ನಗರದ ಕಾನೂನುಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಲಾಗಿದೆ: ಸಿಎಂ ಬೊಮ್ಮಾಯಿ

ಬೆಂಗಳೂರು

ಬೆಂಗಳೂರು: ನಗರ ಕಾನೂನುಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್​ನಲ್ಲಿ ನಿನ್ನೆ ಆಯೋಜಿಸಿದ ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ಸೆಂಟರ್ ಆಫ್ ಎಕ್ಸಲೆನ್ಸ್ ಬಿಲ್ಡಿಂಗ್​ನ ಭೂಮಿ ಪೂಜಾ ಕಾರ್ಯ ನೆರವೇರಿಸಿ ಮಾತನಾಡಿದ ಅವರು, ಸುಲಭ ದರದಲ್ಲಿ ಮನೆ ನಿರ್ಮಾಣ ಸಾಧ್ಯವಾದರೆ ಲಕ್ಷಾಂತರ ಜನರಿಗೆ ಸಹಾಯವಾಗುತ್ತದೆ.

ಪರಿಸರ ಸ್ನೇಹಿ ಸಮುದಾಯ ಕಟ್ಟಡಗಳಿಗೆ ವಾಸ್ತುಶಿಲ್ಪಿಗಳು ಆದ್ಯತೆ ನೀಡಬೇಕು. ಪರಿಸರ ಸ್ನೇಹಿ ಚಿಂತನೆಯಾಗಬೇಕು ಎಂದರು. ಇಕೋ ಎಕನಾಮಿಕ್ಸ್ ಎಂಬ ಹೊಸ ಚಿಂತನೆ ಪ್ರಾರಂಭವಾಗಿದೆ. ಗ್ರಾಮೀಣ ಪ್ರದೇಶಗಳ ಯೋಜನೆ ಸಹ ಆಗಬೇಕು. ಸಾಮಾನ್ಯ ಜನರ ಜೀವನವನ್ನು ಸುಲಭವಾಗಿಸಿ, ಅವರ ಜೀವನ ಗುಣಮಟ್ಟ ಹೆಚ್ಚಿಸುವುದು ನಿಟ್ಟಿನಲ್ಲಿ ಸರ್ಕಾರ ಎಲ್ಲ ನೆರವು ಹಾಗೂ ಬೆಂಬಲ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Leave a Reply

Your email address will not be published.