Home Latest ಶ್ರೀ ರಾಮನವಮಿ ಆಚರಣೆಯ ವಿಶೇಷತೆ ಏನು ಗೊತ್ತೇ?

ಶ್ರೀ ರಾಮನವಮಿ ಆಚರಣೆಯ ವಿಶೇಷತೆ ಏನು ಗೊತ್ತೇ?

311
0

ತಿ ವರ್ಷ ರಾಮನವಮಿಯಲ್ಲೂ ಇಡೀ ದೇಶದ ಜನರನ್ನು ಕಾಡುವ ಪ್ರಶ್ನೆ ಏನೆಂದರೆ, ಪ್ರಭು ಶ್ರೀರಾಮಚಂದ್ರನ ಜನ್ಮ ದಿನಾಂಕ ಯಾವುದು? ಎಂದು. ಕರಾರುವಕ್ಕಾಗಿ ಯಾರಿಗೆ ಗೊತ್ತಿದೆ?. ಅದನ್ನು ಸಾಕ್ಷಾಧಾರಗಳ ಸಹಿತ ಯಾರು ಸಾಬೀತು ಪಡಿಸಿದ್ದಾರೆ ಅನ್ನೋದು. ಎರಡನೆಯದಾಗಿ ಶ್ರೀರಾಮಚಂದ್ರನ ವಂಶಜರು ಈಗಲೂ ಇದ್ದಾರಾ.. ಇಷ್ಟಾಗಿಯೂ ವಂಶಜರು ಈಗ ಭಾರತದಲ್ಲಿ ಎಲ್ಲಿದ್ದಾರೆ ಗೊತ್ತೇ?

ಯಾಕೋ ಪ್ರಭು ಶ್ರೀರಾಮಚಂದ್ರನಿಗೂ ವಿವಾದಗಳಿಗೂ ಅಂಟಿದ ನಂಟು.ಶ್ರೀರಾಮ ರಾಮಾಯಣದ ಪಾತ್ರ ಮಾತ್ರ. ರಾಮಾಯಣ ವಾಲ್ಮೀಕಿ ಬರೆದ ಕಾಲ್ಪನಿಕ ಗ್ರಂಥ. ಶ್ರೀರಾಮಚಂದ್ರ ಎಂಬ ವ್ಯಕ್ತಿ ಈ ಭಾರತದಲ್ಲಿ ಇರಲೇ ಇಲ್ಲ ಎಂದು ವಾದಿಸುವ ಜನರೂ ಇದ್ದಾರೆ. ಇಲ್ಲ ಶ್ರೀರಾಮ ಜನಿಸಿದ್ದು, ಇದೇ ಭರತ ಭೂಮಿಯಲ್ಲಿ, ಅಯೋಧ್ಯೆಯಲ್ಲಿ, ಶ್ರೀರಾಮ ಕಾಲ್ಪನಿಕ ವ್ಯಕ್ತಿಯಲ್ಲ,ಮನುಷ್ಯನಾಗಿ ಹುಟ್ಟಿದ ಅವತಾರಿ ಪುರುಷ ಎಂದು ಆಸ್ತಿಕರು ನಂಬುತ್ತಾರೆ. ಆದರೆ, ಶ್ರೀರಾಮಚಂದ್ರನನ್ನು ನಂಬುವವರು ಹಾಗೂ ನಂಬದೇ ಇರುವವರು ಸಾಧಾರಣವಾಗಿ ಕೇಳುವ ಪ್ರಶ್ನೆ ಶ್ರೀರಾಮ ಚಂದ್ರನ ಹುಟ್ಟಿದ ದಿನಾಂಕ ಯಾವುದು.ಜನ್ಮ ಸ್ಥಳ ಯಾವುದು. ಇದನ್ನನು ಕರಾರುವಕ್ಕಾಗಿ ಸಾಕ್ಷಾಧಾರಗಳ ಸಹಿತ ವಿವರಿಸುವುದು ಹೇಗೆ? ಅದಕ್ಕೆ ಇಲ್ಲಿದೆ ಉತ್ತರ.

