Home Cinema ಬಾರದಲೋಕಕ್ಕೆ ಪಯಣ ಬೆಳೆಸಿದ ‘ಸರೋಜ್ ಖಾನ್ ; ಮದರ್ ಆಫ್ ಡ್ಯಾನ್ಸ್’ ಇನ್ನಿಲ್ಲ..!

ಬಾರದಲೋಕಕ್ಕೆ ಪಯಣ ಬೆಳೆಸಿದ ‘ಸರೋಜ್ ಖಾನ್ ; ಮದರ್ ಆಫ್ ಡ್ಯಾನ್ಸ್’ ಇನ್ನಿಲ್ಲ..!

345
0
SHARE

ಮುಂಬೈ- ಬಾಲಿವುಡ್‌ನ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಅನೇಕ ದಿನಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸರೋಜ್ ಖಾನ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಜೂನ್.17ಕ್ಕೆ ಬಾಂದ್ರಾದ ಗುರುನಾನಕ್ ಆಸ್ಪತ್ರೆಗೆ ಸರೋಜ್‌ರನ್ನ ದಾಖಲು ಮಾಡಲಾಗಿತ್ತು.

ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 2;30ಕ್ಕೆ ಸರೋಜ್ ಖಾನ್ ಇಹಲೋಕ ತ್ಯಜಿಸಿದ್ದಾರೆ. ಸರೋಜ್ ಖಾನ್ ಬಾಲಿವುಡ್‌ನಲ್ಲಿ ತಮ್ಮ ವಿಭಿನ್ನ ನೃತ್ಯ ಸಂಯೋಜನೆಯಲ್ಲಿಯೇ ಖ್ಯಾತಿಯನ್ನ ಗಳಿಸಿದ್ದರು. ‘ಮದರ್ ಆಫ್ ಡ್ಯಾನ್ಸ್’ ಎನ್ನುವ ಬಿರುದು ಸರೋಜ್ ಖಾನ್ ಪಾಲಾಗಿತ್ತು.

ಬಾಲಿವುಡ್‌ನಲ್ಲಿ ಸುಮಾರು 42 ವರ್ಷಗಳ ಕಾಲ ಸಕ್ರಿಯರಾಗಿದ್ದ ಸರೋಜ್ ಖಾನ್ ಎರಡು ಸಾವಿರಕ್ಕೂ ಹೆಚ್ಚು ಹಾಡುಗಳನ್ನ ಡ್ಯಾನ್ಸ್ ಕಂಪೋಸ್ ಮಾಡಿದ್ದಾರೆ. ಮಿಸ್ಟರ್.ಇಂಡಿಯಾ, ಡರ್, ಭಾಜಿಗರ್, ಹಮ್ ದಿಲ್ ದೇ ಚುಕೇ ಸನಮ್, ವೀರ್-ಝರಾ, ದೇವ್‌ದಾಸ್ ಸೇರಿದಂತೆ ಹಲವು ಸೂಪರ್‌ಹಿಟ್ ಸಿನಿಮಾಗಳಲ್ಲಿ ಸರೋಜ್ ಖಾನ್ ಕೊಡುಗೆಯಿತ್ತು. ನಟಿ ಮಾಧುರಿ ದೀಕ್ಷಿತ್ ಸಿನಿಬೆಳವಣಿಗೆಯಲ್ಲೂ ಸರೋಜ್ ಖಾನ್ ಪಾತ್ರ ಬಹಳ ಮುಖ್ಯವಾಗಿತ್ತು.

‘ಧಕ್ ಧಕ್ ಕರನೇ ಲಾಗ’ ಹಾಡು 90ರ ದಶಕದ ಹಾಟ್ ಫೇವರಿಟ್ ಎನಿಸಿಕೊಂಡಿತ್ತು. ಸರೋಜ್ ಖಾನ್ ತಮ್ಮ ಪತಿ ಸೋಹನ್ ಲಾಲ್ ಹಾಗೂ ಮೂರು ಮಕ್ಕಳನ್ನ ಅಗಲಿದ್ದಾರೆ. ಇಂದು ಸಂಜೆ ಮುಂಬೈನ ಮಲಾಡ್ ಚೌಕಿಯಲ್ಲಿ ಸರೋಜ್ ಖಾನ್ ಅಂತ್ಯಕ್ರಿಯೆ ನಡೆಯಲಿದೆ. ಅಕ್ಷಯ್ ಕುಮಾರ್, ಅಮಿತಾಭ್ ಬಚ್ಚನ್ ಸೇರಿದಂತೆ ಬಾಲಿವುಡ್ ಸೆಲೆಬ್ರೆಟಿಗಳು ಸರೋಜ್ ಅಗಲಿಕೆಗೆ ಸಂತಾಪ ಸೂಚಿಸುತ್ತಿದ್ದಾರೆ.

 

LEAVE A REPLY

Please enter your comment!
Please enter your name here