Home District ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿದ ಪ್ರಕರಣಕ್ಕೆ ರಾಜ್ಯ ಸರ್ಕಾರವೇ ಹೊಣೆ; ಸಿ.ಪುಟ್ಟರಂಗಶೆಟ್ಟಿ

ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿದ ಪ್ರಕರಣಕ್ಕೆ ರಾಜ್ಯ ಸರ್ಕಾರವೇ ಹೊಣೆ; ಸಿ.ಪುಟ್ಟರಂಗಶೆಟ್ಟಿ

ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿದ ಪ್ರಕರಣಕ್ಕೆ ರಾಜ್ಯ ಸರ್ಕಾರವೇ ಹೊಣೆ; ಸಿ.ಪುಟ್ಟರಂಗಶೆಟ್ಟಿ

290
0

ವರದಿ: ನಾ.ಅಶ್ವಥ್ ಕುಮಾರ್

ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿದ ಪ್ರಕರಣಕ್ಕೆ ರಾಜ್ಯ ಸರ್ಕಾರವೇ ಹೊಣೆ, ಸಾವನ್ನು ಮರೆಮಾಚಲು ಯತ್ನಿಸಿದ ರಾಜ್ಯ ಆರೋಗ್ಯ ಸಚಿವ ಹಾಗೂ ಅಧಿಕಾರಿಗಳೇ ಆಕ್ಸಿಜನ್ ಕೊರತೆಯಿಂದ ಸೋಂಕಿತರ ಸಾವನ್ನಪ್ಪಲು ಕಾರಣ ಎಂದು ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸ್ಥಳೀಯ ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ಚಾಮರಾಜನಗರ ಜಿಲ್ಲಾ ಕಾಂಗ್ರೇಸ್ ಕಛೇರಿಯಲ್ಲಿ ಸುದ್ದಿಘೋಷ್ಟಿಯಲ್ಲಿ ಮಾತನಾಡಿದ ಸಿ.ಪುಟ್ಟರಂಗಶೆಟ್ಟಿ, ಆಕ್ಸಿಜನ್ ಕೊರತೆ ಇರುವ ಬಗ್ಗೆ ಸೋಂಕಿತರ ಸಾವಿಗೂ ಮುನ್ನ ನಾನೇ ಮಾಹಿತಿ ನೀಡಿದ್ದೆ, ಆದರು ಮುಂಜಾಗೃತಾ ಕ್ರಮ ಕೈ ಗೊಳ್ಳದ ರಾಜ್ಯ ಸರ್ಕಾರ ನೇರ ಹೊಣೆ ಎಂದು ಹೇಳಿ, ಆಕ್ಸಿಜನ್ ದುರಂತದಲ್ಲಿ ಮೃತ ಪಟ್ಟ ನಂತರವೂ 34 ಕ್ಕೂ ಹೆಚ್ಚು ಸಾವನ್ನಪ್ಪಿದ್ದಾರೆ ಎಂದು ನಾನು ಹೇಳಿದ್ದು ಎಂದರು.

ಸಾವನ್ನು ಮರೆಮಾಚಿ ಬರೀ ಮೂರೇ ಜನರು ಆಮ್ಲಜನಕದಿಂದ ಸಾವನ್ನಪ್ಪಿದ್ರು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸುಳ್ಳು ಹೇಳಿಕೆ ನೀಡಿದರು ಎಂದು ಶಾಸಕ ಪುಟ್ಟರಂಗಶೆಟ್ಟಿ ಹೇಳಿ, ಕೋರೊನಾ ಸೋಂಕಿತರನ್ನು ಕೋವಿಡ್ ನಿಯಮ ಮೀರಿ ಶವವನ್ನು ಕುಟುಂಬದವರಿಗೆ ನೀಡುವುದರ ಮೂಲಕ ಸಾವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.

ಕೊರೋನಾ ಸೋಂಕಿತರ ಸಾವಿನ್ನಲ್ಲಿ ಚೆಲ್ಲಾಟ ಆಡ್ತಾ ಇರೋ ಆರೋಗ್ಯ ಸಚಿವರಿಗೆ ಸೋಂಕಿತರ ಸಾವಿಗೆ ಕಿಂಚಿತ್ತು ಕರುಣೆ ಇಲ್ಲ ಎಂದು ಹೇಳಿ, ಆಕ್ಸಿಜನ್ ಖಾಲಿಯಾಗುತ್ತಿರುವ ಬಗ್ಗೆ ಮಾಹಿತಿ ಇದ್ರೂ ಸೋಂಕಿತರ ಸಾವಿನ ಜೊತೆ ಆರೋಗ್ಯ ಸಚಿವ ಚೆಲ್ಲಾಟವಾಡಿದರು ಎಂದರು.

ಕೋವಿಡ್ ಸೋಂಕಿತರ ಸಾವಿಗೆ ಬೇಜವ್ದಾರಿ ಆರೋಗ್ಯ ಸಚಿವ ಹಾಗೂ ರಾಜ್ಯ ಸರ್ಕಾರ ನೇರ ಹೊಣೆ ಎಂದು ಹೇಳಿ, ಮೃತ ಕುಟುಂವಸ್ಥರಿಗೆ ಯಡಿಯೂರಪ್ಪ ತಲಾ 25 ಲಕ್ಷ ರೂಪಾಯಿಗಳನ್ನು ಪರಿಹಾರ ನೀಡಬೇಕು ಎಂದು ಶಾಸಕ ಪುಟ್ಟರಂಗಶೆಟ್ಟಿ ಒತ್ತಾಯಿಸಿದರು.

VIAಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿದ ಪ್ರಕರಣಕ್ಕೆ ರಾಜ್ಯ ಸರ್ಕಾರವೇ ಹೊಣೆ; ಸಿ.ಪುಟ್ಟರಂಗಶೆಟ್ಟಿ
SOURCEಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿದ ಪ್ರಕರಣಕ್ಕೆ ರಾಜ್ಯ ಸರ್ಕಾರವೇ ಹೊಣೆ; ಸಿ.ಪುಟ್ಟರಂಗಶೆಟ್ಟಿ
Previous articleಲಾಕ್ ಡೌನ್ ವಿಚಾರ; ಸಚಿವರ ನಡುವೆ ಭುಗಿಲೆದ್ದ ಗೊಂದಲ!
Next articleಜಿಲ್ಲಾ ಕಾಂಗ್ರೇಸ್ ಕಛೇರಿಯಲ್ಲಿ ಕರೆದಿದ್ದ ಸುದ್ದಿಘೋಷ್ಟಿಯಲ್ಲಿ ಧೃವನಾರಾಯಣ್ ಹೇಳಿದ್ದೇನು ಗೊತ್ತೇ?

LEAVE A REPLY

Please enter your comment!
Please enter your name here