Home District ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಗುಡುಗಿದ ಸಾ.ರಾ. ಮಹೇಶ್

ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಗುಡುಗಿದ ಸಾ.ರಾ. ಮಹೇಶ್

271
0
SHARE

ಮೈಸೂರು ಜಿಲ್ಲಾಡಳಿತದ ಒತ್ತಡದಿಂದ 24 ಜನ ಮೃತಪಟ್ಟಿದ್ದಾರೆ.
ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಸಾ.ರಾ.ಮಹೇಶ್ ಗಂಭೀರ ಆರೋಪ.
ಯಾರ ಒತ್ತಡಕ್ಕೆ ಈ ಜಿಲ್ಲಾಧಿಕಾರಿಯನ್ನು ಇಟ್ಟುಕೊಂಡಿದ್ದೀರೋ ಗೊತ್ತಿಲ್ಲ.
ಚಾಮರಾಜನಗರ- ಮೈಸೂರು ಜಿಲ್ಲಾಡಳಿತಗಳ ವ್ಯತ್ಯಾಸದಿಂದ ದುರ್ಘಟನೆ ನಡೆದಿದೆ.ಮೈಸೂರಿನಿಂದ ಸಕಾಲಕ್ಕೆ ಸಿಲಿಂಡರ್ ಪೂರೈಕೆ ಆಗಿಲ್ಲ.ಸದರನ್ ಗ್ಯಾಸ್‌ನಿಂದ ೨.೩೦ಕ್ಕೆ 90 ಸಿಲಿಂಡರ್ ಹೋಗಿದೆ‌.ಆದರೆ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿರುವಂತೆ 220 ಆಮ್ಲಜನಕ ಸಿಲಿಂಡರ್ ಪೂರೈಕೆ ಆಗಿಲ್ಲ.ಕಾಂಟ್ರಾಕ್ಟ್ ಇರೋದು ಚಾಮರಾಜನಗರ ಜಿಲ್ಲಾಸ್ಪತ್ರೆ, ಸದರನ್ ಮತ್ತು ಪದಕಿ ಗ್ಯಾಸ್ ಏಜೆನ್ಸಿಗಳ ನಡುವೆ ಕಳುಹಿಸಿಕೊಡಲು ನೀವು ಯಾರು ? 220 ಕಳುಹಿಸಿದ್ದೇವೆ ಅಂದರೆ ನಿಮ್ಮ ಕಂಟ್ರೋಲ್ ಇರುವುದನ್ನು ಒಪ್ಪಿಕೊಂಡಂತೆ ಆಯ್ತು. ನಿಮ್ಮ ಭೂ ವ್ಯವಹಾರಗಳಿದ್ದರೆ ಮಾಡಿಸಿಕೊಳ್ಳಿ. ಆದರೆ ಮೈಸೂರಿನಂತಹ ಪ್ರಮುಖ ಜಿಲ್ಲೆಗೆ ಪ್ರಾಮಾಣಿಕ, ಹಿರಿಯ ಅಧಿಕಾರಿಯನ್ನು ನೇಮಿಸಿ. ನಿನ್ನೆ ಚಾಮರಾಜನಗರದಲ್ಲಿ ದುರಂತ ಉಂಟಾಗಿದೆ. ಮೈಸೂರಿನಲ್ಲೂ ಅದ್ವಾನಗಳು ಶುರು ಆಗಿವೆ. ದಯವಿಟ್ಟು ಕೋವಿಡ್ ನಿರ್ವಹಣೆವಾಗಿ ಬೇರೊಬ್ಬ ಅಧಿಕಾರಿಯನ್ನು ನೇಮಿಸಿ. ಶಾಸಕ ಸಾ.ರಾ.ಮಹೇಶ್ ಸುದ್ದಿಗೋಷ್ಠಿ.

ಸಚಿವರು ಹೇಳಿದ್ದಾರೆ ಮೂರು ಜನ ಮಾತ್ರ ಆಕ್ಸಿಜನ್ ಸಾವು ಅಂತ.
ಹಾಗಿದ್ರೆ ಅದು ಸಾವು ಅಲ್ಲವಾ ಸ್ವಾಮಿ? ಮೊದಲು ಡ್ರಗ್ ಕಂಟ್ರೋಲ್‌ರ ವಿರುದ್ಧ ಕ್ರಮ ತಗೊಳ್ಳಿ. ಇದು ಜನರ ಜೀವನದ ಪ್ರಶ್ನೆ. ದಯವಿಟ್ಟು ಉದ್ಧಟತನ ಅಧಿಕಾರಿಯನ್ನು ಇಟ್ಕೊಂಡು ಆಟ ಆಡಬೇಡಿ. ನಿಮ್ಮ ಭೂ ವ್ಯವಹಾರ ಇದ್ದರೆ ಇಂತಹ ಜಿಲ್ಲಾಧಿಕಾರಿ ಇಟ್ಟುಕೊಳ್ಳಿ. ಮೈಸೂರಿನಲ್ಲಿ ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಸಾ.ರಾ. ಮಹೇಶ್ ಆಕ್ರೋಶ.

LEAVE A REPLY

Please enter your comment!
Please enter your name here