ಗೂಗಲ್ ಮ್ಯಾಪ್ ನಲ್ಲಿ ರಾಜಧಾನಿ ಬೆಂಗಳೂರಿನ ರಸ್ತೆಗುಂಡಿಗಳ ಅಡ್ರೆಸ್..!

ಬೆಂಗಳೂರು

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಗೇನು  ಕಮ್ಮಿ ಇಲ್ಲ. ರಸ್ತೆ ಮೇಲೆ ಗುಂಡಿ ಇದ್ಯೋ ಇಲ್ಲ ಗುಂಡಿ ಮೇಲೆ ರಸ್ತೆ ಇದ್ಯೋ ಒಂದು ಗೊತಿಲ್ಲ.. ಇನ್ನು ನಮ್ಮ ಐಟಿ ಸಿಟಯಲ್ಲಿ ಮಳೆ  ಬಂದ್ರಂತೂ ಮುಗಿತು, ರಸ್ತೆ ಯಾವುದು ಗುಂಡಿ ಯಾವುದು ಅನ್ನೋದೇ ಕಾಣೋದಿಲ್ಲ. ಇದೀಗ ಪಾಟ್ ಹೊಲ್ ಗಳು ಗೂಗಲ್ ಗೂ ಎಂಟ್ರಿ ಕೊಟ್ಟಿದ್ದು , ಎಲ್ಲರಿಗೂ ನಗೆ ಪಾಟಲಾಗು ತ್ತಿದೆ..ಅದೆಷ್ಟೋ ಜನರ ಜೀವವನ್ನೇ ಬಲಿ ಪಡೆದಿವೆ ಈ ರಸ್ತೆ ಗುಂಡಿಗಳು.

ಇನ್ನು ರಸ್ತೆ ಗುಂಡಿ ಮುಚ್ಚುವ ಬಗ್ಗೆ ಅನೇಕ ಬಾರಿ ಹೈಕೋರ್ಟ್ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿದೆ. ಆಗ ಬಿಬಿಎಂಪಿ ಮುಚ್ಚೋ ನಾಟಕ ಆಡುತ್ತೆ. ಅದು ಒಂದೇ ವಾರಕ್ಕೆ ಕಿತ್ತೋಗುತ್ತೆ. ರಸ್ತೆ ಗುಂಡಿಗೆ ಅದೆಷ್ಟೋ ವಾಹನ ಸವಾರರು ಬಿದ್ದು ಪ್ರಾಣ ಕಳೆದುಕೊಂಡ್ರೆ, ಇನ್ನೂ ಕೆಲವರು ಕೈಕಾಲು ಮುರಿದುಕೊಳ್ತಿದ್ದಾರೆ. ರಸ್ತೆ ಗುಂಡಿಗಳಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ. ಈಗ ಗೂಗಲ್‍ನಲ್ಲೂ ಬೆಂಗಳೂರಿನ ಮರ್ಯಾದೆ ಹೋಗಿದೆ. ಗೂಗಲ್ ಬೆಂಗಳೂರಿನ ಗುಂಡಿಗೆ 5 ಸ್ಟಾರ್ ಕೊಟ್ಟಿದೆಯಂತೆ.

ರಾಜಧಾನಿ ಬೆಂಗಳೂರಿನಲ್ಲಿ ಹದಗೆಟ್ಟ ರಸ್ತೆಗಳಿಂದ ಜನರು ಹೈರಾಣಾಗಿರುವುದು ಹೊಸತೇನಲ್ಲ. ಹಿಂದೊಮ್ಮೆ ಹೆರೋಹಳ್ಳಿ ರಸ್ತೆಯಲ್ಲಿ ಕಲಾವಿದ ಬಾದಲ್ ನಂಜುಂಡಸ್ವಾಮಿ ರಸ್ತೆಗುಂಡಿಯಲ್ಲಿ  ಚಂದ್ರಗ್ರಹ ಸೃಷ್ಟಿ ಮಾಡಿದ್ದರು.ಇನ್ನೊಂದೆಡೆ ಮೈಸೂರು ರಸ್ತೆಯಲ್ಲಿ ‘ಮಂಗಳ ಗ್ರಹದಂತಹ ವಾತಾವರಣ ಕಾಣುತ್ತಿದೆ ನೋಡಿ’ ಎಂದು ರಸ್ತೆ ಗುಂಡಿ ಮುಚ್ಚದ ಅಧಿಕಾರಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿ ಬಿಸಿ ಮುಟ್ಟಿಸಲಾಗಿತ್ತು. ಈಗ ಗೂಗಲ್‌ ಮ್ಯಾಪ್‌ನಲ್ಲಿ ರಸ್ತೆಗುಂಡಿಗಳ ಅಡ್ರೆಸ್‌ ಸಿಗುತ್ತಿದೆ!

