ಪ್ರಧಾನಿ ಮೋದಿ ಹೇಳಿದ್ದು ಸರಿಯಾಗಿದೆ: ಫ್ರಾನ್ಸ್ ಅಧ್ಯಕ್ಷ ಎಮ್ಯೂನುಎಲ್ ಮ್ಯಾಕ್ರೋನ್

ಅಂತರಾಷ್ಟ್ರೀಯ

‘ಇದು ಯುದ್ಧಕ್ಕೆ ಸಮಯವಲ್ಲ’ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು ಸರಿಯಾಗಿದೆ’ ಎಂದು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ನ ನ್ಯೂಯಾರ್ಕ್ ನಗರದಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮಹಾಧಿವೇಶನದಲ್ಲಿ ಹೇಳಿದ್ದಾರೆ

‘ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇದು ಯುದ್ಧದ ಸಮಯವಲ್ಲ ಎಂದು ಹೇಳಿದ್ದು ಸರಿಯಾಗಿದೆ. ಇದು ಪಶ್ಚಿಮ ದೇಶಗಳ ವಿರುದ್ಧ ಸೇಡು ತೀರಿಸಿಕೊಳ್ಳುವುದಕ್ಕಾಗಲೀ ಅಥವಾ ಪೂರ್ವದ ವಿರುದ್ಧ ಪಶ್ಚಿಮವನ್ನು ಎತ್ತಿಕಟ್ಟುವುದಕ್ಕಾಗಲೀ ಅಲ್ಲ. ಇದು ವಿಶ್ವದ ಎಲ್ಲ ದೇಶಗಳಿಗೆ ಅನ್ವಯಿಸುವ ಸಮಾನ ಸಂಗತಿಯಾಗಿದೆ. ನಾವೆಲ್ಲರೂ ಜೊತೆಗೂಡಿ ಸವಾಲುಗಳನ್ನು ಎದುರಿಸಬೇಕು ಎಂದರು.

ಕಳೆದ ವಾರ ನಡೆದ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ ಉಕ್ರೇನ್ ಮೇಲಿನ ಆಕ್ರಮಣ ಕೊನೆಗೊಳಿಸಿ, ಶಾಂತಿ ಮತ್ತು ಮಾತುಕತೆಯ ಹಾದಿಗೆ ಮರಳಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಪ್ರಧಾನಿ ಮೋದಿ ಅವರು ಸಲಹೆ ನೀಡಿದ್ದರು. ಮೋದಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ಹೇಳಿದ್ದು ಸರಿಯಾಗಿದೆ. ಇದು ಯುದ್ಧದ ಸಮಯವಲ್ಲ ಎಂದು ಮ್ಯಾಕ್ರೋನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸಂಘರ್ಷದ ಹಿನ್ನೆಲೆಯಲ್ಲಿ ಅಭಿವೃದ್ಧಿ ಶೀಲ ರಾಷ್ಟ್ರಗಳು ಎದುರಿಸುತ್ತಿರುವ ಆಹಾರ ಮತ್ತು ಇಂಧನ ಭದ್ರತೆಯ ಸಮಸ್ಯೆಗಳನ್ನು ರಷ್ಯಾದ ಅಧ್ಯಕ್ಷರು ಪರಿಗಣಿಸಬೇಕಾಗುತ್ತದೆ ಎಂದು ಹೇಳಿದ್ದ ಮೋದಿ, ಸಂಘರ್ಷವನ್ನು ಶೀಘ್ರ ನಿಲ್ಲಿಸಬೇಕು ಎಂದಿದ್ದರು. ‘ಇದು ಯುದ್ಧದ ಯುಗವಲ್ಲ. ಅದರ ಬಗ್ಗೆ ನಾನು ನಿಮ್ಮೊಂದಿಗೆ ದೂರವಾಣಿ ಸಂಭಾಷಣೆಯಲ್ಲಿ ಮಾತನಾಡಿದ್ದೇನೆ. ಇಂದು ನಾವು ಶಾಂತಿಯ ಹಾದಿಯಲ್ಲಿ ಹೇಗೆ ಪ್ರಗತಿ ಸಾಧಿಸಬಹುದು ಎಂಬುದರ ಬಗ್ಗೆ ಮಾತನಾಡಲು ಅವಕಾಶ ಪಡೆಯುತ್ತೇವೆ. ಭಾರತ ಮತ್ತು ರಷ್ಯಾ ಹಲವಾರು ದಶಕಗಳಿಂದ ಪರಸ್ಪರ ಸೌಹಾರ್ದ ಮತ್ತು ಸಹಕಾರ ಸಂಬಂಧ ಹೊಂದಿವೆ’ ಎಂದು ಮೋದಿ ಹೇಳಿದ್ದರು.

ಮೋದಿ ಮಾತಿಗೆ ಪ್ರತಿಕ್ರಿಯಿಸಿದ್ದ ಪುಟಿನ್  ‘ಉಕ್ರೇನ್ ಸಂಘರ್ಷದ ಬಗ್ಗೆ ಭಾರತದ ನಿಲುವಿನ ಏನು ಎಂಬುದು ನಮಗೆ ತಿಳಿದಿದೆ. ಈ ಸಂಘರ್ಷ ಸಾಧ್ಯವಾದಷ್ಟೂ ಬೇಗ ಕೊನೆಗೊಳ್ಳಬೆಕೆಂದು ನಾವು ಬಯಸುತ್ತೇವೆ ಎಂದು ಪುಟಿನ್ ಹೇಳಿದ್ದರು. ಆದರೆ ಈ ಮಧ್ಯೆ ಮತ್ತೆ ಉಕ್ರೇನ್ ಮೇಲೆ ಮತ್ತೆ ಅಣ್ವಸ್ತ್ರ ದಾಳಿಯ ಸುಳಿವು ನೀಡಿದ್ದಾರೆ.