ಖಾಸಗಿ ವಿಷಯಗಳು ಎಂದರೆ ಇಬ್ಬರಲ್ಲೇ ಇರಬೇಕಾದದ್ದು: ವೈರಲ್ ವಿಡಿಯೋ ಬಗ್ಗೆ ಮಾತನಾಡಿದ ಸೋನು ಗೌಡ

ಚಲನಚಿತ್ರ

ಬಿಗ್ ಬಾಸ್ ಓಟಿಟಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಅವರ ಖಾಸಗಿ ವಿಡಿಯೋ ಕುರಿತು ಸಾಮಾಜಿಕ ಜಾಲಾ ತಾಣದಲ್ಲಿ ಸಾಕಷ್ಟು ಚರ್ಚೆ ಆಗಿತ್ತು.ಇದೇ ಕಾರಣಕ್ಕೆ ಅವರು ಬಿಗ್ ಬಾಸ್ ಮನೆಗೆ ಹೋಗುವುದನ್ನು ಅನೇಕರು ವಿರೋಧಿಸಿಸದ್ದರು. ತಮ್ಮ ಖಾಸಗಿ ವಿಡಿಯೋ ಲೀಕ್ ಆದ ಕುರಿತು ಸೋನು ಗೌಡ ಬಿಗ್ ಬಾಸ್ ಮನೆಗೆ ಹೋದಾಗ ಬಹಿರಂಗವಾಗಿಯೇ ಹೇಳಿಕೊಂಡರು. ಅಲ್ಲದೇ, ಆ ಹುಡುಗನ ಬಳಿ ಮತ್ತೊಂದು ವಿಡಿಯೋ ಇರುವುದಾಗಿಯೂ ತಿಳಿಸಿ ಶಾಕ್ ನೀಡಿದ್ದರು. ಇದೀಗ ತಮ್ಮ ಖಾಸಗಿ ವಿಡಿಯೋ ಕುರಿತು ಮತ್ತೆ ಮಾತನಾಡಿದ್ದಾರೆ.

ಖಾಸಗಿ ವಿಷಯಗಳು ಎಂದರೆ, ಇಬ್ಬರಲ್ಲೇ ಇರಬೇಕಾದದ್ದು. ಆದರೆ, ಆ ಹುಡುಗ ನಂಬಿಕೆ ದ್ರೋಹ ಮಾಡಿದ್ದಾನೆ ಎಂದು ಸೋನು ಗೌಡ ಹೇಳಿದ್ದಾರೆ. ‘ನಾನು ಆ ಹುಡುಗನನ್ನು ನಂಬಿದ್ದೆ. ತುಂಬಾ ಇಷ್ಟ ಪಡುತ್ತಿದ್ದೆ. ಆದರೆ, ಅವನು ಆ ರೀತಿ ನಡೆದುಕೊಳ್ಳುತ್ತಾನೆ ಅಂತ ಅಂದುಕೊಂಡಿರಲಿಲ್ಲ. ಮೊದಲು ಆ ವಿಡಿಯೋವನ್ನು ಮಾಡಿಕೊಂಡಿದ್ದು ತಪ್ಪು. ಎರಡನೆಯದ್ದು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದು ತಪ್ಪು. ಅದರಿಂದಾಗಿ ನನ್ನ ಮರ್ಯಾದೆ ಹೋಯಿತು ಎಂದು ಬೇಸರ ಹೊರ ಹಾಕಿದ್ದಾರೆ.

ಆ ವಿಡಿಯೋವನ್ನು ಅವನು ಹಾಕಿದ್ದಾನೋ ಅಥವಾ ಬೇರೆ ಯಾರಾದರೂ ಹಾಕಿದ್ದಾರೋ ಅದು ಬೇರೆ ವಿಚಾರ. ಆದರೆ, ಆ ಹುಡುಗ ವಿಡಿಯೋವನ್ನು ಶೂಟ್ ಮಾಡಿದ ಮೇಲೆ ಅಲ್ಲವೆ ಅಷ್ಟೊಂದು ಆಗಿದ್ದು? ಈ ರೀತಿ ಯಾವ ಹುಡುಗಿಗೂ ಮೋಸ ಆಗಬಾರದು. ಆ ಕಾರಣಕ್ಕಾಗಿಯೇ ನಾನು ಬಹಿರಂಗವಾಗಿಯೇ ಅದನ್ನು ಹೇಳಿದೆ ಎಂದಿದ್ದಾರೆ.