ಕೋವಿಡ್ ಹಾಟ್ ಸ್ಪಾಟ್ ಗಳಲ್ಲಿ ರ್ಯಾಪಿಡ್ ಆ್ಯಂಟಿಜಮ್ ಟೆಸ್ಟ್ ಗೆ ಕ್ರಮ: ಜಿಲ್ಲಾಧಿಕಾರಿ ಎಂ.ಆರ್ ರವಿ

ಕೋವಿಡ್ ಹಾಟ್ ಸ್ಪಾಟ್ ಗಳಲ್ಲಿ ರ್ಯಾಪಿಡ್ ಆ್ಯಂಟಿಜಮ್ ಟೆಸ್ಟ್ ಗೆ ಕ್ರಮ: ಜಿಲ್ಲಾಧಿಕಾರಿ ಎಂ.ಆರ್ ರವಿ

480
0

ವರದಿ: ನಾ.ಅಶ್ವಥ್ ಕುಮಾರ್

ಚಾಮರಾಜನಗರ: ಕೋವಿಡ್ ಪ್ರಕರಣ ಹೆಚ್ಚಿರುವ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕು ಹಾಗೂ ಗ್ರಾಮಗಳನ್ನು ಗುರುತಿಸಿ ಹಾಟ್ ಸ್ಪಾಟ್ ಮಾಡುವ ಮೂಲಕ ಸರ್ವೆ ನಡೆಸಿ ಜನರಿಗೆ ರ್ಯಾಟ್ ಟೆಸ್ಟ್ ಒಳಪಡಿಸುತ್ತಿದ್ದೇವೆ. ಪಾಸಿಟಿವ್ ಬಂದವರನ್ನೂ ತಕ್ಷಣ ಆಸ್ಪತ್ರೆಗೆ ರವಾನಿಸುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಎಂ.ಆರ್ ರವಿ ತಿಳಿಸಿದರು.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನಗರದ ಸರ್ಕಾರಿ‌ ಉಪವಿಭಾಗದ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿ, ಕೊರೊನಾ ಹರಡುವಿಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ರ್ಯಾಟ್ ಟೆಸ್ಟ್ ಪ್ರಯೋಗ ಮಾಡುತ್ತಿದ್ದು ಹಾಟ್ ಸ್ಪಾಟ್ ಗಳಾಗಿರುವ ಊರುಗಳಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ. ಪರಿಣಾಮ ತ್ವರಿತ ಕೋವಿಡ್ ಫಲಿತಾಂಶ ಪಡೆದು ಕ್ರಮ ವಹಿಸುತ್ತಿದ್ದೇವೆ ಎಂದರು.

ಇನ್ನೂ ಪ್ರತಿ ಹಳ್ಳಿಗಳಿಗೂ ಭೇಟಿ ನೀಡಿ ಮನೆ ಮನೆ ಸರ್ವೆ ನಡೆಸುತ್ತಿದ್ದೇವೆ. 19 ಸಾವಿರ ಮನೆಗಳಿಗೆ ತಲುಪಿದ್ದೇವೆ. ಶೀತ,ಕೆಮ್ಮು,ನೆಗಡಿ,ಜ್ವರ ಇಂತಹ ಲಕ್ಷಣಗಳಿದ್ದರೆ ಐಸೋಲೇಟ್ ಮಾಡುವ ಮೂಲಕ ತಪಾಸಣೆಗೆ ಒಳಪಡಿಸುತ್ತಿದ್ದೇವೆ, ಸ್ವಾಬ್ ಟೆಸ್ಟ್ ನಲ್ಲಿ ಕೋವಿಡ್ ಲಕ್ಷಣಗಳು ಕಂಡು ಬಂದಿರುವವವರಿಗೆ ಮೂರು ದಿನಕ್ಕೆ ಹಾಗುವಷ್ಟೂ ಅಗತ್ಯ ಔಷದ ನೀಡುತ್ತಿದ್ದು. ಪಾಸಿಟಿವ್ ಬರುವ‌ ಮುನ್ನವೆ ಆರಂಭದಲ್ಲೇ ಕೋವಿಡ್ ಚಿಕಿತ್ಸೆಗೆ ನೀಡಲು ಮುಂದುಗುತ್ತಿದ್ದೇವೆ‌. ಇಂತಹ‌ ಕ್ರಮಗಳಿಂದ ಕೋವಿಡ್ ಇತ್ತೀಚಿನ ದಿನದಲ್ಲಿ ಸ್ಥಿರತೆ ಕಂಡು ಕೊಂಡಿದೆ. ಸಾರ್ವನಿಕರು ನಮ್ಮೊಂದಿಗೆ ಸಹಕಾರಮಾಡಬೇಕಿದೆ ಎಂದರು.