ಗೂಗಲ್‌ ಮ್ಯಾಪ್‌ನಲ್ಲಿ ರಸ್ತೆಗುಂಡಿ ಎಲ್ಲಿದೆ ಎಂದು ಸರ್ಚ್‌ ಕೊಟ್ಟರೆ ಅಡ್ರೆಸ್‌ ಅನ್ನು ತೋರಿಸುತ್ತಿದೆ. ಇದೇ ಫೋಟೋವನ್ನು ಜನರು ಪೋಸ್ಟ್‌ ಮಾಡುತ್ತಾ ಅಧಿಕಾರಿಗಳ ಕಾರ್ಯವೈಖರಿಗೆ ಕಾಲೆಳೆಯುತ್ತಿದ್ದಾರೆ. ರಾಜಧಾನಿ ಬೆಂಗಳೂರಿನ ರಸ್ತೆಗುಂಡಿ ವಿಚಾರ ಮತ್ತೆ ವೈರಲ್ ಆಗುತ್ತಿದ್ದು, ರಸ್ತೆಗುಂಡಿಗೆ ಪ್ರತ್ಯೇಕ ವಿಳಾಸ ನೀಡಿರುವ ಕುರಿತು ದೊಡ್ಡ ಚರ್ಚೆಯೇ ನಡೆಯುತ್ತಿದೆ.ಗೂಗಲ್ ಮ್ಯಾಪ್‌ನಲ್ಲಿ Abizer’s pothole ಎಂದು ಬೆಳ್ಳಂದೂರು ರಸ್ತೆಗುಂಡಿಯ ಲೊಕೇಷನ್‌ ಕಾಣುತ್ತಿದೆ. nimo tai ಎಂಬ ಟ್ವಿಟರ್ ಅಕೌಂಟ್‌ನಿಂದ ರಸ್ತೆಗುಂಡಿಯ ಸ್ಕ್ರೀನ್‌ಶಾಟ್ ವೈರಲ್‌ ಆಗುತ್ತಿದೆ. ಇದು ನಾನು ಕಂಡ ಅದ್ಭುತ ರಸ್ತೆಗುಂಡಿ, ದಯವಿಟ್ಟು ಇಲ್ಲಿಗೆ ಭೇಟಿ ಕೊಡಿ ಎಂದು ಟ್ಯಾಗ್‌ಲೈನ್‌ ಹಾಕಿದ್ದಾರೆ.

ಬೆಳ್ಳಂದೂರು ಹೋಗಲು ರಸ್ತೆಗುಂಡಿಯನ್ನು ಲ್ಯಾಂಡ್‌ ಮಾರ್ಕ್‌ ಆಗಿ ನೀಡಲಾಗಿತ್ತು. ಈ ರಸ್ತೆಗುಂಡಿ ವಿಳಾಸದ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ಲ್ಯಾಂಡ್‌ ಮಾರ್ಕ್‌ ಅನ್ನು ಗೂಗಲ್‌ನಿಂದ ತೆಗೆದುಹಾಕಲಾಗಿದೆ. ಆದರೆ, ಈ ಪೋಸ್ಟ್‌ನ ಸ್ಕ್ರೀನ್‌ಶಾಟ್‌ ಸೋಷಿಯಲ್‌ ಮೀಡಿಯಾದಲ್ಲಿ ಹಾಕಿ ನೆಟ್ಟಿಗರು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಒಟ್ನಲ್ಲಿ ಇಲ್ಲಿಯವರೆಗೂ ಬಿಬಿಎಂಪಿ ಮತ್ತು ಸರ್ಕಾರ ಗುಂಡಿ ಗಂಡಾಂತರ ವಿರುದ್ಧ ಯಾವ ಕ್ರಮ ಕೈಗೊಳ್ಳಲಿ. ಇಷ್ಟು ದಿನ ಬರೀ ಬೆಂಗಳೂರಿಗರಿಗೆ ಮಾತ್ರ ಗೊತಿದ್ದ ವಿಚಾರ , ಇದೀಗ ಬೆಂಗಳೂರಿನ ಅಸಲಿಯತ್ತು ಇಂಟರ್ನ್ಯಾಷನಲ್ ಲೆವೆಲ್ ನಲ್ಲಿ ಮಾನ ಹರಾಜು ಆಗುತ್ತಿರುವುದು ವಿಪರ್ಯಾಸದ ಸಂಗತಿ..