆಪ್ ಡೌನ್ ಆಸ್ಪತ್ರೆ ಲೋಪ ದೋಷಗಳ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ಟಿ ಸೋಮಶೇಖರ್ ಅವರಿಗೆ ಮೂರು ಪುಟಗಳ ಪತ್ರವನ್ನು ಬರೆದು ಡಿಸಿ ರೋಹಿಣಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

* ಕೊರೋನಾ ನಿರ್ವಹಣೆ ಲೆಕ್ಕ ಕೊಡುವಂತೆಯೂ ಡಿಸಿಗೆ ಸಿಂಹ ಒತ್ತಾಯ
* ಕೇಳಿದ ಗಳಿಗೆಯಲ್ಲೇ ಲೆಕ್ಕ ಕೊಟ್ಟು ನಾನು ಲೆಕ್ಕದಲ್ಲೂ ಪಕ್ಕಾ ಎಂದು ತೋರಿಸಿದ ರೋಹಿಣಿ

ಇನ್ನೂ ಜಿಲ್ಲಾ ಮಂತ್ರಿಗೆ ಸಂಸದ ಪ್ರತಾಪ್ ಸಿಂಹ ಬರೆದ ಪತ್ರದಲ್ಲಿ ಕೊರೋನಾ ನಿರ್ವಹಣೆಯ ಲೆಕ್ಕ ಕೊಡುವಂತೆಯೂ ಒತ್ತಾಯಿದ್ರು. ಎಂಪಿ ಸಿಂಹ ಲೆಕ್ಕ ಕೇಳಿದ ಕೆಲವೇ ಗಂಟೆಗಳಲ್ಲಿ ಲೆಕ್ಕ ಬಿಡುಗಡೆ ಮಾಡುವ ಮೂಲಕ ನಾನು ಲೆಕ್ಕದಲ್ಲೂ ಪಕ್ಕಾ ಇದ್ದೇನೆ ಎಂದು ತೋರಿಸುವ ಮೂಲಕ ಸಿಂಹಗೆ ರೋಹಿಣಿ ತಿರುಗೇಟು ನೀಡಿದ್ದಾರೆ. 2020 ಮಾರ್ಚ್ ತಿಂಗಳಲ್ಲಿ ವಿಪತ್ತು ನಿರ್ವಹಣೆಗಾಗಿ ಬಿಡುಗಡೆಯಾಗಿದ್ದ 41 ಕೋಟಿ ಹಣದ ಪೈಕಿ 36 ಕೋಟಿ ರೂಗಳ ಖರ್ಚಿನ ವಿವರವನ್ನೂ ಬಿಡುಗಡೆ ಮಾಡಿದ್ದಾರೆ.

* ಮತ್ತೆ ಡಿಸಿ ವಿರುದ್ದ ಹರಿಹಾಯ್ದ ಶಾಸಕ ಸಾರಾ ಮಹೇಶ್

* ದಾಖಲೆ ಸಹಿತ ಕೊರೋನಾ ಸಾವಿನ ಅಸಲಿ ಸತ್ಯ ಬಿಡುಗಡೆ

ಮೇ ತಿಂಗಳಲ್ಲಿ ಸತ್ತಿದ್ದ 969, ಲೆಕ್ಕ ಕೊಟ್ಟಿದ್ದು 238

ಈ ನಡುವೆ ಕೆ.ಆರ್.ನಗರ ಶಾಸಕ ಸಾರಾ ಮಹೇಶ್ ಇಂದೂ ಕೂಡಾ ಡಿಸಿ ರೋಹಿಣಿ ವಿರುದ್ದ ವಾಗ್ದಾಳಿ ಮುಂದುರೆಸಿದ್ದು, ಮೈಸೂರು ನಗರದಲ್ಲಿ ಮೇ ತಿಂಗಳಲ್ಲಿ 969 ಕೊರೋನಾ ಸಾವು ಆಗಿದೆ. ಆದರೆ, ಜಿಲ್ಲಾಡಳಿತ ಕೇವಲ 238 ಸಾವು ಆಗಿದೆ ಎಂದು ಸುಳ್ಳು ಮಾಹಿತಿ ನೀಡಿದೆ ಎಂದು ದಾಖಲೆ ಬಿಡುಗಡೆ ಮಾಡಿದ್ರು. ಸರ್ಕಾರಕ್ಕೆ ಈ ರೀತಿ ಸುಳ್ಳು ಮಾಹಿತಿ ನೀಡುತ್ತಿರುವುದಾದರೂ ಏಕೆ ? ಎಂದು ಪ್ರಶ್ನಿದಿದ ಸಾರಾ, ಈ ರೀತಿ ಲೆಕ್ಕ ಕೊಡೋಕೆ ನೀವು ಐಎಎಸ್ ಓದಬೇಕಿತ್ತಾ ಎಂದು ಕುಡುಕಿದ್ರು.

ಒಟ್ಟಾರೆ, ಕೊರೋನಾ ಕಮ್ಮಿ ಆಗುತ್ತೋ ಬಿಡುತ್ತೋ ಆದ್ರೆ, ಜಟಾಪಟಿ ಮಾತ್ರ ಹೆಚ್ಚಾಗುತ್ತಲೇ ಇದೆ. ಈ ಜಟಾಪಟಿ ನಾನಾ ನೀನಾ ಎಂಬ ಹಂತ ತಲುಪಿದಂತೆ ಕಾಣುತ್ತಿದೆ.‌

LEAVE A REPLY

Please enter your comment!
Please enter your name here