Home Latest ಪ್ರತಾಪಗೌಡ ಪಾಟೀಲ್ ಭಾವಚಿತ್ರಕ್ಕೆ ಫೇಸ್ಬುಕ್ ನಲ್ಲಿ ಶ್ರದ್ದಾಂಜಲಿ; ತಾರಕಕ್ಕೇರಿದ ಜಗಳ

ಪ್ರತಾಪಗೌಡ ಪಾಟೀಲ್ ಭಾವಚಿತ್ರಕ್ಕೆ ಫೇಸ್ಬುಕ್ ನಲ್ಲಿ ಶ್ರದ್ದಾಂಜಲಿ; ತಾರಕಕ್ಕೇರಿದ ಜಗಳ

ಪ್ರತಾಪಗೌಡ ಪಾಟೀಲ್ ಭಾವಚಿತ್ರಕ್ಕೆ ಫೇಸ್ಬುಕ್ ನಲ್ಲಿ ಶ್ರದ್ದಾಂಜಲಿ; ತಾರಕಕ್ಕೇರಿದ ಜಗಳ

953
0

ವರದಿ: ಬಾಬಾ ಪ್ರಜಾ ಟಿವಿ ರಾಯಚೂರು

ರಾಯಚೂರು ಬ್ರೇಕಿಂಗ್: ಮಸ್ಕಿ ಕ್ಷೇತ್ರದಲ್ಲಿ ನಿಲ್ಲದ ಹೊಡದಾಟ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನಡೆದಿರುವ ಮರಮರಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಪುತ್ರರ ಮೇಲೆ ಪ್ರಕರಣ ದಾಖಲು. ಫೇಸ್ ಬುಕ್ ನಿಂದ ಆರಂಭವಾದ ಜಗಳ ತಾರಕಕ್ಕೇರಿದೆ. ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರ ಭಾವಚಿತ್ರಕ್ಕೆ ಫೇಸ್ಬುಕ್ ನಲ್ಲಿ ಶ್ರದ್ದಾಂಜಲಿ ಸಲ್ಲಿಸಿದ್ದು ಅದನ್ನ ಪ್ರಶ್ನಿಸಿದ್ದಕ್ಕೆ ಪ್ರತಾಪ್ ಗೌಡ ಪುತ್ರ ಜಗಳ ಪ್ರಾರಂಭವಾಗಿದೆ.

ಮಸ್ಕಿ ಪಟ್ಟಣದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಪ್ರತಾಪಗೌಡ ಪಾಟೀಲ ಅವರು ಕಡೆಯವರು ಹಲ್ಲೆ ನಡೆಸಿದ್ದು, ಅವರ ವಿರುದ್ಧ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಠಾಣೆ ಎದುರು ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ದೈವದ ಕಟ್ಟೆ ಮುಂದೆ ನಿಂತಿದ್ದ ಕಾಂಗ್ರೆಸ್ ಕಾರ್ಯಕರ್ತರಾದ ಸುರೇಶ ಬ್ಯಾಳಿ, ಶರಣಪ್ಪ ಎಲಿಗಾರ, ಕೃಷ್ಣ ಚಿಗರಿ ಅವರ ಮೇಲೆ ಮಾಜಿ ಶಾಸಕರ ಪುತ್ರರು ಹಾಗೂ ಅಳಿಯಂದಿರು ಹಲ್ಲೆ ನಡೆಸಿದ್ದು ಅಲ್ಲದೇ ಕಾಂಗ್ರೆಸ್ ಕಾರ್ಯಕರ್ತರ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಕೂಡಲೇ ಅವರನ್ನು ಬಂಧಿಸಬೇಕು ಎಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದರು‌. ಕೆಲಕಾಲ ಪೊಲೀಸ್ ಠಾಣೆಯಲ್ಲಿ ಮಾತಿನ ಚಕಮಕಿ ನಡೆಯಿತು.

ಪ್ರತ್ಯೇಕ ದೂರುಗಳು: ರವಿಗೌಡ, ಪ್ರಸನ್ನ ಪಾಟೀಲ್, ಚೇತನ ಪಾಟೀಲ್, ಶಾಮೀದ್, ಶ್ರೀಧರ ಪಾಟೀಲ್, ವಿಶ್ವ, ರಾಮರೆಡ್ಡಿಗೌಡ, ಶರಣೇಗೌಡ, ರಾಕೇಶ, ಮೌನೇಶ, ಮಂಜುನಾಥ, ಶರಣಪ್ಪ ತೋಳದಿನ್ನಿ, ಅಮರಯ್ಯ, ಕುಮಾರಸ್ವಾಮಿ, ವೀರೇಶ ಬಳಿಗಾರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಾನಭಂಗಕ್ಕೆ ಯತ್ನ ಹಾಗೂ ಕೊಲೆ ಬೆದರಿಕೆ ಪ್ರಕರಣವನ್ನು ರಾಜೇಶ್ವರಿ ಅವರು ದಾಖಲಿಸಿದ್ದಾರೆ. ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ 11 ಜನರ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇಲ್ಲಿಯವರೆಗೆ ಮಸ್ಕಿ ಕೌತಾಳ ತುರುವಿಹಾಳ ಸೇರಿದಂತೆ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಸುದ್ದಿ ತಿಳಿದು ಠಾಣೆಗೆ ಆಗಮಿಸಿದ ಶಾಸಕ ಆರ್. ಬಸನಗೌಡನೇತೃತ್ವದಲ್ಲಿ ಹಲ್ಲೆ ನಡೆಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು
ಆಗಮಿಸಿ ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದರು.

ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಮೂರು ಮೀಸಲು ಪಡೆ ತುಕಡಿಗಳು, ಸುತ್ತಮುತ್ತ ಠಾಣೆಗಳಿಂದ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

VIAಪ್ರತಾಪಗೌಡ ಪಾಟೀಲ್ ಭಾವಚಿತ್ರಕ್ಕೆ ಫೇಸ್ಬುಕ್ ನಲ್ಲಿ ಶ್ರದ್ದಾಂಜಲಿ; ತಾರಕಕ್ಕೇರಿದ ಜಗಳ
SOURCEಪ್ರತಾಪಗೌಡ ಪಾಟೀಲ್ ಭಾವಚಿತ್ರಕ್ಕೆ ಫೇಸ್ಬುಕ್ ನಲ್ಲಿ ಶ್ರದ್ದಾಂಜಲಿ; ತಾರಕಕ್ಕೇರಿದ ಜಗಳ
Previous articleರಂಜಾನ್ ವ್ಯಾಪಾರದ ಭರದಲ್ಲಿ ಸಾಮಾಜಿಕ ಅಂತರದ ಕಗ್ಗೊಲೆ!
Next articleಚಾಮರಾಜನಗರ ಜಿಲ್ಲಾಧಿಕಾರಿ ಆರೋಪಕ್ಕೆ ಭಾವುಕರಾದ ರೋಹಿಣಿ ಸಿಂಧೂರಿ

LEAVE A REPLY

Please enter your comment!
Please enter your name here