Home District ರೆಮ್‍ಡಿಸಿವರ್ ಇಂಜೆಕ್ಷನ್ ಅಕ್ರಮವಾಗಿ ಮಾರಾಟ ಮಾಡುತ್ತಿದ್ದವರ ಬಂಧನ

ರೆಮ್‍ಡಿಸಿವರ್ ಇಂಜೆಕ್ಷನ್ ಅಕ್ರಮವಾಗಿ ಮಾರಾಟ ಮಾಡುತ್ತಿದ್ದವರ ಬಂಧನ

ರೆಮ್‍ಡಿಸಿವರ್ ಇಂಜೆಕ್ಷನ್ ಅಕ್ರಮವಾಗಿ ಮಾರಾಟ ಮಾಡುತ್ತಿದ್ದವರ ಬಂಧನ

504
0

ಯಾದಗಿರಿ: ಕೊರೊನಾ ಸೋಂಕಿತರಿಗೆ ಅತೀ ಅವಶ್ಯಕವಾಗಿರುವ ರೆಮ್‍ಡಿಸಿವರ್ ಇಂಜೆಕ್ಷನ್ ಅಕ್ರಮವಾಗಿ ಮಾರಾಟ ಮಾಡುತ್ತಿದ್ದವರನ್ನು ಯಾದಗಿರಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ಯಾದಗಿರಿ ನಗರದ ನಿವಾಸಿಗಳಾದ ಚಿರಂಜೀವಿ, ಮಲ್ಲು, ರವಿಕುಮಾರ್ ಎಂದು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದೆ. ಹೀಗಾಗಿ ರೆಮ್ ಡಿಸಿವರ್ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು

ಕ್ರೈಂ ಸಿಪಿಐ ಸುನೀಲ್ ಮೂಲಿಮನಿ ನೇತೃತ್ವದಲ್ಲಿ ಎಸ್ಪಿ ಕಿಶೋರ್ ಬಾಬು ಅವರು ವಿಶೇಷ ತಂಡ ರಚನೆ ಮಾಡಿದ್ದಾರೆ. ರೆಮ್‍ಡಿಸಿವರ್ ಕಾಳಸಂತೆಯಲ್ಲಿ ಮಾರಟ ಮಾಡಲು ಮೂವರು ಯುವಕರು ಹೊರಟ ಬಗ್ಗೆ ಖಚಿತ ಮಾಹಿತಿ ಪಡೆದ ಸುನೀಲ್ ಮೂಲಿಮನಿ ತಂಡ ಯುವಕರು ಬೈಕಿನಲ್ಲಿ ರೆಮಿಡಿಸಿವರ್ ಇಟ್ಟಕೊಂಡು ಹೋಗುತ್ತಿದ್ದ ವೇಳೆ ದಾಳಿ ಮಾಡಿದ ಪೊಲೀಸರು, ಆರೋಪಿಗಳಿಂದ ಸದ್ಯ ಎರಡು ಬಾಟಲ್ ರೆಮ್‍ಡಿಸಿವರ್ ವಶಕ್ಕೆ ಪಡೆದಿದ್ದಾರೆ.

ರೆಮಿಡಿಸಿವರ್ ಯುವಕರ ಕೈ ಬಂದ ಬಗ್ಗೆ ಮತ್ತು ಯಾರಿಗೆ ಮಾರಾಟ ಮಾಡುತ್ತಿದ್ದರು ಎಂಬ ಬಗ್ಗೆ ತನಿಖೆ ಆರಂಭವಾಗಿದೆ. ಈ ಘಟನೆ ಯಾದಗಿರಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

VIAರೆಮ್‍ಡಿಸಿವರ್ ಇಂಜೆಕ್ಷನ್ ಅಕ್ರಮವಾಗಿ ಮಾರಾಟ ಮಾಡುತ್ತಿದ್ದವರ ಬಂಧನ
SOURCEರೆಮ್‍ಡಿಸಿವರ್ ಇಂಜೆಕ್ಷನ್ ಅಕ್ರಮವಾಗಿ ಮಾರಾಟ ಮಾಡುತ್ತಿದ್ದವರ ಬಂಧನ
Previous articleರಾಮಲಿಂಗಾರೆಡ್ಡಿ ಸರ್ಕಾರಕ್ಕೆ ನೀಡಿದ ಸಲಹೆಗಳೇನು ಗೊತ್ತೇ?; ಪ್ರಜಾ ಟಿವಿ ವಿಶೇಷ ವರದಿ
Next article‘ಡಿ ಬಾಸ್’ ತೋಟಕ್ಕೆ ಬಂದ ಗಣಪತಿ ಸಚ್ಚಿದಾನಂದ ಆಶ್ರಮದ ಗಿಳಿ!

LEAVE A REPLY

Please enter your comment!
Please enter your name here