Home Home ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಹೆಚ್ಚಿದ ಕೊರೊನಾ ಆತಂಕ!

ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಹೆಚ್ಚಿದ ಕೊರೊನಾ ಆತಂಕ!

ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಹೆಚ್ಚಿದ ಕೊರೊನಾ ಆತಂಕ!

315
0

ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಕೊರೊನಾ ಆತಂಕ ಹೆಚ್ಚಾಗಿದ್ದು, ಸಿಬ್ಬಂದಿಗಳು ಆತಂಕದಲ್ಲಿ ಕೆಲಸ ಮಾಡುವಂತಾಗಿದೆ. ಈಗಾಗಲೇ ಕರ್ತವ್ಯನಿರತ 13 ಕಾರ್ಮಿಕರು ಸಿಬ್ಬಂದಿಗಳು ಕೋವಿಡ್ ಗೆ ಬಲಿಯಾಗಿದ್ದಾರೆ. ಅನೇಕರಿಗೆ ಕೊರೊನಾ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಆದರೆ ಇಂಧನ ಇಲಾಖೆ ಕೂಡ ಶೇಕಡಾ ೫೦% ರಷ್ಟು ಸಿಬ್ಬಂದಿಯನ್ನು ಬಳಸಿಕೊಂಡು ರೋಟೇಶನ್ ಮಾದರಿಯಲ್ಲಿ ಕೆಲಸ ಪಡೆಯಬೇಕು ಎಂದು ಸರ್ಕಾರದವರು ಸುತ್ತೋಲೆ ಇದ್ದರೂ ಇಲ್ಲಿ ಅನ್ವಯವಾಗುತ್ತಿಲ್ಲ ಎಂಬುವುದು ಕಾರ್ಮಿಕರ ಆರೋಪ ಆದರೆ ಸರಕಾರದ ಈ ನಿಯಮ ಶಾಖೋತ್ಪನ್ನ ಕೇಂದ್ರಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನ ಮಾಡುವುದು ಕಷ್ಟ ಎನ್ನುವುದು ಅಧಿಕಾರಿಗಳ ವಾದವಾಗಿದೆ ಇದರಿಂದ ಸಿಬ್ಬಂದಿ ಆಡಕತ್ತರಿಯಲ್ಲಿ ಸಿಲುಕುವಂತಾಗಿದೆ ಇದೇ ಕಾರಣಕ್ಕೆ ಜೀವ ಕೈಯಲ್ಲಿ ಹಿಡಿದು ಕೆಲಸ ಮಾಡುವಂತಾಗಿದೆ ರಾಯಚೂರು ಶಾಖೋತ್ಪನ್ನ ಕೇಂದ್ರದಲ್ಲಿ ಕರ್ತವ್ಯನಿರತರಾಗಿದ್ದ 6 ಸಿಬ್ಬಂದಿ ಕೋರೊನಾಕ್ಕೆ ಬಲಿ ಆಗಿದ್ದಾರೆ
ಇನ್ನು 45 ಜನರಿಗೆ ಸೋಂಕು ದೃಢಪಟ್ಟಿದೆ ಕೆಲವರು ಮನೆಯಲ್ಲಿ ಇನ್ನೂ ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಇದರ ಮಧ್ಯೆ ವಿದ್ಯುತ್ ಉತ್ಪಾದನೆ ಮಾತ್ರ ನಿರಂತರವಾಗಿದ್ದು ಸಿಬ್ಬಂದಿ ಕಾರ್ಯಕ್ಷಮತೆ ಪರೀಕ್ಷೆಯ ಮಾಡುವಂತಾಗಿದೆ

ಸ್ಥಗಿತಕ್ಕೆ ಕಾರ್ಮಿಕರ ಒತ್ತಾಯ: ಸರ್ಕಾರವೇ ಶೇಕಡ ೫೦% ರಷ್ಟು ಆಧಾರದಡಿ ಸಿಬ್ಬಂದಿಯಿಂದ ಕೆಲಸ ಪಡೆಯಬೇಕು ಎಂದು ಸುತ್ತೋಲೆ ಹೊರಡಿಸಿದೆ ಆದರೆ ಇಲ್ಲಿನ ಅಧಿಕಾರಿಗಳು ಅದಕ್ಕೆ ಒಪ್ಪುತ್ತಿಲ್ಲ ಇನ್ನೂ ಸೋಂಕು ಹರಡುವ ಭೀತಿಯಿದ್ದು ಥಂಬ್ ವ್ಯವಸ್ಥೆ ನಿಲ್ಲಿಸುವಂತೆ ಕೋರಿದರು ಒಪ್ಪುತ್ತಿಲ್ಲ ಕೆಪಿಸಿ ವ್ಯವಸ್ಥಾಪಕರಿಗೆ, ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಮುಖೇನ ಮನವಿ ಮಾಡಿದರೂ ಯಾವುದೇ ಸ್ಪಂದನೆ ಸಿಗುತ್ತಿಲ್ಲ ರೋಟೇಶನ್ ಮಾದರಿಯಲ್ಲಿ ಕೆಲಸ ಮಾಡಿಸುವ ಮೂಲಕ ಉಳಿದ ಕಾರ್ಮಿಕರ ಜೀವರಕ್ಷಣೆಗೆ ಆಡಳಿತ ಮಂಡಳಿ ಮುಂದಾಗಲಿ ಎಂಬುದು ಆರ್ಟಿಪಿಎಸ್ ಕಾರ್ಮಿಕರ ಸಂಘದ ವಾದವಾಗಿದೆ.

VIAರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಹೆಚ್ಚಿದ ಕೊರೊನಾ ಆತಂಕ!
SOURCEರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಹೆಚ್ಚಿದ ಕೊರೊನಾ ಆತಂಕ!
Previous articleಕೊರೋನಾ ಜೊತೆಯಲ್ಲೇ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕಠಿಣ ಕ್ರಮಗಳು!
Next articleಕೊರೋನಾ ಬಗ್ಗೆ ಕೇಳಿ ಬಂದಿದೆ ಮತ್ತೊಂದು ಎಚ್ಚರಿಕೆ!

LEAVE A REPLY

Please enter your comment!
Please enter your name here