Home KARNATAKA RCB ಇಂದು ಪಂಜಾಬ್ ವಿರುದ್ಧ ಗೆದ್ದರೆ ಇದ್ಯಾ ಒಂದು ಚಾನ್ಸ್..??! ಭಾರೀ ಒತ್ತಡದಲ್ಲಿ ಕೊಹ್ಲಿ ಬಾಯ್ಸ್…

RCB ಇಂದು ಪಂಜಾಬ್ ವಿರುದ್ಧ ಗೆದ್ದರೆ ಇದ್ಯಾ ಒಂದು ಚಾನ್ಸ್..??! ಭಾರೀ ಒತ್ತಡದಲ್ಲಿ ಕೊಹ್ಲಿ ಬಾಯ್ಸ್…

3155
0
SHARE

ಇಂದೋರ್ ನಲ್ಲಿಂದು ರಾಯಲ್ ಚಾಲೆಂಜರ್ಸ ಬೆಂಗಳೂರು ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ತಂಡಗಳು ಮುಖಾಮುಖಿಯಾಗಲಿವೆ. ಪ್ಲೇ ಆಫ್ ರೇಸ್ ನಲ್ಲಿರೋ ಉಭಯ ತಂಡಗಳಿಗೂ ಇಂದಿನ ಪಂದ್ಯ ನಿರ್ಣಾಯಕವಾಗಿದ್ದು, ಒಂದೇ ಒಂದು ಪಂದ್ಯದಲ್ಲಿ ಮುಗ್ಗರಿಸಿದರೂ ದೊಡ್ಡ ಹೊಡೆತ ಬೀಳಲಿದೆ.ಹೀಗಾಗಿ ಪಂಜಾಬ್ ಹಾಗೂ ಬೆಂಗಳೂರು ತಂಡಗಳಿಗೂ ಗೆಲ್ಲಲೇಬೇಕಾದ ಒತ್ತಡ ಕಂಡುಬಂದಿದೆ…

ಐಪಿಎಲ್ ಸೀಸನ್ 11ರ ಲೀಗ್ ಹಂತದ ಪಂದ್ಯಗಳು ಮುಗಿಯುತ್ತ ಬಂದಿದೆ. 8 ತಂಡಗಳ ಪೈಕಿ ಕೆಲವೇ ಕೆಲವು ತಂಡಗಳು ಅಮೋಘ ಪ್ರದರ್ಶನ ನೀಡಿ ಪ್ಲೇ ಆಫ್ ಹಂತಕ್ಕೆ ಲಗ್ಗೆ ಇಡಲು ಹಾತೊರೆಯುತ್ತಿವೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ಕೂಡ ಪ್ಲೇ ಆಫ್ ರೇಸ್ ನಲ್ಲಿದ್ದು, ಇಂದಿನ ಪಂದ್ಯದಲ್ಲಿ ಜಿದ್ದಾಜಿದ್ದಿ ನಡೆಯಸಲಿವೆ…

ಇನ್ನು ಪ್ರೀತಿಜಿಂಟಾ ಪಾಳೆಯ ಕೂಡ ಆರಂಭದಲ್ಲೆ ಅಬ್ಬರಿಸಿ, ಪ್ರಮುಖ ಪಂದ್ಯಗಳಲ್ಲಿ ಎಡವುತ್ತಿದೆ. ಹೀಗಾಗಿ ಪ್ಲೇ ಆಫ್ ಕನಸಿನಲ್ಲಿರೋ ಉಭಯ ತಂಡಗಳಿಗೂ ಪ್ರತಿಯೊಂದು ಪಂದ್ಯ ಮಹತ್ವವಾಗಿದ್ದು, ಒಂದೇ ಒಂದು ಪಂದ್ಯ ಸೋತರೂ ದೊಡ್ಡ ಪೆಟ್ಟು ಬೀಳುವ ಸಾಧ್ಯತೆ ಇದೆ.ಗೆಲ್ಲಲೇಬೇಕಾದ ಒತ್ತಡದಲ್ಲಿದೆ ರಾಯಲ್ ಚಾಲೆಂಜರ್ಸ್ ಟೂರ್ನಿಯಲ್ಲಿ ಹಾವು-ಏಣಿ ಆಟದಂತೆ ಪ್ರದರ್ಶನ ನೀಡ್ತಿರೋ ರೆಡ್ ಆರ್ಮಿ ಆಡಿರೋ 11 ಪಂದ್ಯಗಳಲ್ಲಿ ಕೇವಲ 4ರಲ್ಲಿ ಗೆದ್ದು 7ರಲ್ಲಿ ಸೋತು ಸುಣ್ಣವಾಗಿದೆ…

