
ಹೋಟೆಲ್ ನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣ: 40 ಜನ ಮಾಡೆಲ್ ಗಳಿಗೆ ನೋಟಿಸ್
ಬೆಂಗಳೂರು: ಬೆಂಗಳೂರು ನಗರದ ಐಷಾರಾಮಿ ಹೋಟೆಲ್ ನಲ್ಲಿ ನಡೆದ ರೇವ್ ಪಾರ್ಟಿ ಮತ್ತು ಡ್ರಗ್ಸ್ ಸೇವನೆ ಪ್ರಕರಣದ ತನಿಖೆಯನ್ನು ಹಲಸೂರು ಪೊಲೀಸರು ಚುರುಕುಗೊಳಿಸಿದ್ದು ದೇಶ ಮತ್ತು ವಿದೇಶದ 40 ಜನ ಮಾಡೆಲ್ ಗಳಿಗೆ ನೋಟಿಸ್ ನೀಡಿದ್ದಾರೆ. ಎಲ್ಲರಿಗೂ ಒಂದು ವಾರದೊಳಗೆ ತನಿಖೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಜೂನ್ 12ರಂದು ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅವರ ಸಹೋದರ ಸಿದ್ಧಾರ್ಥ್ ಕಪೂರ್ ಭಾಗವಹಿಸಿದ್ದ ಪಾರ್ಟಿಯಲ್ಲಿ ಸುಮಾರು 150 ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು. ಡ್ರಗ್ಸ್ ಸೇವನೆ ಸಂಬಂಧ ಹಲಸೂರು ಪೊಲೀಸರು ದಾಳಿ ಮಾಡಿ ಹಲವರನ್ನು ಬಂಧಿಸಿದ್ದರು. ಇದರಲ್ಲಿ ಸಿದ್ಧಾರ್ಥ್ ಕಪೂರ್ ಸೇರಿ ಆರು ಮಂದಿ ಡ್ರಗ್ಸ್ ಸೇವಿಸಿರುವುದು ಸಾಬೀತಾಗಿತ್ತು.