ರಾಣಿ ಎಲಿಜಬೆತ್ II ಅಂತ್ಯಕ್ರಿಯೆ ವೀಕ್ಷಿಸಿದ ಜಗತ್ತಿನ ಅರ್ಧಕ್ಕಿಂತ ಹೆಚ್ಚು ಜನ

ಅಂತರಾಷ್ಟ್ರೀಯ

ವಯೋ ಸಹಜ ಕಾಯಿಲೆಯಲ್ಲಿ ಬಳಲುತ್ತಿದ್ದ ಬ್ರಿಟನ್ ಇತಿಹಾಸದಲ್ಲೇ ಸುದೀರ್ಘ ವರ್ಷಗಳ ಕಾಲ ಆಳ್ವಿಕೆ ನಡೆಸಿದ ರಾಣಿ ಎಂದೇ ಖ್ಯಾತಿ ಘಳಿಸಿದ ರಾಣಿ ಎಲಿಜಬೆತ್  II ನಿಧನರಾಗಿದ್ದಾರೆ. ರಾಣಿ ಎಲಿಜಬೆತ್ ಅಂತ್ಯಕ್ರಿಯೆಯ ಪ್ರಸಾರವನ್ನು ಜಗತ್ತಿನ ಅರ್ಧಕ್ಕಿಂತಲೂ ಹೆಚ್ಚು ಮಂದಿ ನೋಡಿದ್ದಾರೆ ಎನ್ನಲಾಗುತ್ತಿದೆ.

ಸೆಪ್ಟೆಂಬರ್ 19ರಂದು ರಾಣಿ ಎಲಿಜಬೆತ್ II ರ ಅಂತ್ಯಕ್ರಿಯೆ ನಡೆದಿದ್ದು, ಅಂತ್ಯಕ್ರಿಯೆಯನ್ನು ನೇರ ಪ್ರಸಾರ ಮಾಡಲಾಗಿತ್ತು. ಅಂದಾಜಿನ ಪ್ರಕಾರ ಸುಮಾರು 420 ಕೋಟಿ ಜನರು ಅಂತ್ಯಕ್ರಿಯೆ ವೀಕ್ಷಿಸಿದ್ದಾರೆ ಎಂದು ಅಂದಾಜಿಸಲಾಗಿದೆ.

ಈ ಹಿಂದೆ 1997ರಲ್ಲಿ ನಿಧನರಾದ ರಾಜಕುಮಾರಿ ಡಯಾನಾ ಅವರ ಅಂತ್ಯಕ್ರಿಯೆಯನ್ನು 2.5 ಬಿಲಿಯನ್ ಮಂದಿ ವೀಕ್ಷಿಸಿದ್ದರು ಎಂದು ಎನ್​ಬಿಸಿ ನ್ಯೂಸ್ ವರದಿ ಮಾಡಿತ್ತು. ಇದೀಗ ಮೃತಪಟ್ಟಿರುವ ರಾಣಿ ಎಲಿಜಬೆತ್ II ಅಂತ್ಯಕ್ರಿಯೆಯನ್ನು ಬರೋಬ್ಬರಿ 410 ಕೋಟಿ ಮಂದಿ ವೀಕ್ಷಿಸಿದ್ದಾರೆ ಎಂದು ನ್ಯೂಸ್​ವೀಕ್ ವರದಿ ಮಾಡಿದೆ.

1952ರಲ್ಲಿ ಬ್ರಿಟನ್ ರಾಣಿಯಾಗಿ ಅಧಿಕಾರ ಸ್ವೀಕರಿಸಿದ ರಾಣಿ ಎಲಿಜಬೆತ್ II 70 ವರ್ಷಗಳ ಕಾಲ ಸುದೀರ್ಘ ಆಡಳಿತ ನಡೆಸಿದ್ದರು.. ಬ್ರಿಟನ್ ಅರಸೊತ್ತಿಗೆಯಲ್ಲಿ ಅತೀ ಹೆಚ್ಚು ಕಾಲ ಇದ್ದ ದಾಖಲೆ ಎಲಿಜಬೆತ್ II ಅವರದಾಗಿದೆ.