ಹೀಗಾಗಿದ್ದರೂ ಪ್ಲೇ ಆಫ್ ಕನಸನ್ನ ಬಿಟ್ಟುಕೊಡದ ವಿರಾಟ್ ಸೇನೆ ಮಹತ್ವದ ಪಂದ್ಯಗಳಲ್ಲಿ ಸಿಡಿದೆದ್ದಿದೆ. ಇನ್ನು ತಂಡದ ಎಲ್ಲ ವಿಭಾಗವೂ ಸಾಂಘಿಕ ಪ್ರದರ್ಶನಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಅಲ್ಲದೇ ಮುಂದಿನ 3 ಪಂದ್ಯಗಳಲ್ಲೂ ದೊಡ್ಡ ಮಾರ್ಜಿನ್ ನಲ್ಲಿ ಗೆದ್ದು ಸೇಫ್ ಜೋನ್ ಗೆ ಎಂಟ್ರಿಕೊಡುವ ಹಂಬಲದಲ್ಲಿ ಕೊಹ್ಲಿಸೈನ್ಯವಿದೆ…

ಆರ್.ಅಶ್ವಿನ್ ನಾಯಕತ್ವದ ಪಂಜಾಬ್ ತಂಡ ಟೂರ್ನಿಯಲ್ಲಿ ಆಡಿರೋ 11 ಪಂದ್ಯಗಳಲ್ಲಿ 6 ರಲ್ಲಿ ಗೆದ್ದು 5 ರಲ್ಲಿ ಸೋತಿದೆ. ಅಲ್ಲದೇ ತಂಡದ ಬ್ಯಾಟಿಂಗ್ ಲೈನಪ್ ಕೂಡ ಬಲಾಢ್ಯವಾಗಿದ್ದು, ಎಂತಹುದೇ ಸಂದರ್ಭದಲ್ಲಿ ಬೇಕಾದ್ರು ಪಂದ್ಯದ ದಿಕ್ಕನ್ನ ಚೇಂಜ್ ಮಾಡುವ ಸಾಮರ್ಥ್ಯ ಹೊಂದಿದೆ. ಆದ್ರೆ ಕನ್ನಡಿಗ ಕೆ.ಎಲ್. ರಾಹುಲ್ ರನ್ನ ಹೊರತಪಡಿಸಿ ಉಳಿದೆಲ್ಲ ಆಟಗಾರರು, ಮಹತ್ವದ ಪಂದ್ಯಗಳಲ್ಲಿ ಘನಘೋರ ವೈಫಲ್ಯಕ್ಕೆ ತುತ್ತಾಗುತ್ತಿದ್ದಾರೆ…
ಇನ್ನು ಪಂಜಾಬ್ ತಂಡದ ಬೌಲಿಂಗ್ ಡಿಪಾರ್ಟ್ ಮೆಂಟ್ ಕೂಡ ದುರ್ಬಲವಾಗಿದ್ದು, ಹೆಚ್ಚು ರನ್ ಬಿಟ್ಟುಕೊಟ್ಟು ತಂಡದ ಸೋಲಿಗೂ ಪ್ರಮುಖ ಕಾರಣವಾಗ್ತಿದ್ದಾರೆ. ಇನ್ನು ನಾಯಕ ಆರ್.ಅಶ್ವಿನ್ ಕೂಡ ಹಳೆಯ ಮೊನಚನ್ನ ಕಳೆದುಕೊಂಡಿದ್ದು, ವಿಕೆಟ್ ಪಡೆಯಲು ಪರದಾಡುತ್ತಿದ್ದು, ಪ್ರೀತಿಪಡೆಗೆ ನುಂಗಲಾರದ ತುತ್ತಾಗಿದೆ…
ಒಟ್ಟಿನಲ್ಲಿ ಪ್ಲೇ ಆಫ್ ಕನಸಿಲ್ಲಿರೋ ಬೆಂಗಳೂರು ಹಾಗೂ ಪಂಜಾಬ್ ತಂಡಕ್ಕೆ ಇಂದಿನ ಪಂದ್ಯ ನಿರ್ಣಾಯಕವಾಗಿದೆ. ಹೀಗಾಗಿ ಉಭಯ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಿ ವಿಜಯಪತಾಕೆ ಹಾರಿಸಲು ಸಜ್ಜಾಗಿದೆ…

LEAVE A REPLY

Please enter your comment!
Please enter your name here