ಎಂ.ಸಿ.ಹೆಚ್ ಆಸ್ಪತ್ರಗೆ 24 ಕಾನ್ಸನ್ರ್ಟೇಟರ್ ವ್ಯವಸ್ಥೆ ಇದೆ: ಕೊರೊನಾ ಚಿಕಿತ್ಸೆಗೆ ಮಹಿಳಾ‌ ಮತ್ತು‌ ಮಕ್ಕಳ ಆಸ್ಪತ್ರೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಾಗಿದೆ. ಸದ್ಯ 24 ಹಾಸಿಗೆಗೆ ಕಾನ್ಸನ್ರ್ಟೇಟರ್ ಹಾಕಲಾಗಿದೆ. ಟ್ರಯಾಜ್ ಮಾಡುವಾಗಲೇ ಸೋಂಕಿತನಿಗೆ ಪ್ರಾಣವಾಯು ಅಗತ್ಯ ವಿದ್ದರೆ ತಕ್ಷಣ ಒದಗಿಸುವ ಕೆಲಸ ಮಾಡಲಾಗುತ್ತದೆ ಜಿಲ್ಲಾಧಿಕಾರಿ‌ ಡಾ.ಎಂ.ಆರ್. ರವಜ ತಿಳಿಸಿದರು.

ಮೊರಾರ್ಜಿ ಶಾಲೆ‌ಯಲ್ಲೂ ಕೋವಿಡ್ ಕೇರ್ ಸೆಂಟರ್ ತೆರೆಯಲಾಗುತ್ತದೆ: 125 ಹಾಸಿಗೆವುಳ್ಳ ಕಿತ್ತೂರು ರಾಣೆ ಚೆನ್ನಮ್ಮ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್ ಭರ್ತಿ ಆಗುತ್ತಿರುವುದು ಕಂಡು ಬಂದಿದ್ದು. ಪಕ್ಕದಲ್ಲಿರುವ ಮೊರಾರ್ಜಿ ಶಾಲೆಯಲ್ಲೂ ಕೋವಿಡ್ ಕೇರ್ ಸೆಂಟರ್ ತೆರೆಯಲು ಸಿದ್ಧತೆಗಳನ್ನು ‌ಮಾಡಲಾಗುತ್ತಿದ್ದು.ಇನ್ನೆರಡು ದಿನದಲ್ಲಿ ಸೆಂಟರ್ ಕಾರ್ಯನಿರ್ವಹಿಸಲಿದೆ ಎಂದರು. ಈ ವೇಳೆ ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಯ ವೈದ್ಯರು ಹಾಜರಿದ್ದರು.

VIAಕೋವಿಡ್ ಹಾಟ್ ಸ್ಪಾಟ್ ಗಳಲ್ಲಿ ರ್ಯಾಪಿಡ್ ಆ್ಯಂಟಿಜಮ್ ಟೆಸ್ಟ್ ಗೆ ಕ್ರಮ: ಜಿಲ್ಲಾಧಿಕಾರಿ ಎಂ.ಆರ್ ರವಿ
SOURCEಕೋವಿಡ್ ಹಾಟ್ ಸ್ಪಾಟ್ ಗಳಲ್ಲಿ ರ್ಯಾಪಿಡ್ ಆ್ಯಂಟಿಜಮ್ ಟೆಸ್ಟ್ ಗೆ ಕ್ರಮ: ಜಿಲ್ಲಾಧಿಕಾರಿ ಎಂ.ಆರ್ ರವಿ
Previous articleಚಾಮರಾಜನಗರದಲ್ಲಿ ಇಂದು ಕೊರೋನಾ ಇಳಿಮುಖ!
Next articleಕೊರೋನಾ ನಡುವೆ ಸಂತೆಯಲ್ಲಿ ತುಂಬಿದ ಜನಸಾಗರ!

LEAVE A REPLY

Please enter your comment!
Please enter your name here