ಪ್ರಭು ಶ್ರೀರಾಮಚಂದ್ರ, ಸೂರ್ಯ ಕುಲ, ಇಕ್ಷ್ವಾಕು ವಂಶಜದಲ್ಲಿ ಜನಿಸಿದವನು ಈ ಬಗ್ಗೆ ಯಾವುದೇ ಗೊಂದಲವಿಲ್ಲ. ರಾಮಾಯಣದಲ್ಲಿ ಶ್ರೀರಾಮಚಂದ್ರನ ವಂಶವೃಕ್ಷದ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ಆದರೆ, ಶ್ರೀರಾಮನ ತರವಾಯ ಆತನ ಮಕ್ಕಳಾದ ಕುಶಲವರು ಅಯೋಧ್ಯೆಯನ್ನು ಆಳಿದ್ರು. ಶ್ರೀರಾಮಚಂದ್ರ ತನ್ನ ಹಿರಿಯ ಮಗ ಕುಶನಿಗೆ ಪಟ್ಟ ಕಟ್ಟಿದ ನಂತರ ಸರಯೂ ನದಿ ಪ್ರವೇಶ ಮಾಡುತ್ತಾನೆ. ಅಲ್ಲಿಗೆ ಶ್ರೀರಾಮನ ಅವತಾರ ಸಮಾಪ್ತಿಯಾಗುತ್ತದೆ. ರಾಮಾಯಣದಲ್ಲೂ ಅಷ್ಟೇ ಇರೋದು. ಕುಶಲವರ ಬಳಿಕ ಇಕ್ಷ್ವಾಕು ವಂಶ ಮುಂದುವರಿಯಲಿಲ್ಲವೇ. ಈಗಲೂ ಶ್ರೀರಾಮನ ವಂಶಜರು ಇದ್ದಾರೆಯೇ ಎಂಬುದಕ್ಕೂ ಸಹಾ ಇಲ್ಲಿದೆ ಇದೆ ಉತ್ತರ.

ಅಯೋಧ್ಯೆ ವಿವಾದ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿ, ನ್ಯಾಯಾಲಯವು ರಾಮ_ಲಲ್ಲಾದ ಸಲಹೆಗಾರರನ್ನು ಕೇಳಿತು, ಆದರೆ ಅಯೋಧ್ಯೆಯಲ್ಲಿ ಅಥವಾ ಜಗತ್ತಿನಲ್ಲಿ ಯಾರಾದರೂ ಭಗವಾನ್ ರಾಮನ ವಂಶಸ್ಥರು ಇದ್ದಾರೆಯೇ ಎಂಬ ಪ್ರಶ್ನೆ ಅಲ್ಲಿ ಉದ್ಭವಿಸಿತು. ಈಗ ಈ ಪ್ರಶ್ನೆಗೆ ಹೊಸ ತಿರುವು ಬಂದಿದೆ, ಈ ವಿಷಯ ಜನರನ್ನು ಅಚ್ಚರಿಗೊಳಿಸಿದೆ. ಈ ಪ್ರಶ್ನೆಗೆ ಹೊಸ ತಿರುವು ಏನೆಂದರೆ ಭಗವಾನ್ ಶ್ರೀ ರಾಮನ ವಂಶಸ್ಥರು ಭಾರತದಲ್ಲಿ ಇದ್ದಾರೆ ಎಂಬುದು ಇದೀಗ ಸ್ಪಷ್ಟವಾಗಿದೆ.

ಭಾರತೀಯರ ಪಾಲಿಗೆ ಪ್ರಭು ಶ್ರೀರಾಮ, ಅಯೋಧ್ಯೆಯನ್ನು ಆಳಿದ ಒಬ್ಬ ರಾಜ ಅಲ್ಲವೇ ಅಲ್ಲ, ಆತ ದೈವಸ್ವರೂಪಿ, ವಿಷ್ಣುವಿನ ಅವತಾರಿ. ದುಷ್ಟ ಶಿಕ್ಷಣೆ, ಶಿಷ್ಟ ರಕ್ಷಣೆಗಾಗಿ ಅವತರಿಸಿದವನು. ರಾಮ ಮರ್ಯಾದಾ ಪುರುಷೋತ್ತಮ. ಹಾಗಾಗಿಯೇ ರಾಮನ ಯುಗ ಸಮಾಪ್ತಿಯಾಗಿ ಐದು ಸಾವಿರ ವರ್ಷಗಳೇ ಗತಿಸಿದ್ದರೂ ಈಗಲೂ ರಾಮ ಭಾರತೀಯರ ಹೃದಯದಲ್ಲಿ ನೆಲೆಸಿದ್ದಾನೆ.ಹಾಗಾಗಿಯೇ ಶ್ರೀರಾಮನವಮಿ ಭಾರತೀಯರಿಗೆ ಸಂಭ್ರಮದ ಹಬ್ಬ. ಶ್ರೀರಾಮನವಮಿ ಆಚರಣೆ ಹೇಗಿರುತ್ತದೆ ನೋಡೋಣ.

