Home District ಕೆ.ಪಿ.ಸಿ.ಸಿ ವಕ್ತಾರ ಶಾಸಕ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಟಿ

ಕೆ.ಪಿ.ಸಿ.ಸಿ ವಕ್ತಾರ ಶಾಸಕ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಟಿ

ಕೆ.ಪಿ.ಸಿ.ಸಿ ವಕ್ತಾರ ಶಾಸಕ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಟಿ

312
0

ಕಲಬುರಗಿ : ಕೆ.ಪಿ.ಸಿ.ಸಿ ವಕ್ತಾರ ಶಾಸಕ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಬಹಳ ವರ್ಷಗಳ ನಂತರ ವಿರೋಧ ಪಕ್ಷದ ಶಾಸಕರ ಜೊತೆ ಉಸ್ತುವಾರಿ ಸಚಿವರು ಸಭೆ ನಡೆಸಿದರು. ನಿನ್ನೆ ಸಂಜೆ ಕಲಬುರಗಿ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ನಮ್ಮನ್ನ ಕರೆದು ಸಭೆ ನಡೆಸಿದರು. ನಿನ್ನೆ ನಡೆದ ಸಭೆಯಲ್ಲಿ ಜಿಲ್ಲೆಯಲ್ಲಿನ ಆಕ್ಸಿಜನ್ ಕೊರತೆ ಗಮನಕ್ಕೆ ತರಲಾಗಿತ್ತು. ರಾಜ್ಯದಲ್ಲಿ 25 ಜನ ಎಂ.ಪಿ ಗಳು ಬದುಕಿದ್ದಾರ ಸತ್ತಾರ ಅಂತಾಗೊತ್ತಿಲ್ಲ, ರಾಜ್ಯ ಹೈ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆಕ್ಸಿಜನ್ ಪೂರೈಕೆ ಮಾಡುವಂತೆ ಸೂಚನೆ ನೀಡಿದ್ದು. ಇಷ್ಟು ಜನ ಎಂ.ಪಿ ಗಳಿದ್ದರು ಯಾರು ಮಾತಾಡದೆ ಸುಮ್ಮನಿರೋದನ್ನ ನೋಡಿದ್ರೆ ಬದುಕಿದ್ದಾರ ಸತ್ತಿದ್ದಾರಾ ಅಂತಾ ಅನಸುತ್ತೆ.

ಸುಪ್ರೀಂಕೋರ್ಟ್ ಮತ್ತು ಹೈ ಕೋರ್ಟ್ ಆದೇಶ ಎತ್ತಿ ಹಿಡಿದು ಆಕ್ಸಿಜನ್ ಸಪ್ಲೈ ಮಾಡುವಂತೆ ಸೂಚನೆ ನೀಡಿದೆ. ಆದ್ರೆ ಮೂರು ನಾಲ್ಕು ಜನ ಕೇಂದ್ರ ಸಚಿವರು ಕತ್ತೆ ಕಾಯೋದಕ್ಕೆ ಕಳುಹಿಸಿರೋದಾ ಏನು ಇವರು ರಾಜ್ಯದ ಪರವಾಗಿ ಮಾತಾಡೋಕೆ ಆಗಲ್ಲ ಅಂದ್ರೆ ರಾಜಿನಾಮೆ ಕೊಟ್ಟು ನಮ್ಮ ಜೊತೆ ಹೋರಾಟ ಮಾಡಲಿ, ಮುಂದಿನ ಒಂದು ತಿಂಗಳಿಗೆ ಜಿಲ್ಲೆಗೆ ಬೇಕಾಗುವ ಆಕ್ಸಿಜನ್ ಬಗ್ಗೆ ಮಾಹಿತಿ ಪಡೆದು ಸಂಗ್ರಹಿಸಬೇಕಾಗಿದೆ ನಮ್ಮ ರಾಜ್ಯದ ಆಕ್ಸಿಜನ್ ಬೇರೆ ರಾಜ್ಯಗಳಿಗೆ ಸಪ್ಲೈ ಆಗ್ತಿದೆ.

ಮಹಾರಾಷ್ಟ್ರ ಸರ್ಕಾರ ರಾಜ್ಯದ ಆಕ್ಸಿಜನ್ ತಮ್ಮ ರಾಜ್ಯಕ್ಕೆ ಬಳಕೆ ಮಾಡಿಕೊಳ್ಳುವಂತೆ ಆದೇಶ ಮಾಡಿದೆ ಆದ್ರೆ ಕರ್ನಾಟಕದ ಸರ್ಕಾರ ಯಾಕೆ ಈ ರೀತಿಯ ಆದೇಶ ಮಾಡಿಲ್ಲ, ಇಲ್ಲಿನ ಆಕ್ಸಿಜನ್ ರಾತ್ರೋ ರಾತ್ರಿ ಮಹಾರಾಷ್ಟ್ರ ಮತ್ತು ತೆಲಂಗಾಣಕ್ಕೆ ಸಪ್ಲೈ ಆಗ್ತಿದೆ, ಕಲಬುರಗಿಯಲ್ಲಿ ಬೆಡ್ ಬ್ಲಾಕಿಂಗ್ ದಂಧೆ ನಡೆಯುತ್ತಿದೆಯಾ? ಬಿಜೆಪಿಯ ನಾಯಕರಿಗೆ ಕರೆ ಮಾಡಿದ್ರೆ ನೀವು ಹೆಸರು ಕೋಡಿ ನಾನು ಬೆಡ್ ಕೊಡಿಸ್ತೆನೆ ಅಂತಾ ಹೇಳಿದ್ದಾರೆ. ರೆಮ್ ಡಿಸಿವರ್ ಇಂಜೆಕ್ಷನ್ ಕೊಡಿಸಿ ಅಂದ್ರೆ ಅಡ್ಮಿಟ್ ಆಗಿ ಅಂತಾರೆ, ಇಲ್ಲೂ ಕೂಡ ಬೆಡ್ ಬ್ಲಾಕಿಂಗ್ ದಂಧೆ ಬಗ್ಗೆ ಅನುಮಾನ ಬರ್ತಿದೆ ಹೀಗಾಗಿ ತನಿಖೆಯಾಗಬೇಕು ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದರು.

VIAಕೆ.ಪಿ.ಸಿ.ಸಿ ವಕ್ತಾರ ಶಾಸಕ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಟಿ
SOURCEಕೆ.ಪಿ.ಸಿ.ಸಿ ವಕ್ತಾರ ಶಾಸಕ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಟಿ
Previous articleಕೋಲಾರದಲ್ಲಿ ಹೆಚ್ಚಿದ ಕೊರೋನಾ ಮಹಾಮಾರಿಯ ಅಟ್ಟಹಾಸ!
Next articleಮಹಿಳಾ ಪೇದೆಗಳಿಂದ ಬೈಕ್ ಸವಾರರಿಗೆ ಬಿಸಿ ಬಿಸಿ ಕಜ್ಜಾಯ!

LEAVE A REPLY

Please enter your comment!
Please enter your name here