ರಾಮನವಮಿ ಆಚರಣೆಗೆ, ರಾಮತಾರಕ ಮಂತ್ರಕ್ಕೆ, ರಾಮಾಯಣ ಕೃತಿಪಠಣೆಗೆ, ಅಷ್ಟೇ ಏಕೆ ಶ್ರೀರಾಮ ಹೆಸರಿಗೆ ಅತ್ಯಂತ ವಿಶೇಷತೆ ಇದೆ. ರಾಮನವಮಿಯನ್ನು ದೇಶದಲ್ಲಿ ಹೇಗೆಲ್ಲಾ ಆಚರಿಸುತ್ತಾರೆ. ರಾಮನವಮಿ ಆಚರಣೆಯ ಮಹತ್ವವೇನು ತಿಳಿದುಕೊಳ್ಳೋಣ ಬನ್ನಿ.

ಈ ಬಾರಿ ರಾಷ್ಟ್ರಾದ್ಯಂತ ಜನರನ್ನು ಕಾಡುತ್ತಿರುವ ಕೊರೊನಾ 2ನೇ ಅಲೆಯ ಸೋಂಕು, ರಾಮನವಮಿಯ ಸಂಭ್ರಮವನ್ನೇ ಕಿತ್ತುಕೊಂಡಿದೆ.ರಾಮನವಮಿಯ ದಿನ ಬೀದಿ ಬೀದಿಗಳಲ್ಲಿ ಅರವಟ್ಟಿಗೆಗಳನ್ನು ಸ್ಥಾಪಿಸಿ, ಶ್ರೀರಾಮನನ್ನು ಪೂಜಿಸಿ, ಹೆಸರುಬೇಳೆ ಕೋಸಂಬರಿ, ನೀರು ಮಜ್ಜಿಗೆ, ಬೆಲ್ಲದ ಪಾನಕ ವಿತರಿಸಿ,ಬೇಸಿಗೆಯ ಬಿಸಿಲಿನ ಹೊಡತವನ್ನೂ ಕಡಿಮೆ ಮಾಡುತ್ತಿದ್ದ ಆ ದಿನಗಳು ಈ ಬಾರಿ ಕಾಣುತ್ತಿಲ್ಲ ಅಯೋಧ್ಯೆಯಲ್ಲಂತೂ ಶ್ರೀರಾಮನವಮಿ ಆಚರಣೆಯನ್ನೇ ಸರ್ಕಾರ ರದ್ದು ಮಾಡಿದೆ. ಜನ ಏನಿದ್ದರೂ ತಮ್ಮ ಮನೆಗಳಲ್ಲಿ ಕುಳಿತು “ರಾಮಾಯ ರಾಮ ಭದ್ರಾಯ ರಾಮ ಚಂದ್ರಾಯ ವೇದಸೆ, ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ” ಅಂತಾ ರಾಮತಾರಕ ಮಂತ್ರ ಜಪ ಮಾಡಿಕೊಂಡು, ಸುರಕ್ಷಿತವಾಗಿರಬೇಕಷ್ಟೇ.

Previous articleಕೊರೋನಾ ಅಟ್ಟಹಾಸ; ಆಸ್ಪತ್ರೆಯ ಎದುರೇ ನರಳಿ ನರಳಿ ಪ್ರಾಣಬಿಟ್ಟ ಸೊಂಕಿತ!
Next articleಕೆಲಸಕ್ಕೆ ಹೊರಟವರು ಸೇರಿದ್ದು ಮಸಣಕ್ಕೆ; ಅದು ಹೇಗೆ ಗೊತ್ತೇ?

LEAVE A REPLY

Please enter your comment!
Please enter your name here